ಕೆಲಸ ಅರಸಿ ಹೋದ ಬ್ಯಾಡಗಿ ಯುವಕ ಕಾಣೆ
ಬ್ಯಾಡಗಿ: ಕೆಲಸ ಹುಡುಕಿಕೊಂಡು ಹೋದ ಯುವಕನೊಬ್ಬ ಕಾಣೆಯಾದ ಘಟನೆ ಪಟ್ಟಣದ ಸೋಗಿಯವರ ಓಣಿಯಲ್ಲಿ ವರದಿಯಾಗಿದೆ.
ಯುವಕನನ್ನು ಹರೀಶ್ ರೇವಣೆಪ್ಪ ಮಜ್ಜಗಿ (20) ಎಂದು ಗುರುತಿಸಲಾಗಿದ್ದು, ಕಳೆದ 2010ರ ಮಾರ್ಚ್ನಲ್ಲಿ ಮನೆ ಬಿಟ್ಟು ತೆರಳಿದ್ದಾಗಿ ತಿಳಿದು ಬಂದಿದೆ. ಬಡ ಕುಟುಂಬದ ಹಿನ್ನೆಲೆಯಿರುವ ಈ ಯುವಕ ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ತೆರಳಿದ್ದಾಗಿಯೂ ಅಲ್ಲಿಂದ ಇಲ್ಲಿಯವರೆಗೂ ಮರಳಿ ಬಾರದೇ ಯಾರಿಗೂ ಕಾಣಿಸಿಕೊಂಡಿರುವುದಿಲ್ಲ. ಆತಂಕಗೊಂಡ ಯುವಕನ ತಾಯಿ ವಿಜಯಮ್ಮ, ಸಂಬಂಧಿಕರು ಹಾಗೂ ಪರಿಚಯಸ್ಥರ ಬಳಿ ವಿಚಾರಿಸಲಾಗಿಯೂ ಮಗನ ಸುಳಿವು ಸಿಗದ ಹಿನ್ನೆಲೆಯಲ್ಲಿ ಜು. 19ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಕೊಂಡಿದ್ದಾರೆ.
ಕಾಣೆಯಾದ ಯುವಕ ಹರೀಶ್ 5 ಅಡಿ ಎತ್ತರವಿದ್ದು, ಸಾದಗಪ್ಪು ಮೈಬಣ್ಣ, ಕೋಲುಮುಖ ಹಾಗೂ ಬೆನ್ನಿನ ಮಧ್ಯಭಾಗದಲ್ಲಿ ಕೆಂಪು ಮಚ್ಚೆ ಹೊಂದಿರುತ್ತಾನೆ. ಕನ್ನಡ ಭಾಷೆ ಬಲ್ಲವನಾಗಿದ್ದು, ಈತನ ಸುಳಿವು ದೊರೆತಲ್ಲಿ ಬ್ಯಾಡಗಿ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ 08375-228633 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.