ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಮುಖ್ಯಮಂತ್ರಿ ಪ್ರವಾಸ

Vishwanath S
Updated On : 2 Jun 2013, 11:54 am

ಹಾವೇರಿ: ಜೂ. 2ರಂದು ಬೆಳಗ್ಗೆ 9 ಗಂಟೆಗೆ ಜಕ್ಕೂರು ಏರೋ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೊರಟು, ರಾಯಚೂರು ಜಿಲ್ಲೆ ಸಿಂಧನೂರಿಗೆ ತೆರಳಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬೆಳಗ್ಗೆ 11.45ಕ್ಕೆ ಬ್ಯಾಡಗಿ ತಾಲೂಕು ಕಾಗಿನೆಲೆ ಹೆಲಿಪ್ಯಾಡ್ ಆಗಮಿಸುವರು. ಮಧ್ಯಾಹ್ನ 12ಕ್ಕೆ ಕಾಗಿನೆಲೆಯಲ್ಲಿ ಮಾಳಿಂಗರಾಯ ವಿದ್ಯಾರ್ಥಿ ನಿಲಯ ಉದ್ಘಾಟನೆ, ದಾಸೋಹ ಭವನ ಶಂಕುಸ್ಥಾಪನೆ, ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವರು.

ಧನ ಸಹಾಯಕ್ಕೆ ಅರ್ಜಿ ಆಹ್ವಾನ
ಹಾವೇರಿ: ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಸ್ವಯಂ ಉದ್ಯೋಗ ಕೈಕೊಳ್ಳಲು ರಾಜ್ಯ ಸರ್ಕಾರ ಬ್ಯಾಂಕುಗಳಿಂದ ಸಾಲ ಒದಗಿಸುವುದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮುಖ್ಯ ಉದ್ದೇಶವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಜೂನ್ 30ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿ 18ರಿಂದ 45 ವರ್ಷದೊಳಗಿನವರಾಗಿದ್ದು, ವಾರ್ಷಿಕ ಆದಾಯ ರು. 40 ಸಾವಿರದೊಳಗಿರಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

ವಿದ್ಯುತ್ ಅಡಚಣೆ: ಹೆಸ್ಕಾಂ ಸಂಪರ್ಕಿಸಿ
ಹಾವೇರಿ: ಹಾವೇರಿ ಹೆಸ್ಕಾಂ ವಿಭಾಗಕ್ಕೆ ಸಂಬಂಧಿಸಿದ ಹಾವೇರಿ, ಹಾನಗಲ್ಲ, ಶಿಗ್ಗಾಂವಿ ಹಾಗೂ ಸವಣೂರು ತಾಲೂಕುಗಳ ವ್ಯಾಪ್ತಿಯಲ್ಲಿ ಮಳೆ ಗಾಳಿಯಿಂದ ಯಾವುದೇ ರೀತಿಯ ವಿದ್ಯುತ್ ಅಡಚಣೆಯಾದಲ್ಲಿ(ಕಂಬಗಳು ಮುರಿದಿರುವುದು, ತಂತಿ ಹರಿದಿರುವುದು, ಗಿಡಗಳು ವಿದ್ಯುತ್ ತಂತಿ ಮೇಲೆ ಬಿದ್ದಿರುವುದು ಮುಂತಾದವುಗಳು) ಹಾಗೂ ಗ್ರಾಹಕರ ಕುಂದು-ಕೊರತೆಗಳ ನಿವೇದನೆಗೆ ಸಾರ್ವಜನಿಕರು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಹೆಸ್ಕಾಂ ಹಾವೇರಿಯ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ ವಿಜಯಕುಮಾರ ಮುದಕಣ್ಣನವರ ತಿಳಿಸಿದ್ದಾರೆ. ಹಾವೇರಿ- ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ ಎಚ್.ವೈ. ಪ್ರಶಾಂತ ಮೊ: 9448382534 ಅಥವಾ ಹಾವೇರಿ ವಿದ್ಯುತ್ ವಿಪತ್ತು ನಿರ್ವಹಣಾ ಕೇಂದ್ರ ದೂರವಾಣಿ ಸಂಖ್ಯೆ: ಹಾನಗಲ್ಲ- ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ ಎಚ್. ಕೃಷ್ಣಪ್ಪ ಮೊ: 9448494766 ಅಥವಾ ವಿದ್ಯುತ್ ವಿಪತ್ತು ನಿರ್ವಹಣಾ ಕೇಂದ್ರ ದೂರವಾಣಿ ಸಂಖ್ಯೆ: 08379-262466 ಶಿಗ್ಗಾಂವಿ- ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್. ರಾಠೋಡ ಮೊ: 9448382538 ಅಥವಾ ವಿದ್ಯುತ್ ವಿಪತ್ತು ನಿರ್ವಹಣಾ ಕೇಂದ್ರ ದೂರವಾಣಿ ಸಂಖ್ಯೆ: 08378-255949 ಸವಣೂರು- ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ. ರಾಮಚಂದ್ರಪ್ಪ ಮೊ: 9449821707 ಅಥವಾ ವಿದ್ಯುತ್ ವಿಪತ್ತು ನಿರ್ವಹಣಾ ಕೇಂದ್ರ ದೂರವಾಣಿ ಸಂಖ್ಯೆ: 08378-241707ಗೆ ಸಂಪರ್ಕಿಸಲು ಕೋರಲಾಗಿದೆ.

ವಿದ್ಯುತ್ ವ್ಯತ್ಯಯಕ್ಕೆಕರೆ ಮಾಡಲು ಮನವಿ
ಶಿಗ್ಗಾಂವಿ: ತಾಲೂಕಿನಲ್ಲಿ ಮಳೆ-ಗಾಳಿಯಿಂದ ವಿದ್ಯುತ್ ಅಡಚಣೆಯಾದಲ್ಲಿ ಸಾರ್ವಜನಿಕರು ಆಗುವ ಅನಾಹುತ ತಪ್ಪಿಸಲು ತಕ್ಷಣ ಹೆಸ್ಕಾಂ ಕಚೇರಿಗೆ ದೂರವಾಣಿ ಮಾಡಿ ತಿಳಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎಸ್. ರಾಠೋಡ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ತಾಲೂಕಿನ ವ್ಯಾಪ್ತಿಯಲ್ಲಿ ಮಳೆ-ಗಾಳಿಯಿಂದ ಯಾವುದೆ ರೀತಿಯ ವಿದ್ಯುತ್ ಅಡಚಣೆಯಾದಲ್ಲಿ (ಕಂಬಗಳು ಮುರಿದಿರುವುದು, ಗಿಡಗಳು ವಿದ್ಯುತ್ ತಂತಿಯ ಮೆಲೆ ಬಿದ್ದಿರುವದು) ಸೇರಿದಂತೆ ಇನ್ನಿತರೆ ತೊಂದರೆ ಉಂಟಾದಲ್ಲಿ ಶಿಗ್ಗಾಂವಿ ಹೆಸ್ಕಾಂ ಅಧಿಕಾರಿ ದೂ. 9448382538 ಅಥವಾ 08378-255229ಗೆ ಸಂಪರ್ಕಿಸಲು ಕೋರಲಾಗಿದೆ.

ಇಂದು ಕಾರ್ಮಿಕ ಸಚಿವ ಪಿಟಿಪಿ ನಾಯ್ಕ ಪ್ರವಾಸ
ಹಾವೇರಿ: ರಾಜ್ಯ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಜೂನ್ 2ರಂದು ಬೆಳಗ್ಗೆ 11.30ಕ್ಕೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ಕಾಗಿನೆಲೆಗೆ ಆಗಮಿಸಿ, ಮುಖ್ಯಮಂತ್ರಿಗಳೊಂದಿಗೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 4 ಗಂಟೆಗೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲಗೆ ಪ್ರಯಾಣ ಬೆಳೆಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement