ವಿವಿಧ ಕೋರ್ಸ್ಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕು ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿವಿಧ ಸ್ನಾತಕೋತ್ತರ ಪದವಿಗಳು, ಸ್ನಾತಕೋತ್ತರ ಡಿಪ್ಲೊಮಾಗಳು ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿಯನ್ನು 31 ಜುಲೈ, 2013ರ ವರೆಗೆ ವಿಸ್ತರಿಸಲಾಗಿದೆ ಎಂದು ವಿವಿಯ ಕುಲಸಚಿವರು ತಿಳಿಸಿದ್ದಾರೆ. ಕೋರ್ಸ್ಗಳಲ್ಲಿ ಹೆಚ್ಚಿನವು ಸ್ವಯಂ ಉದ್ಯೋಗ ಸೃಷ್ಟಿಸಬಲ್ಲ ಕೋರ್ಸ್ಗಳಾಗಿದ್ದು, ವಿವಿಧ ಕಲೆ, ಕರಕುಶಲ ಕಲೆ, ಪಾರಂಪರಿಕ ಜ್ಞಾನ ಶಿಸ್ತುಗಳ ಬಗ್ಗೆ ತಜ್ಞರಿಂದ ತರಬೇತಿ ಒದಗಿಸಲಾಗುತ್ತದೆ.
ಕೋರ್ಸ್ ವಿವರ: ಎಂಎ (ಜಾನಪದ ವಿಜ್ಞಾನ, ಜನಪದ ಸಾಹಿತ್ಯ, ಜನಪದ ಕಲೆ, ಜನಪದ ಸಂವಹನ ಮತ್ತು ಜನಪದ ಪ್ರವಾಸೋದ್ಯಮ), ಎಂಬಿಎ (ಗ್ರಾಮೀಣ ಮತ್ತು ಬುಡಕಟ್ಟು ವ್ಯವಹಾರ ನಿರ್ವಹಣೆ), ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ (ಜನಪದ ಮಹಾಕಾವ್ಯ, ಪಾರಂಪರಿಕ ಹೈನುಗಾರಿಕೆ ಡಿಪ್ಲೊಮಾ ಮತ್ತು ಜನಪದ ಸಂಗೀತ ಉಪಕರಣಗಳು, ನಿರ್ಮಾಣ ಮತ್ತು ಮಾರಾಟ) ಹಾಗೂ ಸರ್ಟಿಫಿಕೆಟ್ ಕೋರ್ಸ್ಗಳು (ಸಮರ ಕಲೆ, ಜನಪದ ಗೀತ ಸಂಪ್ರದಾಯ, ಕಸೂತಿ ಕಲೆ, ಜನಪದ ವೈದ್ಯ, ಜನಪದ ನೃತ್ಯ, ದೊಡ್ಡಾಟ, ವೈದ್ಯಕೀಯ ಪ್ರವಾಸೋದ್ಯಮ, ತೊಗಲು ಗೊಂಬೆಯಾಟ, ಬುಡಕಟ್ಟು ವೈದ್ಯ, ಜನಪದ ಕ್ರೀಡೆ ಮತ್ತು ಕೊಡವ ಜನಪದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ