ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಳೆನಾಶಕ ಹಾಕಿ ದುಷ್ಕರ್ಮಿಗಳಿಂದ ಬೆಳೆ ನಾಶ

Vishwanath S
Updated On : 2 Jun 2013, 11:53 am

ಹಿರೇಕೆರೂರು: ದುಷ್ಕರ್ಮಿಗಳು ಹುಲುಸಾಗಿ ಬೆಳೆಯುತ್ತಿರುವ ಕಬ್ಬಿನ ಬೆಳೆಗೆ ರಾತ್ರೊರಾತ್ರಿ ಕಳೆ ನಾಶಕ ಹಾಕುವ ಮೂಲಕ ಬೆಳೆಕುಂಠಿತಗೊಂಡ ಘಟನೆ ತಾಲೂಕಿನ ಹಂಸಬಾವಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ರೈತ ಹೂವಪ್ಪ ರಾಗಿಕೊಪ್ಪ ಎಂಬ ರೈತನಿಗೆ ಸೇರಿದ ಮೂರುವರೆ ಎಕರೆ ಜಮೀನಿನಲ್ಲಿ ಸೊಂಪಾಗಿ ಬೆಳೆದ 5 ತಿಂಗಳ ಕಬ್ಬಿನ ಗದ್ದೆಯಲ್ಲಿದ್ದ ಬೆಳೆ ಇದೀಗ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿ ಬಾಡಿ ಬಸವಳಿದಿದೆ. ಹಂಸಬಾವಿ ಗ್ರಾಮದ ಪ್ರಗತಿಪರ ರೈತ ಹೂವಪ್ಪ ರಾಗಿಕೊಪ್ಪ ಬೇರೆಯವರಿಂದ ಮೂರುವರೆ ಎಕರೆ ಜಮೀನು ಲಾವಣಿ ಪಡೆದುಕೊಂಡು ಅದರಲ್ಲಿ ಕಳೆದ ಜನವರಿ ತಿಂಗಳಲ್ಲಿ ರು. 1 ಲಕ್ಷ ಬಂಡವಾಳ ಹಾಕುವ ಮೂಲಕ ಕಬ್ಬಿನ ನಾಟಿ ಮಾಡಿದ್ದರು.
ಕಳೆದ 5 ತಿಂಗಳಲ್ಲಿ ಕೊಟ್ಟಿಗೆ ಗೊಬ್ಬರ ಹಾಗೂ ರಸಾಯನಿಕ ಗೊಬ್ಬರ ಹಾಕಿ ಸಮಯಕ್ಕೆ ಸರಿಯಾಗಿ ನೀರುಣಿಸಿ, ಹುಲುಸಾಗಿ ಬೆಳೆ ಬೆಳೆಸಿದ್ದರು. ನವೆಂಬರ್ ತಿಂಗಳಲ್ಲಿ ಕಬ್ಬು ಕಟಾವು ಮಾಡಿ ಮಾರಾಟಕ್ಕೆ ಸಿದ್ದವಾಗುತಿತ್ತು. ಆದರೆ, ಇದನ್ನು ಸಹಿಸದ ಯಾರೋ ದುಷ್ಕರ್ಮಿಗಳು ರಾತ್ರಿ ವೇಳೆ ಕಳೆ ನಾಶಕ ಸಿಂಪಡಿಸಿ ಸಂಪೂರ್ಣ ನಾಶಗೊಳಿಸಲು ಯತ್ನಿಸಿದ್ದಾರೆ. ಇದರಿಂದಾಗಿ ಬೆಳೆ ಪ್ರತಿಶತ ಶೇ. 50ರಷ್ಟು ಕುಂಠಿತವಾಗುತ್ತಿದೆ ಎಂದು ರೈತ ಹೂವಪ್ಪ ರಾಗಿಕೊಪ್ಪ ಅಳಲು ತೋಡಿಕೊಂಡರು.
ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದೆ. ಅದಕ್ಕನುಗುಣವಾಗಿ ಸಹಾಯಕ ಕೃಷಿ ನಿರ್ದೇಶಕರು ಬಂದು ಪರಿಶೀಲನೆ ನಡೆಸಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement