ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅರ್ಚಕರಿಂದ ಪ್ರತಿಭಟನೆ

Lingaraj Badiger
Updated On : 12 Jul 2013, 11:49 am

ಬ್ಯಾಡಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘವು ಡಾ.ಶಾಂತವೀರಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಂಗಳೂರಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಎದುರಿಗೆ ಜು. 23ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಕುರಿತು ಅರ್ಚಕರ ಸಂಘದ ಜಿಲ್ಲಾಧ್ಯಕ್ಷ ರುದ್ರಯ್ಯ ಸಾಲಿಮಠ ಪ್ರಕಟಣೆಯೊಂದನ್ನು ನೀಡಿದ್ದು ಜಿಲ್ಲೆಯ ಎಲ್ಲ ಅರ್ಚಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮರ ನೆಟ್ಟು ಪ್ರಕೃತಿ ರಕ್ಷಿಸಿ
ಶಿಗ್ಗಾಂವಿ:  ಮಾನವನ ಉಳಿವಿಗೆ ಅಪಾರ ಕೊಡುಗೆ ನೀಡುತ್ತಿರುವ ಮರ-ಗಿಡಗಳನ್ನು ನಾಶ ಮಾಡದೇ, ಇನ್ನೂ ಹೆಚ್ಚಾಗಿ ಮರಗಳನ್ನು ಬೆಳೆಸುವ ಮೂಲಕ ಪ್ರಕೃತಿ ಉಳಿಸಬೇಕು ಎಂದು ಜಿಪಂ ಸದಸ್ಯೆ ಸರೋಜವ್ವ ಆಡೀನ ಹೇಳಿದರು. ತಾಲೂಕಿನ ಕೋಣನಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸ್ನೇಹಜೀವಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹೊಸೂರು ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ದುಂಡಸಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಜರುಗಿದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರಭು ಮಾಸನಕಟ್ಟಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜತೆಗೆ ಒಂದು ಗಿಡ ನೆಟ್ಟು ಅದಕ್ಕೆ ನೀರು ಹಾಗೂ ಅದರ ಸುತ್ತಲಿನ ಕಸ ತೆಗೆದು ಅದರ ಬೆಳವಣಿಗೆಗೆ ಪ್ರಯತ್ನಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಮಾರುತಿ ಚವ್ಹಾಣ್, ಎಸ್‌ಇಆರ್‌ಡಿ ಸಂಸ್ಥೆ ಅಧ್ಯಕ್ಷ ಸಿ.ಎಚ್. ಹಿತ್ತಲಮನಿ, ವನಪಾಲಕ ಎಮ್.ಡಿ. ಬಾಗೇವಾಡಿ, ಊರ ಪ್ರಮುಖರಾದ ವಿರೂಪಾಕ್ಷಪ್ಪ ಆಡಿನ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಂ. ಸುಲ್ತಾನ್, ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಎಸ್.ಟಿ. ಬಾಳಿಕಾಯಿ, ಎನ್.ಎಫ್. ಭಜಂತ್ರಿ, ಎಚ್.ಡಿ. ಕುಂಕೂರ, ಸಹದೇವಪ್ಪ ದಾವಣಗೇರಿ, ಅಶೋಕ ಶಿಗ್ಗಾಂವಿ, ವಿಠ್ಠಲ ಪೂಜಾರ, ನಿಂಬವ್ವ ಕಳ್ಳಿಮನಿ ಸಭೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಬಿ.ಎಸ್. ಬಸನಾಳ ಸ್ವಾಗತಿಸಿದರು. ಎಸ್.ಎಸ್. ಹಿರೇಮಠ ನಿರೂಪಿಸಿದರು.
ನಾಳೆ ಆಹಾರ ಮೇಳ
ಬ್ಯಾಡಗಿ: ದೇಶಿ ಕೃಷಿಕರ ಬಳಗ ಹಾಗೂ ವಿಕಾರ್ಡ್ ಸಂಸ್ಥೆ ರಾಣಿಬೆನ್ನೂರ, ಆಯುರ್ವೇದ ವೈದ್ಯ ಒಕ್ಕೂಟ ಹಾಗೂ ಸಹಜ ಸಮೃದ್ಧ ಬೆಂಗಳೂರು ಆಶ್ರಯದಲ್ಲಿ ಜು.13ರಂದು ಮುಂಜಾನೆ 9ಕ್ಕೆ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆರೋಗ್ಯ ಮತ್ತು ಆಹಾರ ಮೇಳ ಆಯೋಜಿಸಿದೆ. ಮೇಳದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಸಾವಯವ ಆಹಾರೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ದೇಶಿಯ ಕೃಷಿ ಕೇಂದ್ರ ಬಳಗದ ಚನ್ನಬಸಪ್ಪ ಕೊಂಬಳಿ ಮೊ: 98458 90411 ಅಥವಾ ಶ್ರೇಣಿಕ್ ರಾಜ್ ಮೊ: 99806 79824 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement