ಏರ್ಮನ್ ರ್ಯಾಲಿಗೆ ತರಬೇತಿ ಶಿಬಿರ
ಹಾವೇರಿ: ಶೇ. 50 ಅಂಕಗಳೊಂದಿಗೆ ಪಿಯುಸಿ (ವಿಜ್ಞಾನ) ಅಥವಾ 3 ವರ್ಷದ ಡಿಪ್ಲೊಮಾ ತೇರ್ಗಡೆಯಾದ ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ 2013ನೇ ಜುಲೈ 31 ಮತ್ತು ಆ. 1ರಂದು ಕೊಪ್ಪಳದಲ್ಲಿ ಗ್ರುಪ್- ಏರ್ಮನ್ ಹುದ್ದೆ ಭರ್ತಿಗಾಗಿ ನೇಮಕಾತಿ ರ್ಯಾಲಿನಡೆಯಲಿದೆ.
ಈ ರ್ಯಾಲಿಯಲ್ಲಿ ಭಾಗವಹಿಸುವಂತಹ ಅಭ್ಯರ್ಥಿಗಳಿಗೆ ಹಾವೇರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ 22 ಜುಲೈ, 2013ರಿಂದ 27 ಜುಲೈ, 2013ರ ವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಹಳೆ ಜಿಲ್ಲಾ ಪಂಚಾಯಿತಿ ಕಟ್ಟಡ) ಹಾವೇರಿ ಇಲ್ಲಿ ಉಚಿತ ಪರೀಕ್ಷಾಪೂರ್ವ ತರಬೇತಿ ಶಿಬಿರ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.
ಈ ಹುದ್ದೆಗೆ ರು. 21,414-00 ವೇತನ, ವಸತಿ, ಬಟ್ಟೆ, ವೈದ್ಯಕೀಯ, ರೇಷನ್, ಕ್ಯಾಂಟೀನ್ ಸೌಲಭ್ಯಗಳಿವೆ. ರ್ಯಾಲಿಯಲ್ಲಿ ಭಾಗವಹಿಸುವ ಹಾಗೂ ತರಬೇತಿಗೆ ಹಾಜರಾಗಲಿಚ್ಛಿಸುವ ಅಭ್ಯರ್ಥಿಗಳು 22 ಜುಲೈ, 2013ರ ಬೆಳಗ್ಗೆ 11ಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, (ಹಳೆ ಜಿಲ್ಲಾ ಪಂಚಾಯಿತಿ ಕಟ್ಟಡ) ಹಾವೇರಿ ಇಲ್ಲಿ ಹಾಜರಿರಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು (ದೂರವಾಣಿ ಸಂಖ್ಯೆ: 08375-249291) ಸಂಪರ್ಕಿಸಬಹುದಾಗಿದೆ.