ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಂಡಳಿಗೆ ರು. 5 ಕೋಟಿ: ಅಭಿನಂದನೆ

Lingaraj Badiger
Updated On : 19 Jul 2013, 12:20 pm

ರಾಣಿಬೆನ್ನೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ವಿಶ್ವಕರ್ಮ ಸಮಾಜಾಭಿವೃದ್ಧಿ ಹಾಗೂ ಸಮಾಜದ ಕುಶಲಕರ್ಮಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ ಮಂಡಳಿಯನ್ನು ಸ್ಥಾಪಿಸುವುದಕ್ಕಾಗಿ ರು. 5 ಕೋಟಿ ಮಿಸಲಿರಿಸಿರುವ ಮುಖ್ಯಮಂತ್ರಿಗಳನ್ನು ಹಾಗೂ ಸಚಿವ ಸಂಪುಟದ ಎಲ್ಲಾ ಮಂತ್ರಿ ಮಹೋದಯರು-ಶಾಸಕರಿಗೆ ಅಭಿನಂದಿಸಿರುವುದಾಗಿ ತಾಲೂಕು ವಿಶ್ವಕರ್ಮ ಸಮಾಜದ ಪ್ರಕಟಣೆ ತಿಳಿಸಿದೆ.
ನಗರದ ಕುರುಬಗೇರಿ ಕ್ರಾಸ್ ಹತ್ತಿರವಿರುವ ಮೌನೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಸೇರಿದ್ದ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವಿಶ್ವಕರ್ಮ ಸಮಾಜ ಬಾಂಧವರ ಸಭೆ ಅಧ್ಯಕ್ಷತೆಯನ್ನು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ಎನ್. ಅರ್ಕಾಚಾರ್ ವಹಿಸಿದ್ದರು. ಈ ಸಂದರ್ಭ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಕಾಲದಿಂದಲು ಕುಶಲ ಕರ್ಮಿಗಳಾಗಿರುವ ವಿಶ್ವಕರ್ಮ ಸಮಾಜದವರ ಏಳ್ಗೆಗಾಗಿ ಸರ್ಕಾರ ಶ್ರಮಿಸದಿರುವ ಕಾರಣ ನಾವು ಹಿಂದುಳಿದಿದ್ದೆವೆ. ಹಿಂದುಳಿದಿರುವ ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ದುಡಿಯುವ ರೈತರಿಗೆ ಸಹಕಾರಿಯಾಗಿರುವ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಮತ್ತು ದೇಶದ ಕುಶಲ ಕರ್ಮಿಗಳಲ್ಲಿ ಒಬ್ಬರಾಗಿರುವ ವಿಶ್ವಕರ್ಮ ಸಮಾಜದ ಹೆಸರಿನಲ್ಲಿ ಮಂಡಳಿಯನ್ನು ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯನವರು ರು. 5 ಕೋಟಿ ಮೀಸಲಿರಿಸಿರುವುದಕ್ಕೆ ರಾಜ್ಯದ ಸಮಸ್ತ ವಿಶ್ವಕರ್ಮಿಗಳ ಪರ ಅಭಿನಂದಿಸಿರುವುದಾಗಿ ಅರ್ಕಾಚಾರ್ ತಿಳಿಸಿದರು. ಮೌನೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಜಕಣಾಚಾರ್ ಅರ್ಕಾಚಾರ್, ಖಜಾಂಚಿ ಬಸವರಾಜ ಬಡಿಗೇರ, ವಿಶ್ವಕರ್ಮ ಸಮಾಜಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ವಿಠ್ಠಲಾಚಾರ್ ಬಡಿಗೇರ, ತಾಲೂಕು ವಿಶ್ವಕರ್ಮ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ನಿರ್ದೇಶಕ ಮಲ್ಲಪ್ಪ ಕಮ್ಮಾರ, ಗೌರಮ್ಮ ಕಮ್ಮಾರ, ಸಂಘದ ಕಾರ್ಯದರ್ಶಿ ಫಕ್ಕಿರೇಶ ಬಡಿಗೇರ ಮುಖ್ಯಮಂತ್ರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement