ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಲಾಭ ನಿರೀಕ್ಷಿಸದೆ ಸೌಲಭ್ಯ ಕಲ್ಪಿಸಿ: ಬಣಕಾರ

Mainashree
Updated On : 26 Jul 2013, 11:18 am

ಹಿರೇಕೆರೂರು: ಸಾರಿಗೆ ಇಲಾಖೆ ಅಧಿಕಾರಿಗಳು ಲಾಭಕ್ಕಿಂತ ಹೆಚ್ಚಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವತ್ತ ಗಮನ ಹರಿಸಬೇಕು. ಗ್ರಾಮಾಂತರ ಪ್ರದೇಶದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸರಿಯಾದ ಸಮಯಕ್ಕೆ ಸಮರ್ಪಕವಾಗಿ ಬಸ್‌ಗಳನ್ನು ಓಡಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಚಿಕ್ಕಬೂದಿಹಾಳ ಗ್ರಾಮದಿಂದ ಹಿರೇಕೆರೂರು ಪಟ್ಟಣಕ್ಕೆ ನೂತನವಾಗಿ ವಾಯುವ್ಯ ಸಾರಿಗೆ ಬಸ್ ಸಂಚಾರಕ್ಕೆ ಚಿಕ್ಕಬೂದಿಗಾಳ ಗ್ರಾಮದಲ್ಲಿ ವಿದ್ಯಾರ್ಥಿನಿ ಅನಿತಾ ಪ್ಯಾಟಿ ಅವರಿಂದ ಚಾಲನೆ ನೀಡಿ ಮಾತನಾಡಿದರು.
ಸಾರಿಗೆ ವ್ಯವಸ್ಥೆ ಜನತೆಗೆ ಮೂಲಭೂತ ಸೌಕರ್ಯಗಳಲ್ಲಿ ಪ್ರಮುಖವಾಗಿದ್ದು, ಕಾರಣ ವಾಯವ್ಯ ರಸ್ತೆ ಸಾರಿಗೆ ಇಲಾಖೆ ಕೆಲ ಗ್ರಾಮೀಣ ಮಾರ್ಗಗಳಿಂದ ಹಾನಿ ಅನುಭವಿಸುತ್ತಿದ್ದರೂ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಕಡ್ಡಾಯವಾಗಿ ಪ್ರತಿಯೊಂದು ಗ್ರಾಮಕ್ಕೂ ಬಸ್ ಸಂಚಾರ ಆರಂಭಿಸಬೇಕು ಎಂದು ಸೂಚಿಸಿದರು. ಜನತೆ ಹಲವಾರು ವರ್ಷಗಳ ಬೇಡಿಕೆಯಂತೆ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ಆರಂಭಿಸುವಂತೆ ಸದನದಲ್ಲಿ ಸರ್ಕಾರದ ಗಮನ ಸೆಳೆದ ಪರಿಣಾಮ ಈಗ ಗ್ರಾಮದಿಂದ ಬಸ್ ಸಂಚಾರ ಆರಂಭವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಬಸನಗೌಡ ಕಳ್ಳೇರ, ಘಟಕ ವ್ಯವಸ್ಥಾಪಕ ಎಂ.ನಂಜುಂಡಸ್ವಾಮಿ, ಸಾರಿಗೆ ನಿರೀಕ್ಷಕರಾದ ಎಂ.ಪಿ. ನಾಯಕ, ಗಣೇಶ ವರಣಕರ, ಎ.ಎ. ಕುಪ್ಪೇಲೂರ, ಗ್ರಾಪಂ ಸದಸ್ಯರಾದ ಮಲ್ಲೇಶಪ್ಪ ಸೊರಟೂರು, ನಾಗಪ್ಪ ಗೊರವರ, ಕರಬಸಪ್ಪ ಸೊರಟೂರ, ಸುಭಾಷ ಸಣ್ಮನಿ, ಪರಮೇಶಪ್ಪ ಸೊರಟೂರ, ಬಸವರಾಜ ಕಂದ್ಲಿ, ಫಕ್ಕೀರಪ್ಪ ಗೊರವರ, ಬಸವರಾಜ ಚಿನ್ನಿಕಟ್ಟಿ, ಕರಬಸಪ್ಪ ಬಿಸಲಹಳ್ಳಿ, ಅಜ್ಜಯ್ಯ ಹಿರೇಮಠ, ಮಲ್ಲೇಶಪ್ಪ ಗೊರವರ, ನಾಗಪ್ಪ ಬಣಕಾರ, ಹುತ್ತೇಪ್ಪ ಘಾಪೂಜಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement