ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಲಯನ್ಸ್ ಪದಾಧಿಕಾರಿಗಳ ಪದಗ್ರಹಣ

Vishwanath S
Updated On : 21 Jul 2013, 11:22 am

ಹಿರೇಕೆರೂರು: ತಾಲೂಕಿನ ರಟ್ಟಿಹಳ್ಳಿ ಲಯನ್ಸ್ ಕ್ಲಬ್ 2013-14ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಅಧಿಕಾರ ಹಾಗೂ ಸನ್ಮಾನ ಸಮಾರಂಭ ಜು. 21ರಂದು ಲಯನ್ಸ್ ಕಾರ್ಯಾಲಯದಲ್ಲಿ ಜರುಗಲಿದೆ.
ಅಂದು ಬೆಳಗ್ಗೆ 11ಕ್ಕೆ ಜರುಗಲಿರುವ ಸಮಾರಂಭದಲ್ಲಿ ರಟ್ಟಿಹಳ್ಳಿ ಕಬ್ಬಿಣ ಕಂಥಿಮಠದ ಶ್ರೀಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಲಯನ್ಸ್ ಅಧ್ಯಕ್ಷ ಅಭಿನಂದನ ಬೋಗಾರ ಪತ್ನಿ ಸುಪ್ರಭಾ ಬೋಗಾರ ಅಧ್ಯಕ್ಷತೆ ವಹಿಸುವರು. ಶಾಸಕ ಯು.ಬಿ. ಬಣಕಾರ, ವಿ.ಆರ್. ಹಿರೇಗೌಡ್ರ ಅಗಮಿಸುವರು. ನಿವೃತ್ತ ಪ್ರೋಫೆಸರ ಟಿ.ಟಿ. ನಂದ್ಯಾಲ, ನೂತನ ಅಧ್ಯಕ್ಷ ಕೆ.ಎಲ್. ಉಪ್ಪಾರ, ಸುಧಾ ಉಪ್ಪಾರ, ಉಪಾಧ್ಯಕ್ಷ ಹಾಲನಗೌಡ ಮುದಿಗೌಡ್ರ ಹಾಗೂ ಕೆ.ವೈ. ಬಾಜಿರಾಯರ, ಎಸ್.ಎಸ್. ಸಿದ್ದನವರ, ಕಾರ್ಯದರ್ಶಿ ವಿ.ಎಸ್. ಅರ್ಕಾಚಾರಿ ಮತ್ತು ಖಚಾಂಚಿ ಗಣೇಶ ವೇರ್ಣೆಕರ ಅವರಿಗೆ ಪ್ರಮಾಣ ವಚನ ಬೋಧಿಸುವರು. ದಾನಿಗಳಾದ ರಾಜು ವೆಂಕಟೇಶ ಸಾಮನಕರ, ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಯಶೋದಾ ಬಿ. ಅಮೋಘಿಮಠ, ಸೀಮಾ ಹರವಿ, ಹಾಗೂ ಅಕ್ಷತಾ ಪಾಟೀಲರನ್ನು ಸನ್ಮಾನಿಸಲಾಗುವುದು. ಲಯನ್ಸ್ ಸದಸ್ಯರಾದ ಟಿ. ಕೃಷ್ಣಶೆಟ್ಟಿ, ಎನ್.ಕೆ. ಮನ್ನೋಪಂಥರ, ಎನ್.ಸಿ. ಕಠಾರೆ, ಎಸ್.ಬಿ. ಗೂಳಪ್ಪನವರ, ಆರ್.ಎನ್. ಗಂಗೋಳ, ಎಸ್.ಬಿ. ಪಾಟೀಲ, ಆರ್. ಬಳ್ಳೇರ, ಬಿ.ಜಿ. ಅಮೋಘಿಮಠ, ಎಂ.ಎಚ್. ಹರವಿಶೆಟ್ಟರ್ ಡಾ೤ ಸಿ.ಎಸ್. ಕೇಲಗಾರ, ವಿ.ಎಸ್. ಪಾಟೀಲ ಇನ್ನಿತರರಿರುವರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement