ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಟ್ರಾಫಿಕ್ ಸಮಸ್ಯೆ ನೀಗಿಸಿ: ಶಿವಕುಮಾರ

Lingaraj Badiger
Updated On : 18 Jul 2013, 11:57 am

ಶಿಗ್ಗಾಂವಿ: ರಸ್ತೆ ಪಕ್ಕದಲ್ಲಿರುವ ಅಂಗಡಿಗಳ ಮುಂದೆ ನಿಲ್ಲುವ ಬೈಕ್ ಸರದಿ ಇನ್ನಷ್ಟು ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಿವಕುಮಾರ ಹೇಳಿದರು.
ಬಾರಿ ಗಾತ್ರದ ವಾಹನಗಳು ಇದೇ ರಸ್ತೆ ಮೇಲೆ ಓಡಾಡುತ್ತಿರುವುದರಿಂದ ಇಲ್ಲಿ ಓಡಾಡುವ ಪಾದಾಚಾರಿಗಳು, ಬೇರೆ ರಸ್ತೆ ಹಿಡಿದು ಹೋಗುವ ಪ್ರಸಂಗವಿದೆ. ಬೈಕ್, ತ್ರಿಚಕ್ರ ವಾಹನ ಸಂಚಾರಕ್ಕೆ ಇಲ್ಲಿ ಅವಕಾಶ ಕಲ್ಪಿಸಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಈ ರಸ್ತೆ ಮೇಲೆ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್, ಟೆಂಪೋ ಸೇರಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಕೊಡಬೇಡಿ, ಅಕಸ್ಮಿಕ ಸಂಚರಿಸುವ ವಾಹನ ಚಾಲಕರಿಗೆ ದಂಡ ವಿಧಿಸಿದಲ್ಲಿ ವಾಹನ ಸಂಚಾರ ಕಡಿಮೆಗೊಳ್ಳುತ್ತದೆ ಎಂದು ಪುರಸಭೆ ಸದಸ್ಯ ಸುಭಾಸ ಚವ್ಹಾಣ, ಜಯಣ್ಣ ಹೆಸರೂರು ಮತ್ತಿತರರು ಮನವಿ ಮಾಡಿದರು.
ನಮ್ಮೂರಲ್ಲಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕುಡಕರ ಸಂಖ್ಯೆಯೂ ಹೆಚ್ಚಿದೆ. ಇನ್ಮುಂದೆ ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡದಂತೆ ಕ್ರಮಕೈಗೊಂಡು ಕುಡಿತಕ್ಕೆ ಕಡಿವಾಣ ಹಾಕುವಂತೆ ತಾಲೂಕಿನ ನೀರಲಕಟ್ಟಿ ಲಂಬಾಣಿ ತಾಂಡದ ಅರ್ಚಪ್ಪ ಮನವಿ ಮಾಡಿದರು.
ದೂರಿದ ಲಮಾಣಿ, ಸಾರಾಯಿ ಮಾರಾಟ ನಿಲ್ಲಬೇಕು. ಕುಡಕರ ಸಂಖ್ಯೆಯೂ ಕಡಿಮೆಗೊಳ್ಳುತ್ತದೆ. ಅಶಾಂತಿ ವಾತಾವರಣ ದೂರಾಗುತ್ತದೆ. ಶೀಘ್ರ ಕ್ರಮಕೈಗೊಂಡು ಸಭ್ಯ ಸಾರ್ವಜನಿಕರಿಗೆ ನೆಮ್ಮದಿ ಕಲ್ಪಿಸುವಂತೆ ಕೇಳಿಕೊಂಡರು. ಟ್ರಾಫಿಕ್ ಸಮಸ್ಯೆ ಬಂಕಾಪುರದಲ್ಲಿದೆ. ಬಸ್ ನಿಲ್ದಾಣ ಮುಂದೆ ಟೆಂಪೋ ಚಾಲಕರ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಬಸ್ ನಿಲ್ದಾಣಕ್ಕೆ ಹೋಗುವುದೇ ದುಸ್ತರವಾಗಿದೆ. ನಿಲ್ದಾಣ ಹತ್ತಿರ ಇಬ್ಬರು ಪೊಲೀಸ್ ಸಿಬ್ಬಂದಿ ನೇಮಕ ಮಾಡಿ ಎಂದು ಅಶೋಕ ಪಟ್ಟಣಶೆಟ್ಟಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಲ್ಲಿ ಮನವಿ ಮಾಡಿದರು.
ಬಂಕಾಪುರದಲ್ಲಿ ಪೊಲೀಸ್ ಠಾಣೆ ಸಣ್ಣದಾಗಿದೆ. ಅಲ್ಲಿರುವ ಸಿಬ್ಬಂದಿ ವಾಸ ಮಾಡಲು ಕೊಠಡಿಗಳಿಲ್ಲ. ಹೀಗಾಗಿ ವಿಸ್ತಾರವಾಗಿರುವ ಹೆದ್ದಾರಿ ಪಕ್ಕ ಖಾಲಿರುವ ಪ್ರವಾಸಿ ಮಂದಿರವನ್ನು ತಮ್ಮ ಇಲಾಖೆಗೆ ಬಳಿಸಿಕೊಳ್ಳುವಂತೆ ಟಿಎಪಿಎಂಸ್ ಸೊಸೈಟಿ ಅಧ್ಯಕ್ಷ ಲಿಂಗರಾಜ ಹಳವಳಿ ಸಲಹೆ ನೀಡಿದರು. ಅತಿಯಾದ ವಾಹನ ಸಂಚಾರ ಕಡಿವಾಕ್ಕೆ ಕ್ರಮಕೈಗೊಳ್ಳಿ ಎಂದು ಮಹಾರುದ್ರಪ್ಪ ವಡ್ಡವಟ್ಟಿ ಕೇಳಿಕೊಂಡರು.
ಕೆಎಸ್‌ಆರ್‌ಪಿ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವಿಂದ್ರಪ್ಪ, ಡಿವೈಎಸ್ಪಿ ಕೆ.ಎಸ್. ಬೆಳಬ್ಬಿ ಪ್ರಾಸ್ತಾವಿಕ ಮಾತನಾಡಿದರು. ಸಿಪಿಐ ಬಿ.ಬಿ. ಪಾಟೀಲ, ಪಿಎಸ್‌ಐ ಆರ್. ದೇಸಾಯಿ, ಸುರೇಶ ಸಗರಿ ಸುಭಾಸ ಚವ್ಹಾಣ, ಜಯ್ಯಣ್ಣ ಹೆಸರೂರು, ಅಶೋಕ ಶೆಟ್ಟರ್, ಬಸವರಾಜ ನಾರಾಯಣಪುರ ಉಪಸ್ಥಿತರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement