ವಕೀಲರ ಸಂಘಕ್ಕೆ ಆಯ್ಕೆ
ರಾಣಿಬೆನ್ನೂರು: ಕುತೂಹಲಕ್ಕೆ ಕಾರಣವಾಗಿದ್ದ ಇಲ್ಲಿನ ತಾಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಮುರುಗೆಪ್ಪ ಎಸ್. ಬೆಲ್ಲದ ಅಧ್ಯಕ್ಷರಾಗಿ, ಮಂಜುನಾಥ ಬ. ಗೌಡಪ್ಪಗೌಡ್ರ ಉಪಾಧ್ಯಕ್ಷರಾಗಿ, ಶಶಿಧರ ಶಿ. ಕುಬಸದ ಕಾರ್ಯದರ್ಶಿಯಾಗಿ, ನಾಗರಾಜ ಡೊಂಬರ ಸಹ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ. ಉಳಿದ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಜಯಣ್ಣ ಮದಗೋಳ, ಕೆಂಚಪ್ಪ ನಾಗಮ್ಮನವರ, ಮಂಜುನಾಥ ಸ್ವಾಮಿ ಅಜ್ಜವಡಿಮಠ, ರಂಗನಾಥ ಎಸ್. ದೊಡ್ಡದ್ಯಾವಣ್ಣನವರ, ಸುಭಾಸ್ ಪಾಟೀಲ, ಸುರೇಶ ದ್ಯಾವಕ್ಕಳವರ, ನಾಗರಾಜ ತುಮಕೂರು, ಸವಿತಾ ದಾನಪ್ಪನವರ ಆಯ್ಕೆಯಾಗಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಗುರುಪ್ರಶಾಂತಗೆ ಪ್ರಶಸ್ತಿ
ರಾಣಿಬೆನ್ನೂರು: ದುಬೈನ ಪ್ರತಿಷ್ಠಿತ ಪಂಚತಾರಾ ಹೋಟೆಲ್ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಇಟಗಿ ಗ್ರಾಮದ ನಿವಾಸಿ ಹಾಗೂ ಬಿರ್ಲಾ ಕಂಪನಿಯ ನಿವೃತ್ತ ನೌಕರ, ವೀರಣ್ಣ ಮುದ್ದಿಯವರ ಮಗನಾದ-ಗುರುಪ್ರಶಾಂತ ವೀರಣ್ಣ ಮುದ್ದಿಯವರ ಸೇವೆಯನ್ನು ಪರಿಗಣಿಸಿರುವ ಬಿಹಾರಿ ಬಾರ್ ಬಾರ್ ಟೆಂಡರ್ ಪ್ರಥಮ ಪಾರಿತೋಷಕ ನೀಡಿ ಗೌರವಿಸಿರುವುದಾಗಿ ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಹಾವೇರಿ: ಹಾವೇರಿ ತಾಲೂಕಿನ ಗೂಡೂರು ಗ್ರಾಮದಲ್ಲಿ ಖಾಲಿಯಿರುವ ಒಂದು ಅಂಗನವಾಡಿ ಕಾರ್ಯಕರ್ತೆ ಸ್ಥಾನಕ್ಕೆ 18ರಿಂದ 44 ವರ್ಷದೊಳಗಿನ ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಮತ್ತು ಕುಳೇನೂರು ಗ್ರಾಮದಲ್ಲಿ ಖಾಲಿಯಿರುವ ಒಂದು ಅಂಗನವಾಡಿ ಸಹಾಯಕಿ ಸ್ಥಾನಕ್ಕೆ 18ರಿಂದ 44 ವರ್ಷದೊಳಗಿನ ಕನಿಷ್ಠ 4ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಆಗಸ್ಟ್ 12ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾವೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದೆಂದು ಕಚೇರಿ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿ ನಿಲಯಕ್ಕೆ ಅರ್ಜಿ
ಹಾವೇರಿ: ಪ್ರಸಕ್ತ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗೊಟಗೋಡಿಯಲ್ಲಿ ನಡೆಯುತ್ತಿರುವ ಸ್ನಾತಕೋತ್ತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿನಿಯರಿಂದ 31 ಜುಲೈ, 2013 ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಸ್ನಾತಕೋತ್ತರ ಪದವಿ ಕೋರ್ಸ್ ಹಾಗೂ ಮೆಟ್ರಿಕ್ ನಂತರದ ಪಿಯುಸಿ, ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಶಿಗ್ಗಾಂವಿ ಹಿಂದುಳಿಂದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ವಿಸ್ತರಣಾಧಿಕಾರಿಗಳು ಅರ್ಜಿ ನಮೂನೆಯನ್ನು ಕಚೇರಿಯಲ್ಲಿ ಪಡೆದುಕೊಂಡು, ಅಗತ್ಯ ದಾಖಲಾತಿಗಳೊಂದಿಗ ಅರ್ಜಿಯನ್ನು ತಾಲೂಕು ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನವನಗರ, ಶಿಗ್ಗಾಂವಿ ಅವರಿಗೆ ಸಲ್ಲಿಸಬೇಕು. ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹು.