ಹವಾಮಾನ ಆಧಾರಿತ ಬೆಳೆವಿಮೆ ಮಾರ್ಗಸೂಚಿ
ಕನ್ನಡಪ್ರಭ ವಾರ್ತೆ, ಹಾವೇರಿ, ಜು. 27
ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಮುಂದುವರೆಸಿದ್ದು, ಈ ಕೆಳಗೆ ಕೊಟ್ಟಿರುವ ಹಾವೇರಿ ಜಿಲ್ಲೆಯ 7 ಕಸಬಾ ಮತ್ತು 12 ಇತರೆ ಹೋಬಳಿಗಳಲ್ಲಿ ಈ ಯೋಜನೆಯು ಜಾರಿಯಾಗಿದೆ.
ಬೆಳೆವಿಮೆ ಯೋಜನೆಯಲ್ಲಿ ಒಳಪಡಿಸಲಾಗುವ ಎಲ್ಲಾ ಬೆಳೆಗಳಿಗೆ ಬೆಳೆ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಒಳಪಡಿಸಲು ತೀರ್ಮಾನಿಸಲಾಗಿದೆ.
9 ಬೆಳೆಗಳಾದ ರಾಗಿ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆ ಆಶ್ರಿತ), ಜೋಳ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಉದ್ದು (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಸೋಯಾ ಅವರೆ (ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ) ಮತ್ತು ಶೇಂಗಾ (ಮಳೆ ಆಶ್ರಿತ) ಇವುಗಳನ್ನು ಎರಡೂ ಯೋಜನೆಗಳಲ್ಲಿ ಅಳವಡಿಸಲಾದ ಕೆಲವು ಕ್ಷೇತ್ರ ಘಟಕಗಳಲ್ಲಿ ಒಳಪಡಿಸಿರುವುದರಿಂದ ಈ ಬೆಳೆಗಳಿಗೆ ಬೆಳೆ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಒಳಪಡಿಸುವುದು ಹಾಗೂ ಈ ಬೆಳೆಗಳಿಗೆ ಬೆಳೆ ಸಾಲ ಪಡೆಯುವ ರೈತರಿಗೆ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಒಳಪಡಿಸಬಾರದು.
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಥವಾ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಇವುಗಳಲ್ಲಿ ಯಾವುದಾದರೊಂದು ಯೋಜನೆಯನ್ನು ಸ್ವ-ಇಚ್ಛೆಯಿಂದ ಆರಿಸತಕ್ಕದ್ದು. ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಾದ ಹತ್ತಿ (ನೀರಾವರಿ), ಹತ್ತಿ (ಮಳೆ ಆಶ್ರಿತ), ಈರುಳ್ಳಿ (ನೀರಾವರಿ), ಈರುಳ್ಳಿ (ಮಳೆ ಆಶ್ರಿತ), ಮೆಣಸಿನಕಾಯಿ (ನೀರಾವರಿ), ಮೆಣಸಿನಕಾಯಿ (ಮಳೆ ಆಶ್ರಿತ), ಆಲೂಗಡ್ಡೆ (ನೀರಾವರಿ) ಆಲೂಗಡ್ಡೆ (ಮಳೆ ಆಶ್ರಿತ), ದ್ರಾಕ್ಷಿ ಮತ್ತು ಬಾಳೆ ಇವುಗಳನ್ನು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಮಾತ್ರ ಅಳವಡಿಸಿರುವುದರಿಂದ ಬೆಳೆ ಸಾಲ ಪಡೆಯದ ರೈತರು ಈ ಯೋಜನೆಯಡಿ ಸ್ವ-ಇಚ್ಛೆಯಿಂದ ಪಾಲ್ಗೊಳ್ಳಬಹುದಾಗಿದೆ.
ಕರ್ನಾಟಕ ಸರ್ಕಾರವು 2013ನೇ ಮುಂಗಾರು ಹಂಗಾಮಿನಲ್ಲಿ ಬೆಳೆಸಾಲ ಪಡೆಯದ ರೈತರು ಪ್ರಾಯೋಗಿಕ ಈ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆದ ರೈತರಿಗೆ 31 ಜುಲೈ, 2013ರೊಳಗೆ ಬೆಳೆ ಸಾಲ ಮಂಜೂರಾಗಿದ್ದರೆ ಅಂತಹ ರೈತರನ್ನು ಕಡ್ಡಾಯವಾಗಿ ಯೋಜನೆಯಡಿ ಒಳಪಡಿಸತಕ್ಕದ್ದು, ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆಯಡಿ ಪಾಲ್ಗೊಳ್ಳಲು 31 ಜುಲೈ, 2013 ಕೊನೆ ದಿನವಾಗಿದೆ.
ಆದ ಕಾರಣ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ, ಸಂಸ್ಥೆಯು ಅದರ ಉತ್ಪನ್ನವನ್ನು ಅನುಷ್ಠಾನಗೊಳಿಸುತ್ತಿರುವ ಬ್ಯಾಂಕುಗಳ ಮೂಲಕವೇ ಅಂದರೆ, ವಾಣಿಜ್ಯ ಬ್ಯಾಂಕುಗಳು, ಪ್ರಾಂತೀಯ ಗ್ರಾಮೀಣ ಬ್ಯಾಂಕುಗಳು ಹಾಗೂ ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಮಾರ್ಗಸೂಚಿಗಳು: ಮುಂಗಾರು 2013-14ನೇ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಿಂದ ಹಿಡಿದು ಯೋಜನೆಯಡಿ ಬೆಳೆ ಸಾಲ ಪಡೆಯದ ರೈತರು ಬೆಳೆ ಬಿತ್ತಿ ನಾಟಿ ಮಾಡಿದ ನಂತರ 30 ದಿವಸದೊಳಗಾಗಿ ಅಥವಾ ಕೆಳಗೆ ನಿಗದಿಪಡಿಸಿದ ದಿನಾಂಕದೊಳಗೆ ಯಾವುದು ಮುಂಚೆಯೋ ಆ ಅವಧಿಯೊಳಗೆ ಬ್ಯಾಂಕಿಗೆ ಘೋಷಣೆಯನ್ನು ಸಲ್ಲಿಸತಕ್ಕದ್ದು.
ಬೆಳೆಗಳು ಕೊನೆಯ ದಿನ: 1 ಬತ್ತ (ಮ.ಆ), ಬತ್ತ (ನೀ) ಮುಸುಕಿನಜೋಳ (ನೀ), ಮುಸುಕಿನಜೋಳ (ಮ.ಆ), ಜೋಳ (ನೀ), ಜೋಳ(ಮ.ಆ), ರಾಗಿ (ನೀ), ರಾಗಿ (ಮ.ಆ), ಸಜ್ಜೆ (ನೀ), ಸಜ್ಜೆ (ಮ.ಆ), ನವಣೆ (ಮ.ಆ), ಸಾವೆ (ಮ.ಆ), ಉದ್ದು(ಮ.ಆ), ಹೆಸರು (ಮ.ಆ), ಸೊಯಾ ಅವರೆ (ನೀ), ಸೂರ್ಯಕಾಂತಿ (ಮ.ಆ), ಹುರುಳಿ (ಮ.ಆ), ಎಳ್ಳು(ಮ.ಆ), ನೆಲೆಗಡಲೆ (ಶೇಂಗಾ) (ನೀ), ನೆಲೆಗಡಲೆ (ಶೇಂಗಾ) 2013ನೇ ಮುಂಗಾರು ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ದಿನಾಂಕ 31 ಆಗಸ್ಟ್, 2013 (ಮ.ಆ), ಬೆಳೆಗಳಾದ ರಾಗಿ (ಮ.ಆ), ಮುಸುಕಿನಜೋಳ (ಮ.ಆ), ಜೋಳ (ಮ.ಆ), ತೊಗರಿ (ಮ.ಆ), ಹೆಸರು (ಮ.ಆ), ಉದ್ದು (ಮ.ಆ), ಸೊಯಾ ಅವರೆ(ಮ.ಆ), ಸೂರ್ಯಕಾಂತಿ (ಮ.ಆ) ಮತ್ತು ನೆಲೆಗಡಲೆ (ಶೇಂಗಾ) (ಮ.ಆ) ಇವುಗಳನ್ನು ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಹಾಗೂ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಎರಡರಲ್ಲೂ ಕೆಲವು ಹೋಬಳಿಗಳಲ್ಲಿ ಒಳಪಡಿಸಿರುವುದರಿಂದ ಬೆಳೆಸಾಲ ಪಡೆಯದ ರೈತರು ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಅಥವಾ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಇವುಗಳಲ್ಲಿ ಯಾವುದಾದರೊಂದು ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಈ ಯೋಜನೆಯಡಿ ಮೇಲೆ ತಿಳಿಸಿದ ಎಲ್ಲಾ ಬೆಳೆಗಳನ್ನು ಬೆಳೆಸಾಲ ಪಡೆಯುವ ರೈತರನ್ನು 1 ಎಪ್ರಿಲ್, 2013ರಿಂದ 31 ಆಗಸ್ಟ್, 2013ರೊಳಗೆ ಕಡ್ಡಾಯವಾಗಿ ಒಳಪಡಿಸತಕ್ಕದ್ದು. ಆಯ್ದ ಹೋಬಳಿಗಳಲ್ಲಿ ಎರಡೂ ಯೋಜನೆಗಳಲ್ಲೂ ಅಂದರೆ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಹಾಗೂ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಅಳವಡಿಸಲಾದ ಬೆಳೆಗಳಾದ ರಾಗಿ (ಮ.ಆ), ಮುಸುಕಿನಜೋಳ (ಮ.ಆ), ಜೋಳ (ಮ.ಆ), ತೊಗರಿ (ಮ.ಆ), ಹೆಸರು (ಮ.ಆ), ಉದ್ದು (ಮ.ಆ), ಸೊಯಾ ಅವರೆ (ಮ.ಆ), ಸೂರ್ಯಕಾಂತಿ (ಮ.ಆ) ಮತ್ತು ನೆಲೆಗಡಲೆ (ಶೆಂಗಾ) (ಮ.ಆ) ಬೆಳೆಗಳಿಗೆ ಬೆಳೆಸಾಲ ಪಡೆಯುವ ರೈತರಿಗೆ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಒಳಪಡಿಸಬಾರದು ಎಂದು ಹಾವೇರಿ ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.