ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜನಸಂಖ್ಯೆ ನಿಯಂತ್ರಣಕ್ಕೆ ಶ್ರಮಿಸಿ

Mainashree
Updated On : 28 Jul 2013, 1:03 am

ಕನ್ನಡಪ್ರಭ ವಾರ್ತೆ, ಹಾವೇರಿ, ಜು. 27
ರಾಷ್ಟ್ರದಲ್ಲಿ ಜನಸಂಖ್ಯಾ ಸ್ಫೋಟ ಅಧಿಕವಾದಂತೆ ಸೌಲಭ್ಯಗಳ ಕೊರತೆಯು ಅಧಿಕವಾಗಿ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬಿರುತ್ತದೆ. ಆದ್ದರಿಂದ ಇಂದಿನ ಯುವಜನತೆ ಜನಸಂಖ್ಯೆ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಕರೆ ನೀಡಿದರು.
ನಗರದ ಸಮುದಾಯ ಆರೋಗ್ಯ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಾನೂನು ಪಾಲಿಸಿ: ಹೆಚ್ಚುತ್ತಿರುವ ಜನಸಂಖ್ಯೆಯಿಂದ ಸಮಾಜದಲ್ಲಿ ಅನೇಕ ಸಮಸ್ಯೆಗಳು ತಲೆದೋರುತ್ತಿದ್ದು, ಜನಸಂಖ್ಯೆ ನಿಯಂತ್ರಣ ಜಾಗೃತಿಯಿಂದ ಮಾತ್ರ ಸಾಧ್ಯ. ಯುವ ಸಮುದಾಯ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ದೇಶದ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
ಜಾಗೃತಿ ವಹಿಸಿ: ಕುಟುಂಬದ ಆದಾಯ, ರಾಜ್ಯ ಹಾಗೂ ರಾಷ್ಟ್ರದ ಆದಾಯಕ್ಕೆ ತಕ್ಕಂತೆ ಜನಸಂಖ್ಯೆ ಸರಿದೂಗುವಂತಿರಬೇಕು. ಇಲ್ಲವಾದಲ್ಲಿ ಸಮಾಜಕ್ಕೆ ಜನಸಂಖ್ಯಾ ಸ್ಫೋಟ ಮಾರಕವಾಗಿ ಪರಿಣಮಿಸುವುದು. ಜನಸಂಖ್ಯಾ ನಿಯಂತ್ರಣಕ್ಕೆ ಹತ್ತು ಹಲವು ಸೂತ್ರಗಳಿದ್ದು, ವಿವಾಹವಾಗಲು ಗಂಡಿಗೆ 21, ಹೆಣ್ಣಿಗೆ 18 ವರ್ಷ ತುಂಬಿರಬೇಕು. ವಿವಾಹವಾದ ನಂತರ ಕನಿಷ್ಠ 3 ವರ್ಷಗಳವರೆಗೆ ಮೊದಲನೇ ಮಗು ಹೊಂದಬಾರದು. ಮಗುವಿನಿಂದ ಮಗುವಿಗೆ ಕನಿಷ್ಠ ನಾಲ್ಕು ವರ್ಷ ಅಂತರವಿರುವಂತೆ ನೋಡಿಕೊಳ್ಳಬೇಕು. ಒಂದು ಬೇಕು, ಎರಡು ಸಾಕು ಎಂಬ ಘೋಷವಾಕ್ಯವನ್ನು ಪರಿಪಾಲಿಸುವುದರೊಂದಿಗೆ ಕಡ್ಡಾಯವಾಗಿ ಜನಿಸಿದ ಮಗುವಿಗೆ ಉತ್ತಮ ಶಿಕ್ಷಣ ನೀಡಬೇಕು. ಈ ಎಲ್ಲ ಕ್ರಮಗಳನ್ನು ಜನಸಂಖ್ಯಾ ನಿಯಂತ್ರಣಕ್ಕೆ ಅಳವಡಿಸಿಕೊಂಡಲ್ಲಿ ದೇಶದ ಜನಸಂಖ್ಯೆ ನಿಯಂತ್ರಿಸಬಹುದೆಂದು ನುಡಿದರು.
ನಿಸರ್ಗಕ್ಕೆ ಸ್ಪಂದಿಸಿ: ಜಿಪಂ ಸಿಇಒ ಉಮೇಶ ಕುಸುಗಲ್ಲ ಮಾತನಾಡಿ, ನಾವೇಲ್ಲರೂ ಸೇರಿ ಜನಸಂಖ್ಯೆ ನಿಯಂತ್ರಿಸದಿದ್ದರೆ, ಖಂಡಿತವಾಗಿ ನಿಸರ್ಗವೇ ಜನಸಂಖ್ಯೆ ನಿಯಂತ್ರಿಸಲು ಮುಂದಾಗುತ್ತದೆ. ಆಗ ರಾಷ್ಟ್ರದಲ್ಲಿ ಪ್ರಕೃತಿ ವಿಕೋಪದಂತ ಅವಘಡಗಳು ಸಂಭವಿಸಿ, ಅಪಾರ ಪ್ರಮಾಣದ ಪ್ರಾಣಹಾನಿಯಾಗುವುದರೊಂದಿಗೆ ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನಿಸರ್ಗದೊಂದಿಗೆ ಹೊಂದಿಕೊಂಡು ಜನಸಂಖ್ಯೆ ನಿಯಂತ್ರಿಸಿ ಸಹಜೀವನ ಸಾಗಿಸೋಣ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರದ ಸಮನ್ವಯಾಧಿಕಾರಿ ಡಾ೤ ವಿ.ಎಂ. ಕುಮ್ಮೂರ ಮಾತನಾಡಿ, ದೇಶದ ಜನಸಂಖ್ಯೆ ಉತ್ಪಾದನೆ ಈ ಎರಡು ಸಮಪ್ರಮಾಣದಲ್ಲಿ ಸಾಗಿದರೆ ಮಾತ್ರ ಸಮಾಜ ಸ್ವಾಸ್ಥ್ಯವಾಗಿ ಮುನ್ನಡೆಯುವುದು ಎಂದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಅನುಷ್ಠಾಧಿಕಾರಿ ಡಾ೤ ಡಿ.ಬಿ. ಮೂಲಿಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ೤ ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ೤ ಬಸವರಾಜ ಅಂಗಡಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ೤ ಬಸವರಾಜ ಸಜ್ಜನ ವೇದಿಕೆಯಲ್ಲಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಫ್. ಕುರುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಶಂಕರ ಸುತಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement