ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದೇವಸ್ಥಾನ ತಸ್ತೀಕ ಮೊತ್ತ ಹೆಚ್ಚಳ: ಅಭಿನಂದನೆ

Lingaraj Badiger
Updated On : 11 Jul 2013, 11:36 am

ಹಾನಗಲ್ಲ: ದೇವಸ್ಥಾನಗಳ ಅರ್ಚಕರ, ಆಗಮಿಕರ, ಉಪಾದಿವಂತರ ತಸ್ತೀಕ ಮೊತ್ತವನ್ನು ಸರ್ಕಾರ ರು. 24 ಸಾವಿರಕ್ಕೆ ಹೆಚ್ಚಿಸಿರುವುದು ಸಂತಸದ ಸಂಗತಿಯಾಗಿದ್ದು, ಅಖಿಲ ಕರ್ನಾಟಕ ದೇವಸ್ಥಾನಗಳ ಅರ್ಚಕರ, ಆಗಮಿಕರ, ಉಪಾಧಿವಂತರ ಒಕ್ಕೂಟದ ಅಧ್ಯಕ್ಷ ಕೆಎಸ್‌ಎನ್ ದೀಕ್ಷಿತ, ಮುಜರಾಯಿ ಸಚಿವರಿಗೆ, ಹಾವೇರಿ ಜಿಲ್ಲಾಧ್ಯಕ್ಷ ರುದ್ರಪ್ಪ ಪೂಜಾರ ಅಭಿನಂದಿಸಿದ್ದಾರೆ. ಸರ್ಕಾರ ವರ್ಷಾಸನ, ತಸ್ತೀಕ ಎಂದು ಅರ್ಚಕರಿಗೆ ಹಣ ನೀಡುತ್ತಿತ್ತು. ಖರ್ಚು ವೆಚ್ಚದ ಕುರಿತು ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿತ್ತು. ಹೋರಾಟದ ಫಲವಾಗಿ ತಸ್ತೀಕ ಮೊತ್ತವನ್ನು ವಾರ್ಷಿಕ ರು. 24 ಸಾವಿರಕ್ಕೆ ಹೆಚ್ಚಿಸಿದ್ದು, ಸಂತಸ ತಂದಿದೆ ಎಂದು ಪೂಜಾರ ತಿಳಿಸಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement