ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನದಿ ಪಾತ್ರದ ಜನರಿಗೆ ಎಚ್ಚರಿಕೆ

Lingaraj Badiger
Updated On : 30 Jul 2013, 11:05 am

ಹಾವೇರಿ: ಭದ್ರಾ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿದ್ದು, ಸುತ್ತಲಿನ ಪ್ರದೇಶದ ಜನರಿಗೆ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಜುಲೈ 25ಕ್ಕೆ ನೀರಿನ ಮಟ್ಟ 1787ಗೆ ತಲುಪಿದ್ದು, ಇದೇ ರೀತಿ ಮುಂದುವರೆದಲ್ಲಿ ಶೀಘ್ರ 1860ಗೇ ತಲುಪುವ ನಿರೀಕ್ಷೆಯಿದೆ. ಆದ್ದರಿಂದ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು ಹಾಗೂ ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆಯೆಂದು ಭದ್ರಾ ಯೋಜನಾ ವೃತ್ತದ ಬಿ.ಆರ್. ಪ್ರಾಜೆಕ್ಟ್ ಅಧೀಕ್ಷಕ ಎಂಜಿನಿಯರ್ ಬಿ.ಎನ್. ಫಣಿರಾಜು ಅವರು ತಿಳಿಸಿದ್ದಾರೆ.
ಅಗತ್ಯವಿದ್ದಲ್ಲಿ ಗಂಜಿಕೇಂದ್ರ ಆರಂಭ
ಹಾವೇರಿ: ನದಿ ತೀರದ ಗ್ರಾಮಗಳಲ್ಲಿ ಏನಾದರೂ ಅವಘಡ ಸಂಭವಿಸಿದಲ್ಲಿ ಶೀಘ್ರ ಸುರಕ್ಷತಾ ಕ್ರಮ ಕೈಗೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹಾವೇರಿ ಉಪವಿಭಾಗಾಧಿಕಾರಿ ಚನ್ನಬಸಪ್ಪ ತಿಳಿಸಿದ್ದಾರೆ. ತಾಲೂಕಿನ ಗುಯಿಲಗುಂದಿ, ಕಂಚಾರಗಟ್ಟಿ, ಹುಲ್ಯಾಳ, ಗಳಗನಾಥ, ಬೆಳವಿಗಿ, ಹೊಸರಿತ್ತಿ, ಕರ್ಜಗಿ ಮತ್ತು ರಾಣಿಬೆನ್ನೂರ ತಾಲೂಕಿನ ಮುಷ್ಟೂರ ಹಾಗೂ ಹಿರೇಕೆರೂರ ತಾಲೂಕಿನ ಮಾಸೂರು, ತಿಪ್ಪಾಯಿಕೊಪ್ಪ, ಮಳಗಿ, ಯಲಿವಾಳ, ಕುಡಪಲಿ, ಹಿರೇಮೊರಬ, ರಟ್ಟೀಹಳ್ಳಿ ಇತ್ಯಾದಿ ಗ್ರಾಮಗಳು ತುಂಗಭದ್ರಾ, ವರದಾ ಮತ್ತು ಕುಮದ್ವತಿ ನದಿ ತೀರದ ಗ್ರಾಮಗಳಾಗಿವೆ. ಈ ಗ್ರಾಮಗಳ ಜನರ ರಕ್ಷಣೆಗೆ ತಾಲೂಕು ವೈದ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿ ಹಾಗೂ ಹೋಂ ಗಾರ್ಡ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಗತ್ಯಬಿದ್ದಲಿ ಗಂಜಿ ಕೇಂದ್ರ ತೆರೆಯಲಾಗುವುದು ಎಂದರು. ನದಿ ತೀರದ ಜನರಿಗೆ ಸುರಕ್ಷತಾ ಸ್ಥಳಗಳಿಗೆ ಹೋಗುವಂತೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement