ಸರ್ಕಾರಿ ನೌಕರರ ಸಂಘದ ತಾಲೂಕು ಘಟಕಕ್ಕೆ ಚುನಾವಣೆ
ಶಿಗ್ಗಾಂವಿ: ಸನ್ 2013-18ನೇ ಸಾಲಿಗೆ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ತಾಲೂಕು ಘಟಕದ ಕಾರ್ಯಕಾರಿ ಸಮಿತಿಗೆ 3 ಇಲಾಖೆಗಳ 7 ಸದಸ್ಯರ ಆಯ್ಕೆಗೆ ಚುನಾವಣೆ ತಾಲೂಕು ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಜರುಗಿತು. ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ಒಟ್ಟು 26 ಇಲಾಖೆಗಳಿಂದ 17 ಇಲಾಖೆಗಳ ಪೈಕಿ 22 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅರುಣ ಎಫ್. ಹುಡೇದಗೌಡ್ರ, ಬಿ.ಬಿ. ಕಟ್ಟಿಮನಿ, ವಿ.ಜಿ. ದುಂಡಪ್ಪನವರ, ಬಾಸುಸಾಬ ಆರ್. ನದಾಫ್, ಎಂ.ಎಂ. ದೇವಕ್ಕಿಗೌಡ್ರ, ಪ್ರೌಢ ಶಿಕ್ಷಣಕ್ಕೆ ಒಂದು ಸ್ಥಾನಕ್ಕೆ 3 ಅಭ್ಯರ್ಥಿಗಳು ಸ್ಪರ್ಧಿಸಿ ಒಬ್ಬ ಅಭ್ಯರ್ಥಿ ಸಿ.ಎಸ್. ಪಾಟೀಲ ಆಯ್ಕೆಯಾಗಿದ್ದಾರೆ. ಕಿರಿಯ ಕಾಲೇಜು ಮತ್ತು ಪದವಿ ಕಾಲೇಜಿನಿಂದ ಆರ್.ಎಂ. ಹತ್ತಲದವರ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವಿರೋಧವಾಗಿ ಕೃಷಿ ಇಲಾಖೆ ಬಿ.ಆರ್. ಹೊಳೆಪ್ಪನವರ, ಪಶು ಸಂಗೋಪನೆ ಸಿ.ಡಿ. ಯತ್ತಳ್ಳಿ, ಸಾಂಖಿತ ಮತ್ತು ಆಹಾರ ನಾಗರಿಕ ಸರಬರಾಜು-ಎಸ್.ಸಿ. ಚಪ್ಪರಗಾವಿ, ಕಂದಾಯ ಬಿ.ಕೆ. ಹೊಂಕಣದವರ, ನಿರಾವಿ (ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್) ಲೋಕೋಪಯೋಗಿ ಎಂ.ಯು. ಬಂಡಿಹಾಳ, ಎಂ.ಎಸ್. ಬಸಾಪುರ, ಸಮಾಜ ಕಲ್ಯಾಣ ಹಿಂದುಳಿದ ಅಲ್ಪಸಂಖ್ಯಾತ ಪಿ.ಎ. ಭಜಂತಿ, ಅರಣ್ಯ ಎಂ.ಡಿ. ಬಾಗೇವಾಡಿ, ಅಬಕಾರಿ ಮತ್ತು ಕಾರ್ಮಿಕ ವಿದ್ಯಾ ಖುರ್ಸಾಪುರ, ಕೈಗಾರಿಕೆ ಮತ್ತು ವಾಣಿಜ್ಯ ಭರಮಪ್ಪ ಬಡಪ್ಪನವರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಎಚ್.ಎನ್. ಮಧುಬಾವಿ, ಶ್ರೀಕಾಂತ ಬ ಸರ್ಜಾಪುರ, ಎಸ್.ಕೆ. ಮಾಳವದಕರ, ತೋಟಗಾರಿಕೆ ಮತ್ತು ರೇಷ್ಮೆ ಬಸಲಿಂಗಪ್ಪಗೌಡ, ಖಜಾನೆ ಸಂದೇಶ ಎಸ್. ಲಾಡ, ಭೂಮಾಪನ ಉಪನೋಂದಣಿ ವೈ. ಎಸ್. ಪಾಟೀಲ, ನ್ಯಾಯಾಂಗ ಎಸ್.ಎನ್. ಮಾಳಗಿ, ತಾಲೂಕು ಪಂಚಾಯಿತಿ ಪ್ರಕಾಶ ಔಂದಕರ, ಸಿಡಿಪಿಓ- ಎನ್.ಎಂ. ಅರ್ಕಾಚಾರಿ, ಟಿಜಿಟಿ ಹಾಗೂ ಇತರ ಬೀರಪ್ಪ ಡೊಕ್ಕೇರ ಆಯ್ಕೆಯಾಗಿದ್ದಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಗಡ ಟಿಕೆಟ್
ಹಾವೇರಿ: ಸಾರ್ವಜನಿಕರ ಬೇಡಿಕೆಯ ಮೇರೆಗೆ ಬ್ಯಾಡಗಿ ಹಾಗೂ ಸವಣೂರು ಬಸ್ ನಿಲ್ದಾಣದಲ್ಲಿ ಅವತಾರ ಮುಂಗಡ ಚೀಟಿ ವಿತರಣಾ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ತಮಗೆ ಬೇಕಾದ ಮಾರ್ಗಗಳಿಗೆ ಇಲ್ಲಿಂದಲೇ ಮುಂಗಡ ಟಿಕೆಟ್ಗಳನ್ನು ಪಡೆದು ಪ್ರಯಾಣಿಸಬಹುದಾಗಿದೆ. ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸುವ ಪ್ರಯಾಣಿಕರು ಅಥವಾ ಹುಬ್ಬಳ್ಳಿಯಿಂದ ಮುಂಬಯಿಗೆ ಪ್ರಯಾಣಿಸುವ ಪ್ರಯಾಣಿಕರು ಬ್ಯಾಡಗಿ ಮತ್ತು ಸವಣೂರು ಅವತಾರ ಕೇಂದ್ರದಿಂದಲೂ ಮುಂಗಡ ಟಿಕೆಟ್ಗಳನ್ನು ಪಡೆಯಬಹುದೆಂದು ಅವರು ತಿಳಿಸಿದ್ದಾರೆ.