ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬೆಳೆವಿಮೆ ಸಂದಾಯ ಮಾಡಿ

Mainashree
Updated On : 27 Jul 2013, 11:36 am

ಹಾವೇರಿ: ಸಹಕಾರಿ ಸಂಘಗಳಿಗೆ 2011-12ನೇ ಸಾಲಿನ ಬೆಳೆವಿಮೆ ಹಣವನ್ನು ಸರ್ಕಾರ ತಕ್ಷಣ ಸಂದಾಯ ಮಾಡಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಗುರುಮಠ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ 1 ಆಗಸ್ಟ್, 2011ರಿಂದ 25 ಜುಲೈ, 2012ರ ವರೆಗೆ ಬೆಳೆವಿಮೆ ಪರಿಹಾರ ನೀಡುವುದಾಗಿ ಘೋಷಿಸಿದೆಯೇನೋ ನಿಜ. ಆದರೆ, ಈವರೆಗೂ ಬೆಳೆವಿಮೆ ಹಣವನ್ನು ಸಹಕಾರಿ ಸಂಘಗಳಿಗೆ ಪಾವತಿಸಿಲ್ಲ. ಇದರಿಂದಾಗಿ ರೈತರಿಗೆ ಬೆಳೆ ಸಾಲ ಹಣವನ್ನು ಸಹಕಾರಿ ಸಂಘಗಳು ನೀಡುತ್ತಿಲ್ಲ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದರು.
2011-12 ಹಾಗೂ 2012-13ರಲ್ಲಿ ಬರಗಾಲ ಪೀಡಿತ ಎಂದು ಸರ್ಕಾರ ಘೋಷಿಸಿದ ಪ್ರದೇಶಗಳ ರೈತರಿಗೆ ಬೆಳೆವಿಮೆಯನ್ನು ಏಕರೂಪದಲ್ಲಿ ವಿತರಿಸಿಲ್ಲ. ಒಂದು ಪ್ರದೇಶದಲ್ಲಿ ಶೇ. 16ರಷ್ಟು ವಿತರಿಸಿದ್ದರೆ ಇನ್ನೂ ಕೆಲವಡೆ ಶೇ. 50 ಹಾಗೂ ಶೇ. 60ರಷ್ಟು ವಿತರಿಸಿದೆ ಎಂದು ದೂರಿದರು.
ಸರ್ಕಾರ ಸದ್ಯ ಘೋಷಣೆ ಮಾಡಿರುವ ಬೆಳೆವಿಮೆಯಿಂದ ರೈತರಿಗೆ ಬಹಳಷ್ಟು ಅನ್ಯಾಯವಾಗಿದೆ. ಬರಗಾಲ ಪೀಡಿತ ಎಂದು ಘೋಷಿಸಲಾಗಿರುವ ಪ್ರದೇಶಗಳಲ್ಲಿನ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬೆಳೆ ಸಾಲ ವಿತರಿಸಬೇಕು. ಇಂತಹ ಪ್ರದೇಶಗಳಲ್ಲಿ ಸರ್ವೇ ಮಾಡುವ ಅವಶ್ಯಕತೆ ಇಲ್ಲ ಎಂದೂ ಗುರುಮಠ ಅಭಿಪ್ರಾಯಪಟ್ಟರು. ಕೆರೆಗಳಿಗೆ ನೀರು ತುಂಬಿಸುವುದಾಗಿ ಶಾಸಕರುಗಳು ಹೇಳಿಕೆ ನೀಡುತ್ತಿರುವ ವಿಷಯ ಪ್ರಸ್ತಾಪಿಸಿದ ಗುರುಮಠ, ಜಿಲ್ಲೆಯ ಸಾಕಷ್ಟು ಮಳೆಯಾಗುತ್ತಿದೆಯಾದರೂ ನೀರಿನ ಮಳೆಯಾಗುತ್ತಿಲ್ಲ. ಮಳೆಯಿಂದ ಜಿಲ್ಲೆಯ ನದಿಗಳು ಇದೀಗ ತುಂಬಿ ಹರಿಯುತ್ತಿವೆ.
ವರದಾನದಿಯಿಂದ ಹೆಗ್ಗೇರಿ ಕೆರೆಗೆ ನೀರು ತುಂಬಿಸಲು ಜನಪ್ರತಿನಿಧಿಗಳು ಸೂಕ್ತ ಕ್ರಮಕೈಗೊಳ್ಳದಿದ್ದರೆ ಮುಂಬರುವ ಬೇಸಿಗೆ ಕಾಲದಲ್ಲಿ ಜಿಲ್ಲೆಯಲ್ಲಿ ಬರಗಾಲ ಆವರಿಸಿ ಕುಡಿಯುವ ನೀರಿನ ಹಾಹಾಕಾರ ಕಂಡು ಬರಲಿದೆ ಎಂದರು. ಹಾವೇರಿ ನಗರ ಕೇಸರಿನಿಂದ ಕೂಡಿದ್ದು, ಸ್ವಚ್ಛತೆಗೆ ನಗರಸಭೆ, ಜನಪ್ರತಿನಧಿಗಳು ಕ್ರಮಕೈಗೊಳ್ಳದಿದ್ದರೇ ಹಾವೇರಿ ಬಂದ್‌ಗೆ ಕರೆ ನೀಡಲಾಗುವುದೆಂದೂ ಗುರುಮಠ ಎಚ್ಚರಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಬೆಟಗೇರಿ ಮಾತನಾಡಿ, ಸಂಗೂರು ಕಬ್ಬು ಕಾರ್ಖಾನೆ ಆಡಳಿತ ಮಂಡಳಿಗೆ ತಕ್ಷಣ ಚುನಾವಣೆ ನಡೆಸಬೇಕೆಂದು ಆಗ್ರಹಿಸಿದರು. ನಿಂಗಪ್ಪ ಹೂಗಾರ, ಜಿ.ಎ. ಹಿರೇಮಠ. ಶಿವಯೋಗಿ ಬೆನ್ನೂರು ರೈತ ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement