ಚೆನ್ನೈ, ತಿರುಪತಿಗೆ ಸಾರಿಗೆ ಸೌಲಭ್ಯ
ಹಾವೇರಿ: ಹಾವೇರಿ ಜಿಲ್ಲಾ ಕೇಂದ್ರದಿಂದ ಚೆನ್ನೈ ಹಾಗೂ ತಿರುಪತಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಹಾವೇರಿಯಲ್ಲಿ ಬೆಳಗಾವಿ-ಚೆನ್ನೈ ಹಾಗೂ ರಾಣಿಬೆನ್ನೂರಿನಲ್ಲಿ ಬೆಳಗಾವಿ ತಿರುಪತಿ ವೋಲ್ವೋ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದ್ದು, ಹಾವೇರಿ ಹಾಗೂ ರಾಣಿಬೆನ್ನೂರು ಬಸ್ ನಿಲ್ದಾಣಗಳ ಅವತಾರ್ ಕೇಂದ್ರಗಳಲ್ಲಿ ರಿಜರ್ವೇಶನ್ ಸಹ ಮಾಡಿಸಬಹುದೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈ ಸಾರಿಗೆ ವೇಳಾಪಟ್ಟಿ: ಬೆಳಗಾವಿ ಬಿಡುವ ವೇಳೆ ಮಧ್ಯಾಹ್ನ 12.15, ಚೆನ್ನೈ ತಲುಪುವ ವೇಳೆ ಬೆಳಗ್ಗೆ 4 ಗಂಟೆ(ಮಾರ್ಗ ಬೆಂಗಳೂರು). ಹಾವೇರಿ ಬಿಡುವ ವೇಳೆ ಮಧ್ಯಾಹ್ನ 15 ಗಂಟೆ ಹಾಗೂ ಚೆನ್ನೈ ಬಿಡುವ ವೇಳೆ ಮಧ್ಯಾಹ್ನ 13.15. ಬೆಳಗಾವಿ ತಲುಪುವ ವೇಳೆ ಬೆಳಗ್ಗೆ 5.45.
ತಿರುಪತಿ ಸಾರಿಗೆ ವೇಳಾಪಟ್ಟಿ: ಬೆಳಗಾವಿ ಬಿಡುವ ವೇಳೆ ಮಧ್ಯಾಹ್ನ 13.13. ತಿರುಪತಿ ತಲುಪುವ ವೇಳೆ ಬೆಳಗ್ಗೆ 12.45 (ಮಾರ್ಗ-ಬೆಂಗಳೂರು). ರಾಣಿಬೆನ್ನೂರು ಬಿಡುವ ವೇಳೆ ಸಂಜೆ 17-30. ತಿರುಪತಿ ಬಿಡುವ ವೇಳೆ ಮಧ್ಯಾಹ್ನ 13.15. ಬೆಳಗಾವಿ ತಲುಪುವ ವೇಳೆ ಬೆಳಗ್ಗೆ 8.15.
ಸುತಾರ, ಹೊಂಬರಡಿ ಆಯ್ಕೆ
ರಾಣಿಬೆನ್ನೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಇಲ್ಲಿನ ಶಿಕ್ಷಕರ ಸಂಘದ ಹೋರಾಟ ಸಮಿತಿ ಸದಸ್ಯರಾದ ಎಚ್.ಎಂ. ಸುತಾರ ಮತ್ತು ಆರ್.ಡಿ. ಹೊಂಬರಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.