ಸಸಿ ನಾಟಿ ಮಾಡಿ ಹುಟ್ಟುಹಬ್ಬ ಆಚರಣೆ
ಹಾನಗಲ್ಲ: ಹಾನಗಲ್ಲ ಶಾಸಕ ಮನೋಹರ ತಹಸೀಲ್ದಾರ್ ಅವರ 67ನೇ ಹುಟ್ಟುಹಬ್ಬದ ಅಂಗವಾಗಿ ನಗರದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರಕ್ಕೆ ನೆಹರು ಯುವಕೇಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ್ ಚಾಲನೆ ನೀಡಿ ಸರ್ಕಾರಿ ಶಾಸಕರ ಮಾದರಿ ಶಾಲೆ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಟ್ಟರಲ್ಲದೆ ಚಿಕಿತ್ಸೆಗೆ ಆಯ್ಕೆಯಾದವರಿಗೆ ತೆಂಗಿನ ಸಸಿಗಳನ್ನು ವಿತರಿಸಿದರು.
ಹಾನಗಲ್ಲಿನ ಪ್ರಗತಿ ಸ್ವ-ಸಹಾಯ ಸೇವಾ ಸಂಸ್ಥೆ, ಗ್ರಾಮೀಣ ಪ್ರದೇಶ ಪ್ರಥಮ ಚಿಕಿತ್ಸಾ ವೈದ್ಯರ ಸಂಘ, ಕಾಯಕ ಪ್ರತಿಷ್ಠಾನ, ಸ್ತ್ರೀಶಕ್ತಿ ಸಂಘಗಳ ಒಕ್ಕೂಟ, ವಿಶ್ವಮಧ್ವ ಮಹಾ ಪರಿಷತ್, ಶ್ರೀಗುರು ಮಹಿಪತಿರಾಜ ನೇತ್ರ ಸೇವಾಸಂಸ್ಥೆ, ಡಾ ಎಂ.ಎಂ. ಜೋಷಿ ನೇತ್ರ ವಿಜ್ಞಾನ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಆಶ್ರಯದಲ್ಲಿ ಭಾನುವಾರ ಬೆಳಗ್ಗೆ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ 300 ಜನರಿಗೆ ನೇತ್ರ ಪರೀಕ್ಷಿಸಿ ಔಷಧೋಪಚಾರ ಮಾಡಲಾಯಿತು. ಇದರಲ್ಲಿ 50 ಜನರಿಗೆ ಹೆಚ್ಚಿನ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಪ್ರಗತಿ ಸ್ವ-ಸಹಾಯ ಸಂಸ್ಥೆ ಅಧ್ಯಕ್ಷ ರಾಜಶೇಖರ ಸಾಲಿಮಠ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾನಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ, ಡಾ ಎಂ.ಎಲ್. ಪಾಟೀಲ, ಆರ್.ಆರ್. ಪಾಟೀಲ, ಡಾ ಎಂ.ಎಂ. ಜೋಷಿ, ಡಾ ರಾಜೇಂದ್ರ ಗೊಡ್ಡೆಮ್ಮಿ, ಬಸವರಾಜ ಗಾಳಪೂಜಿ, ಮಲ್ಲಮ್ಮ ಬೆಳವತ್ತಿ, ಸುರೇಶ ಅಗಸನಹಳ್ಳೇರ, ಡಾ ಎಂ.ಪಿ. ಜನಿವಾರದ, ಡಾ ಜಿ.ಎಚ್. ಬಳ್ಳಾರಿಮಠ, ಎ.ಎಂ. ಪಠಾಣ, ನೀಲಮ್ಮ ಹಿರೇಮಠ, ಲಲಿತಾ ವನಹಳ್ಳಿ, ಈರಣ್ಣ ಕಳಸದ, ವೈದ್ಯ ವೃಂದ ಇದ್ದಿತು.