ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಾವಯವ ಕೃಷಿಯಿಂದ ಉತ್ತಮ ಮೆಣಸು

Mainashree
Updated On : 23 Jul 2013, 11:19 am

ಹಾವೇರಿ: ರಾಸಾಯನಿಕ ಗೊಬ್ಬರವನ್ನು ಕೈಬಿಟ್ಟು, ಸಾವಯವ ಗೊಬ್ಬರ ವಿಜಯ ಗ್ರೋಮಿನನ್ನು ವಿವಿಧ ಬೆಳೆಗೆ ಕಳೆದ 5 ವರ್ಷದಿಂದ ಬಳಸುತ್ತಿದ್ದು, ಹೀಗೆ ರೈತರು ಸಾವಯವ ಗೊಬ್ಬರ ಬಳಸಿ ಉತ್ತಮ ಬೆಳೆ ಪಡೆಯಬಹುದಾಗಿದೆ ಎಂದು ಅಂಗರಗಟ್ಟಿ ಗ್ರಾಮದ ರೈತ ಹನುಮಂತಪ್ಪ ಅಳಲಗೇರಿ ತಿಳಿಸಿದರು.
ಇತ್ತೀಚೆಗೆ ಬ್ಯಾಡಗಿ ತಾಲೂಕಿನ ಅಂಗರಗಟ್ಟಿ ಗ್ರಾಮದ ಪ್ರಗತಿಪರ ರೈತ ಮಲ್ಲೇಶಪ್ಪ ಕಾಟೇನಹಳ್ಳಿ ಅವರ ಹೊಲದಲ್ಲಿ 'ನವಭಾರತ ಫರ್ಟಿಲೈಜರ್ಸ್ ಲಿ' ವತಿಯಿಂದ ನಡೆದ ಸಾವಯವ ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ನವಭಾರತ ಫರ್ಟಿಲೈಜರ್ಸ್ ಕಂಪನಿಯ ಸೇವಾ ವಿಭಾಗದ ಮುಖ್ಯಸ್ಥ ಸಂತೋಷಕುಮಾರ ಮಾತನಾಡಿ, ಜೈವಿಕ ಗೊಬ್ಬರಗಳಾದ ಸುಪ್ರೀಮ್ ಹಾಗೂ ವಾರಿಯರ್‌ಗಳನ್ನು ಮೆನಸಿನಕಾಯಿ ಸಸಿಯ ಬೇರುಗಳನ್ನು ಅದ್ದಿ ಹಚ್ಚುವುದರಿಂದ ಮಣ್ಣಿನಿಂದ ಬರುವ ರೋಗಗಳನ್ನು ಹತೋಟಿಗೆ ತರಬಹುದಾಗಿದೆ. ವಿನಜೈಮ್-ಜಿ-ಎಲ್‌ಗಳ ಉಪಯೋಗದಿಂದ ಸಸಿಗಳ ಬೆಳವಣಿಗೆ ಚೆನ್ನಾಗಿ ಆಗುವುದರಿಂದ ಹೂವುಗಳ ಸಂಖ್ಯೆ ಹೆಚ್ಚಾಗಿ ಅಧಿಕ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿದರು.
ಕ್ಷೇತ್ರೋತ್ಸವದಲ್ಲಿ ಫರ್ಟಿಲೈಜರ್ಸ್ ಕಂಪನಿಯ ಮಾರಾಟ ಪ್ರತಿನಿಧಿಗಳಾದ ಶಂಕರಗೌಡ, ಮಂಜು, ಕುಮಾರ ಹಾಗೂ ಗ್ರಾಮದ ರೈತರಾದ ರಾಜು ರಾಗೇರ, ಶಿವಪುತ್ರಪ್ಪ ಮಾಸಣಗಿ, ಪುಟ್ಟಪ್ಪ ಬಡಿಗೇರ ಶೇಖಪ್ಪ ಹಾದಿಮನಿ, ಇನ್ನಿತರರು ಪಾಲ್ಗೊಂಡಿದ್ದರು. ಕಂಪನಿಯ ಕೃಷಿ ಅಧಿಕಾರಿ ಸಂಜಯಕುಮಾರ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement