ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 24 Jul 2013, 11:17 am

26, 27ರಂದು ಗ್ರಾಮಸಭೆ
ಹಿರೇಕೆರೂರು: ತಾಲೂಕಿನ ಕಡೂರ ಗ್ರಾಮ ಪಂಚಾಯತಿಯ 2013-14ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ಮತ್ತು ವಾರ್ಡ್ ಸಭೆ ಜು. 26 ಹಾಗೂ 27ರಂದು ಜರುಗಲಿವೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಮವ್ವ ದ್ಯಾ, ಕುರುಬರ ಅಧ್ಯಕ್ಷತೆ ವಹಿಸುವರು೤ ನೊಡಲ್ ಅಧಿಕಾರಿಗಳಾಗಿ ಕೃಷಿ ಅಧಿಕಾರಿ ನಾಗರಾಜ ಕ್ಯಾತರಕಿ ಅಗಮಿಸುವರು, 26ರಂದು ಬೆಳಗ್ಗೆ 10-30ಕ್ಕೆ ಬುಳ್ಳಾಪುರದ ಮಾರುತಿ ದೇವಸ್ಥಾನದಲ್ಲಿ ಮಧ್ಯಾಹ್ನ 3ಕ್ಕೆ ಹಾಡೆ ಗ್ರಾಮದ ಮಾರೆಮ್ಮ ದೇವಸ್ಥಾನದಲ್ಲಿ, 27ರಂದು ಬೆಳಗ್ಗೆ 10-30ಕ್ಕೆ  ಸಣ್ಣಗುಬ್ಬಿ ಗ್ರಾಮದಲ್ಲಿ ಮಾರುತಿ ದೇವಸ್ಥಾನದಲ್ಲಿ, ಮಧ್ಯಾಹ್ನ 1 ಗಂಟೆಗೆ ಕಡೂರು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಜರುಗಲಿದೆ. ಸಭೆಯಲ್ಲಿ 2013-14ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸುವುದು, ಬಸವ ವಸತಿ ಯೋಜನೆಡಿ ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡುವುದು, ಅಪೌಷ್ಠಿಕತೆ ತಡೆಗಟ್ಟಲು ಗೌರವಾನ್ವಿತ ಉಚ್ಚ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ, ಭಾರತ ನಿರ್ಮಲ ಅಭಿಯಾನ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣ ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಗುವುದು. ಆದ್ದರಿಂದ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಮಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಜಿ. ಅಡಿವೇರ ತಿಳಿಸಿದ್ದಾರೆ.
ವಿದ್ಯಾರ್ಥಿ ಒಕ್ಕೂಟ ಅಸ್ತಿತ್ವಕ್ಕೆ
ಹಿರೇಕೆರೂರು: ತಾಲೂಕಿನ ಕೋಡ ಗ್ರಾಮದ ಶ್ರೀ ಮಾರುತಿ ಪದವಿಪೂರ್ವ ಮಹಾವಿದ್ಯಾಲಯದ 2013-14ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿತು. ಮತದಾನ ಮುಖಾಂತರ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಪ್ರಾಚಾರ್ಯ ಜಿ.ಎಲ್. ಜೋಶಿಯವರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಒಕ್ಕೂಟದ ಮೂಲಕ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಬೌದ್ಧಿಕ ಜ್ಞಾನವನ್ನು ವಿಕಾಸ ಮಾಡಿಕೊಳ್ಳಬೇಕು, ಆದರ್ಶ ವಿದ್ಯಾರ್ಥಿಗಳಾಗಿ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಗೌರವದಿಂದ ಜೀವನ ನಡೆಸುವಂತೆ ಕರೆ ನೀಡಿದರು. ಬಾಲಕರ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಆರ್.ಎನ್. ಹೊಸಳ್ಳಿ, ಬಾಲಕಿಯರ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎಸ್. ಸಣ್ಣಮನಿ, ಪ್ರವಾಸ ಕಾರ್ಯದರ್ಶಿಯಾಗಿ ಎಸ್.ಎಂ. ಮಲ್ಲಾಪುರ, ಕ್ರೀಡೆ ಕಾರ್ಯದರ್ಶಿಯಾಗಿ ಬಿ.ಎಸ್. ಬಾಸೂರ, ಶಿಸ್ತು ಮತ್ತು ಪರಿಸರ ಕಾರ್ಯದರ್ಶಿಯಾಗಿ ಎ.ಎ. ಪತ್ತಾರ, ಗ್ರಂಥಾಲಯ ಕಾರ್ಯದರ್ಶಿ ಎಂ.ಎಂ. ಪಾಟೀಲ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೋಟ್ಪಾದಡಿ ತಂಬಾಕು ಉತ್ಪನ್ನ ಮಾರಿ
ಹಾನಗಲ್ಲ: ಶಾಲೆ, ಕಾಲೇಜು ಆರವಣದಿಂದ ನೂರು ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಬಾರದು, ಸರ್ಕಾರ ರೂಪಿಸಿದ ಕೋಟ್ಪಾ ಕಾನೂನನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಹಾನಗಲ್ಲ ಸಿಪಿಐ ಬಿ.ಎಸ್. ಮಂಟೂರು ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಹಾನಗಲ್ಲಿನಲ್ಲಿ ಗುಟ್ಕಾ ಹಾಗೂ ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋಟ್ಪಾ ಕಾಯ್ದೆಯ ಅಡಿ ಶಾಲೆ, ಕಾಲೇಜುಗಳ ಆವರಣದ ಹತ್ತಿರ ತಂಬಾಕು ಉತ್ಪನ್ನಗಳು ಹಾಗೂ ಗುಟ್ಕಾ ಮಾರಾಟ ಮಾಡಕೂಡದು. ಎಲ್ಲಿಯೇ ಆಗಲಿ ಗುಟ್ಕಾ ಮಾರಾಟ ಮಾಡುವಂತಿಲ್ಲ. ಈಗಾಗಲೇ ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಇಚ್ಚರಿಕೆ ನೀಡಲಾಗಿದೆ. ದಂಡವನ್ನೂ ಹಾಕಲಾಗಿದೆ. ಇನ್ನು ಮುಂದೆ ಇಂಥ ಪ್ರಕರಣಗಳು ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಸ್‌ಐ ರಂಗನಾಥ ನೀಲಮ್ಮನವರ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ವೈ.ಎಫ್ ತಹಸೀಲ್ದಾರ್, ರವಿ ಎಫ್.ಎಸ್, ಮುತ್ತು ಲಮಾಣಿ, ಬಸವರಾಜ ಬಿಕ್ಕಣ್ಣನವರ, ಎಸ್.ಜಿ. ಸೋಮಸಾಗರ ಇದ್ದರು.
ಹಡಪದ ಅಪ್ಪಣ ಜಯಂತಿ ಆಚರಣೆ
ಮುಳಗುಂದ: 12ನೇ ಶತಮಾನದ ಬಸವಾದಿ ಶಿವಶರಣರ ಆಪ್ತರಲ್ಲಿ ಒಬ್ಬರಾದ ಮಹಾ ಶಿವಶರಣ ಹಡಪದ ಅಪ್ಪಣನವರ ಜೀವನ, ಸಂದೇಶಗಳನ್ನು ಅಳವಡಿಸಿಕೊಳುವುದು ಅಗತ್ಯವಿದೆ ಎಂದು ಚಂದ್ರಶೇಖರಪ್ಪ ಬಡ್ನಿ ಹೇಳಿದರು.
ಸ್ಥಳೀಯ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಕಲಾಭವನದಲ್ಲಿ ಹಡಪದ ಅಪ್ಪಣ ಸೇವಾ ಸಮಿತಿ ವತಿಯಿಂದ ಶಿವಶರಣ ಹಡಪದ ಅಪ್ಪಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಸ್.ಆರ್. ಅಣ್ವೇಕರ ಮಾತನಾಡಿ, ನಿತ್ಯ ಅಧ್ಯಾತ್ಮಿಕ ಕಾರ್ಯದಲ್ಲಿ ಪಾಲ್ಗೊಳುವುದರಿಂದ ಮನಸ್ಸಿಗೆ ಶಾಂತಿ ದೂರೆಯುವುದು. ಆ ದಿಶೆಯಲ್ಲಿ ಅಪ್ಪಣ್ಣನವರದ ನಿಜಭಕ್ತಿ ಸಮಾಜಕ್ಕೆ ಮಾದರಿ ಎಂದರು. ದೇವು ಹಡಪದ ಮಾತನಾಡಿ, ಕ್ಷೌರಿಕ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದುವರಿಯಬೇಕಾದರೆ ಮಕ್ಕಳು ಶಿಕ್ಷಣವಂತರಾಗುವುದರ ಜತೆಗೆ ಸಮಾಜ ಒಗ್ಗೂಡಿ ಕೆಲಸ ಮಾಡಬೇಕು ಎಂದರು. ನಿಂಗಾನಂದ ಶರಣರು ಸಾನ್ನಿಧ್ಯ ವಹಿಸಿದ್ದರು. ಬಸಪ್ಪ ಕುತ್ನಿ, ಅಯ್ಯಪ್ಪಯ್ಯ ಹಿರೇಮಠ, ಪುಟ್ಟಯ್ಯ ಓದ್ಸುಮಠ, ಮುದಕಪ್ಪ ಕುತ್ನಿ, ಸಂಗಪ್ಪ ಕ್ಷೌರದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement