ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೋರುತಿಹುದು ನಾಡ ಕಚೇರಿ ಮಾಳಿಗೆ

Mainashree
Updated On : 26 Jul 2013, 11:18 am

ಶಿಗ್ಗಾಂವಿ: 'ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗೆ' ಹಾಡಿನಂತಿದೆ ಸ್ಥಿತಿ ತಾಲೂಕಿನ ದುಂಡಶಿ ಗ್ರಾಮದ ನಾಡ ಕಚೇರಿ ಸ್ಥಿತಿ. ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡಿದ್ದು, ಮಳೆ ಬಂದರೆ ಸೋರುತ್ತಿದೆ. ಇದರಿಂದ ಇಲ್ಲಿನ ನೌಕರರಿಗೆ ತೊಂದರೆಯಾಗಿದ್ದು, ದಾಖಲಾತಿಗಳನ್ನು ರಕ್ಷಿಸುವುದು ಕಠಿಣ ಕೆಲಸವಾಗಿದೆ.
ಸಾರ್ವಜನಿಕರಿಗೆ ಅಗತ್ಯ ದಾಖಲಾತಿಗಳನ್ನು ನೀಡುತ್ತಿರುವುದೇ ನಾಡ ಕಚೇರಿ. ಆದರೆ, ಅಲ್ಲಿರುವ ಅಧಿಕಾರಿಗಳಿಗೆ ಕುಳಿತುಕೊಳ್ಳಲು ಹಾಗೂ ಸಂಬಂಧಿಸಿದ ಕಾಗದ ಪತ್ರಗಳನ್ನು ನೀಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರೆ ಸಾಕು ಕಾಗದ ಪತ್ರಗಳನ್ನು ಹಿಡಿದು ಅತ್ತಿಂದ ಇತ್ತ, ಇತ್ತಿದಂತ್ತ ಓಡಾಡುವಂತಾಗಿದೆ.
ಈ ಹಿಂದೆ ಗ್ರಾಪಂಗೆ ಸೇರಿದ ಕಟ್ಟಡದಲ್ಲಿ ನಾಡ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಸದ್ಯ ವಸತಿ ಗೃಹಕ್ಕೆ ನಾಡ ಕಚೇರಿಯನ್ನು ಸ್ಥಳಾಂತರಿಸಿದ್ದು, ಆ ಕಟ್ಟಡ ಸೋರುತ್ತಿರುವುದರಿಂದ ಅಲ್ಲಿ ಮಾಡದಂತಾಗಿದೆ.
ಕೈಗೆ ಸಿಗದ ಗ್ರಾಮ ಲೆಕ್ಕಾಧಿಕಾರಿ: ಗ್ರಾಮ ಲೆಕ್ಕಾಧಿಕಾರಿ ಸರಿಯಾಗ ಬಾರದಿರುವುದರಿಂದ ಸಾರ್ವಜನಿಕರು ಅವರು ಬರುವುದನ್ನೇ ಕಾಯುತ್ತ ಕುಳಿತುಕೊಳ್ಳಬೇಕಾಗಿದೆ. ಆದ್ದರಿಂದ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಮೇಲಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement