ದೈವಾಧೀನರಾದ ಸುರೇಶ್ವರಾನಂದ ಶ್ರೀ: ಶ್ರದ್ಧಾಂಜಲಿ
ಶಿಗ್ಗಾಂವಿ: ಶನಿವಾರ ದೈವಾಧೀನರಾದ ಶ್ರೀ ಸುರೇಶ್ವರಾನಂದ ಭಾರತಿ ಶ್ರೀ ಗೋಸಾಯಿಮಠ ಗವಿಪುರ ಇವರಿಗೆ ಸೋಮವಾರ ಎಪಿಎಂಸಿಯಲ್ಲಿ ತಾಲೂಕು ಮರಾಠಾ ಸಮಾಜದವರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ತಾಲೂಕು ಮರಾಠಾ ಸಮಾಜದ ಅಧ್ಯಕ್ಷ ಸುಭಾಷ್ ಚೌಹಾಣ ಮಾತನಾಡಿ, ಸ್ವಾಮೀಜಿಯವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಇವರು ಸಮಾಜದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು ಎಂದರು. ಜಿಲ್ಲಾಧ್ಯಕ್ಷ ಎಂ.ಎನ್. ವೆಂಕೋಜಿ, ಆನಂದ ದಾನಿ, ರಂಗಣ್ಣ ಗಾಯಕವಾಡ, ಸುಭಾಷ್ ಕಾಟೆಗಾರ, ಹನಮಂತಪ್ಪ ತಿಮ್ಮಾಪುರ, ಪಿ.ಬಿ. ಹೊಂಡದಕಟ್ಟಿ, ಸಿ.ಜಿ. ಮನೋಜಿ, ಬಿ.ಎಂ. ಕೋಕಾಟಿ, ರಾಜಾರಾಮ ಜಗತಾಪ್, ದೇವೇಂದ್ರ ಜಾಧವ್, ಮಸಮಂತರಾವ್ ಪಾಟೀಲ್, ಪಾಂಡುರಂಗ ಪಾಟೀಲ್, ಫಕ್ಕಿರಪ್ಪ ದಂಡಿನ್, ಮಹೇಶ ಸೂರ್ಯವಂಶಿ, ಬಸವಂತಪ್ಪ ಆರ್ಯರ್, ತುಕಾರಾಮ್ ಪವಾರ, ರಾಮಣ್ಣ ತಳ್ಳಳ್ಳಿ, ನಾಗರಾಜ ಜೀವಾಜಿ ಶ್ರದ್ಧಾಂಜಲಿ ಅರ್ಪಿಸಿದರು.