ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜನಸಂಖ್ಯೆ ನಿಯಂತ್ರಿಸದಿದ್ದರೆ ಸೌಲಭ್ಯ ಕೊರತೆ

Mainashree
Updated On : 28 Jul 2013, 1:03 am

ಹಾನಗಲ್ಲ: ನಾಗಾಲೋಟದಲ್ಲಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಯನ್ನು ತಡೆಯದಿದ್ದರೆ ಮನುಷ್ಯ ಮೂಲಭೂತ ಸೌಕರ್ಯಗಳಿಲ್ಲದೆ ನಲುಗುವುದು ಮಾತ್ರವಲ್ಲ, ಮನುಷ್ಯನೇ ಮನುಷ್ಯನ್ನು ತಿನ್ನುವ ಕಾಲ ಬಂದಿತು ಎಂದು ಹಾನಗಲ್ಲ ತಾಲೂಕು ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಳ್ಳಿ ನುಡಿದರು.
ಶನಿವಾರ ಹಾನಗಲ್ಲಿನ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ತಾಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಭಾರತದ ಜನಸಂಖ್ಯೆ ಅಗತ್ಯಕ್ಕಿಂತಲೂ ಹೆಚ್ಚಾಗಿದೆ. ಈಗಿರುವ ಜನಸಂಖ್ಯೆಗೆ ಸರ್ಕಾರ ಮೂಲಭೂತ ಸೌಕರ್ಯ ಒದಗಿಸಲು ಹೆಣಗಾಡುತ್ತಿದೆ. ದೇಶದ ಎರಡನೆ ಅತಿ ಹೆಚ್ಚು ಜನಸಂಖ್ಯೆ ಹೆಚ್ಚಳವಿರುವ ದೇಶ ಭಾರತವಾಗಿದ್ದು, ಇದನ್ನು ತಡೆಯದಿದ್ದರೆ ಪ್ರಥಮ ಸ್ಥಾನಕ್ಕೆ ಬರುವುದಲ್ಲದೆ, ದೇಶ ಸಮಸ್ಯೆಗಳ ಗೂಡಾಗುವುದು ಖಚಿತ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ೤ ರಾಜೇಂದ್ರ ಗೊಡ್ಡೆಮ್ಮಿ ಮಾತನಾಡಿ, ದೇಶದ ಜನತೆ ಕುಟುಂಬ ಕಲ್ಯಾಣ ಯೋಜನೆಗಳನ್ನು ಅನುಸರಿಸಿದರೆ ಜನಸಂಖ್ಯೆ ನಿಯಂತ್ರಣ ಸಾಧ್ಯ. ಅಜ್ಞಾನದಿಂದಾಗಿ ಹೆಚ್ಚು ಮಕ್ಕಳನ್ನು ಹೆರುವ ಸಂಪ್ರದಾಯವೂ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಜನನ ಪ್ರಮಾಣ ಹೆಚ್ಚಾಗಿದ್ದು, ಮರಣ ಪ್ರಮಾಣ ಕಡಿಮೆಯಾಗಿದೆ ಎಂದ ಅವರು, ಆರೋಗ್ಯವಂತ ಬದುಕಿಗಾಗಿ ಎಲ್ಲರೂ ಶ್ರಮಿಸಬೇಕು ಎಂದರು.
ಹಾನಗಲ್ಲ ತಾಲೂಕಿನಲ್ಲಿ ಕಳೆದ ವರ್ಷ 79 ಶಂಕಿತ ಡೆಂಘೀ, 163 ಮಲೇರಿಯಾ, 500 ಕ್ಷಯರೋಗ ಪ್ರಕರಣಗಳು ಕಂಡು ಬಂದಿವೆ. ಆದರೆ ಮಲೇರಿಯಾ ಹಾಗೂ ಕ್ಷಯರೋಗ ಗುಣಮುಖವಾಗಲು ಸರಿಯಾದ ಔಷಧಿ ಲಭ್ಯವಿದೆ. ಆದರೆ ಡೆಂಘೀ ಅರಿವಿಲ್ಲದೆ ಬಂದು ಶೀಘ್ರ ಪರಿಣಾಮ ಬೀರುವುದಲ್ಲದೆ, ಕೂಡಲೇ ಅಪಾಯಕ್ಕೆ ಸಿಲುಕಿಸುವ ರೋಗವಾಗಿರುವುದರಿಂದ ಜಾಗೃತಿ ಅಗತ್ಯ. ಸ್ವಚ್ಛಯಿಂದ ಮಾತ್ರ ಡೆಂಘೀ ರೋಗ ತಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಸಿ. ಪೀರಜಾದೆ ಮಾತನಾಡಿ, ಭಾರತದಲ್ಲಿ ಜನಸಂಖ್ಯೆ ಏರಿಕೆಯಿಂದಾಗಿ ಆಹಾರ ಹಾಗೂ ಮೂಲಭೂತ ಕೊರತೆಗಳನ್ನು ಅನುಭವಿಸುವ ಸ್ಥಿತಿ ಇದೆ ಎಂದರು. ತಾಪಂ ಇಒ ಮನೋಜಕುಮಾರ ಗಡಬಳ್ಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ೤ ಮಾರುತಿ ಚಿಕ್ಕಣ್ಣನವರ, ಪುರಸಭೆ ಮುಖ್ಯಾಧಿಕಾರಿ ಎಂ.ಎಸ್. ಸೋಮಶೇಖರ್, ಲೋಕೋಪಯೋಗಿ ಇಲಾಖೆ ಅಧಿಕಾರಿ ಬಿ.ವೇ. ಬಂಡಿವಡ್ಡರ, ಪ್ರೊ೤ ಮಾರುತಿ ಶಿಡ್ಲಾಪುರ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ೤ ಮಹೇಂದ್ರ ಬಾರಿಕೆರ ಅತಿಥಿಗಳಾಗಿದ್ದರು. ಸುರೇಶ ಹೀರೂರ, ವಿ.ಯು. ಪಾಟೀಲ, ವೀಣಾ ದೇವರಗುಡಿ, ರಶ್ಮಿ, ಕೆ. ಈಶ್ವರ ಪಾಲ್ಗೊಂಡಿದ್ದರು. ಬಿ.ಎಂ. ಕಾಡಪ್ಪನವರ ಸ್ವಾಗತಿಸಿದರು, ಎಂ.ಡಿ. ಬಾರಿಕೆರ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ಜನಸಂಖ್ಯಾ ನಿಯಂತ್ರಣ ಕುರಿತ ಜಾಗೃತಿ ಜಾಥಾ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement