ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ತರಬೇತಿಗೆ ಅರ್ಜಿ ಆಹ್ವಾನ

Lingaraj Badiger
Updated On : 18 Jul 2013, 11:50 am

ಹಾವೇರಿ: ಧಾರವಾಡದ ಸಿಡಾಕ್, ಹಾವೇರಿ ಜಿಲ್ಲಾ ಕೈಗಾರಿಕಾ ಕೇಂದ್ರ, ಭಾರತ ಸರ್ಕಾರದ ಎಂಎಸ್‌ಎಂಇ ಮಂತ್ರಾಲಯ ಹಾಗೂ ಹೈದರಾಬಾದ್ ನಿಮ್ಸ್ಮೆ ಆಶ್ರಯದಲ್ಲಿ ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಿಗಾಗಿ 18 ದಿನಗಳ ಉಚಿತ ಲೆದರ್ ಪ್ರೋಡಕ್ಟ್ಸ್ ಕುರಿತ ಕೌಶಲ್ಯ ಉದ್ಯಮಶೀಲತಾ ತರಬೇತಿಯನ್ನು ಜುಲೈ ತಿಂಗಳ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವೀರಣ್ಣ ಎಸ್.ಎಚ್ ತಿಳಿಸಿದ್ದಾರೆ. ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ 18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಒಂದು ಬಿಳಿ ಹಾಳೆಯಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಿದ ಅರ್ಜಿಯನ್ನು ಜು. 27ರೊಳಗಾಗಿ ಜಿಲ್ಲಾ ಉಪನಿರ್ದೇಶಕರು, ಸಿಡಾಕ್ ಕೇರ್ ಆಫ್ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ರೂಮ್ ನಂ. 24, ಬಿ ಬ್ಲಾಕ್, ಜಿಲ್ಲಾ ಆಡಳಿತ ಭವನ, ದೇವಗಿರಿ, ಹಾವೇರಿ-581110 (ಮೊ: 9880347072) ಅವರಿಗೆ ಸಲ್ಲಿಸಬೇಕೆಂದು ತಿಳಿಸಿದ್ದಾರೆ.
ಅಧಿಕಾರ ಸ್ವೀಕಾರ
ಹಾವೇರಿ: ನಗರದ ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕರಾಗಿ ಡಾ೤ ಬಸವರಾಜ ಎಸ್. ಅಂಗಡಿ ಅವರು ಜು. 15ರಂದು ಅಧಿಕಾರ ಸ್ವೀಕಾರ ಮಾಡಿದ್ದಾರೆಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಕುಂದುಕೊರತೆ ವಿಚಾರಣೆ
ಹಾವೇರಿ: ಜಿಲ್ಲೆಯ ಮಾಜಿ ಸೈನಿಕರ, ಅವರ ಅವಲಂಬಿತರ ಅಹವಾಲುಗಳನ್ನು ಸ್ವೀಕರಿಸಲು, ಶಿಷ್ಯವೇತನ, ಪುಸ್ತಕದ ಅನುದಾನ ಅರ್ಜಿಗಳನ್ನು ವಿತರಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಿಬ್ಬಂದಿ ಜು. 18ರಂದು ಬೆಳಗ್ಗೆ 10 ಗಂಟೆಗೆ ಹಾವೇರಿ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ಮೂಲಸೇನಾ ದಾಖಲೆಗಳು ಮತ್ತು ಇಲಾಖೆಯಿಂದ ನೀಡಿದ ಗುರುತಿನ ಚೀಟಿಯೊಂದಿಗೆ ಅವರನ್ನು ಭೇಟಿಯಾಗಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 0836-2440176ಗೆ ಸಂಪರ್ಕಿಸಬಹುದೆಂದು ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸೂಪರ್ ಫಾಸ್ಟ್ ಸಾರಿಗೆ
ಹಾವೇರಿ: ಪ್ರಯಾಣಿಕರ ಕೋರಿಕೆಯ ಮೇರೆಗೆ ಹುಬ್ಬಳ್ಳಿ-ದಾವಣಗೆರೆ ಮಧ್ಯೆ ಸಂಚರಿಸುವ ಸೂಪರ್ ಫಾಸ್ಟ್ ಸಾರಿಗೆಗಳಲ್ಲಿ ಹಾವೇರಿಯಿಂದ ದಾವಣಗೆರೆ ಸಂಚರಿಸುವ ಪ್ರಯಾಣಿಕರಿಗೆ, ಹಾವೇರಿ ನಗರದ ಹೊರವಲದ ಆರ್‌ಟಿಓ ಕಚೇರಿ, ಲಕಮಾಪುರ ಕ್ರಾಸ್ ಹಾಗೂ ಎಲ್‌ಐಸಿ ನಿಲುಗಡೆ ಸ್ಥಳಗಳಿಂದ ನೇರವಾಗಿ ದಾವಣಗೆರೆಗೆ, ಕೆಇಬಿಯ ನಿಲುಗಡೆ ಸ್ಥಳದಿಂದ ನೇರವಾಗಿ ಹುಬ್ಬಳ್ಳಿಗೆ ಪ್ರಯಾಣಿಸುವ ಪ್ರಯಾಣಿಕರು ಸೂಪರ್ ಫಾಸ್ಟ್ ಸಾರಿಗೆಗಳಲ್ಲಿ ಪ್ರಯಾಣಿಸಲು ಸದಾವಕಾಶ ಕಲ್ಪಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಮೇಲೆ ತಿಳಿಸಿದ ಎಲ್ಲ ನಿಲುಗಡೆಗಳಿಂದ ದಾವಣಗೆರೆ ಹಾಗೂ ಹುಬ್ಬಳ್ಳಿ ಕಡೆಗೆ ಹೋಗುವ ಪ್ರಯಾಣಿಕರು ಹೆಚ್ಚುವರಿಯಾಗಿ ರು. 5ಗಳನ್ನು ಭರಿಸಬೇಕಾಗುವುದು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement