ಟ್ಯಾಂಕ್ ಡಿಕ್ಕಿ: ಪೇದೆ ಸಾವು
ರಾಣಿಬೆನ್ನೂರು: ಕಾಗಿನೆಲೆ ಗುರುಪೀಠದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದೋಬಸ್ತ್ಗೆ ತೆರಳಿದ್ದ ಪೊಲೀಸ್ ಪೇದೆಯೊಬ್ಬ ಕಾರ್ಯಕ್ರಮ ಮುಗಿಸಿಕೊಂಡು ವಾಪಸು ರಸ್ತೆ ಮೂಲಕ ದ್ವಿಚಕ್ರ ವಾಹನದಲ್ಲಿ ಠಾಣೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ್ ಟ್ಯಾಂಕ್ರೊಂದು ಗುದ್ದಿದ್ದ ಪರಿಣಾಮ ಪೇದೆ ಸ್ಥಳದಲ್ಲೇ ಸಾವಣ್ಣಪ್ಪಿದ ಘಟನೆ ರಾಣಿಬೆನ್ನೂರು ಬಳಿ ಜರುಗಿದೆ. ಮೃತ ಪೇದೆ ರಾಣಿಬೆನ್ನೂರು ಟ್ರಾಫಿಕ್ ಪೊಲೀಸ್ ಠಾಣೆಯ ಚಂದ್ರಶೇಖರ್ ತಿಪ್ಪಣ್ಣ ಮನೆಗಾರ(45) ಎಂದು ತಿಳಿದು ಬಂದಿದೆ. ಈ ಕುರಿತಂತೆ ರಾಣಿಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಡಿವೈಎಸ್ಪಿ ಶಿವಪ್ರಕಾಶ, ಪಿಎಸ್ಐ ಗೌಡಪ್ಪಗೌಡರ ತನಿಖೆ ಕೈಗೊಂಡಿದ್ದಾರೆ.