ಪಡಿತರಕ್ಕೆ ನೂಕುನುಗ್ಗಲು: ಮಾಹಿತಿ ಕೊರತೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜೂ. 3
ಪಡಿತರ ಸೇವಾಕೇಂದ್ರದ ಎದುರು ನೂಕು ನುಗ್ಗಲು ಉಂಟಾಗಲು ಸರ್ಕಾರದ ಸೂಕ್ತ ಮಾರ್ಗದರ್ಶನ ಕೊರತೆಯೇ ಕಾರಣವೆಂದು ಸಾರ್ವಜನಿಕರು ಆರೋಪಿದ್ದಾರೆ.
ಅಗ್ಗದ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯುವುದಕ್ಕಾಗಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿರುವ ವಿಳಾಸಕ್ಕೆ ತಮ್ಮ ಮೊಬೈಲ್ ಸಂಖ್ಯೆಯಿಂದ ಎಸ್ಎಂಎಸ್ ಕಳುಹಿಸಿ ಮರಳಿ ಉತ್ತರ ಪಡೆದು ರೇಶನ್ ಕಾರ್ಡಿಗಾಗಿ ಪೋಟೋ ತೆಗೆಸಿಕೊಳ್ಳುವುದಕ್ಕಾಗಿ ಜಿಲ್ಲಾ ಮತ್ತು ತಾಲೂಕು ಆಡಳಿತ ನಿಗದಿಪಡಿಸಿರುವ
ನೂಕು ನುಗ್ಗಲು: ನಗರ ಪ್ರದೇಶಗಳಲ್ಲಿ ವಾಸವಾಗಿರುವ ನಿವಾಸಿಗಳಲ್ಲಿ ರೇಶನ್ ಕಾರ್ಡಿನಿಂದ ವಂಚಿತಗೊಂಡಿರುವವರೆಲ್ಲ ಸುಲಭವಾಗಿ ರೇಶನ್ ಕಾರ್ಡು ಪಡೆಯುವುದಕ್ಕಾಗಿ ತಮ್ಮ ಮೊಬೈಲ್ನಿಂದ ಸರ್ಕಾರ ತಿಳಿಸಿರುವ ವಿಳಾಸಕ್ಕೆ ಎಂಎಂಎಸ್ ಕಳುಹಿಸಿ ಪೋಟೋ ತೆಗೆಸಿಕೊಳ್ಳುವಂತೆ ಮರಳಿ ಮೇಸೆಜ್ ಬಂದವರೆಲ್ಲಾ ಪೋಟೋ ತೆಗೆಸಿಕೊಳ್ಳುವುದಕ್ಕಾಗಿ ಜಿಲ್ಲಾ ಮತ್ತು ತಾಲೂಕು ಆಡಳಿತ ಪರವಾನಗಿ ನೀಡಿರುವ ಖಾಸಗಿ ಪಡಿತರ ಸೇವಾಕೇಂದ್ರದ ಎದುರು ಕಳೆದ ಒಂದು ವಾರದಿಂದಿಚೇಗೆ ಭಾರಿ ನೂಕು ನುಗ್ಗಲು ಉಂಟಾಗಿದೆ.
ಭದ್ರತೆ ಒದಗಿಸಿ: ರೇಶನ್ ಕಾರ್ಡುದಾರರ ಭಾವಚಿತ್ರ ತೆಗೆದು ಇ- ಮೇಲ್ನಲ್ಲಿ ಸರ್ಕಾರಕ್ಕೆ ಮಾಹಿತಿ ನೀಡುವುದಕ್ಕಾಗಿ ಗುತ್ತಿಗೆ ಪಡೆದಿರುವ ಅಂಗಡಿಗಳ ಮಾಲೀಕರು ಸಾರ್ವಜನಿಕರಿಂದ ನಿತ್ಯ ನೂರಾರು ತೊಂದರೆಗಳನ್ನು ಅನುಭವಿಸಲು ಹಾಗೂ ಪಡಿತರ ಸೇವಾಕೇಂದ್ರದ ಎದುರು ನೂಕು ನುಗ್ಗಲು ಉಂಟಾಗಲು ಸರ್ಕಾರ ಮತ್ತು ರಾಜ್ಯ ಆಹಾರ, ನಾಗರಿಕ ಸರಬರಾಜು ಇಲಾಖೆ ಸಾರ್ವಜನಿಕರಿಗೆ ಹಾಗೂ ರೇಶನ್ ವಿತರಿಸುವ ಅಂಗಡಿಕಾರರಿಗೆ ಈ ಕುರಿತು ಸರಿಯಾದ ಮಾಹಿತಿ ನೀಡದಿರುವುದು ಸಾರ್ವಜನಿಕರು ತೊಂದರೆ ಅನುಭವಿಸಲು ಕಾರಣವಾಗಿದೆ. ಶೀಘ್ರ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ನಗರದ ಪಡಿತರ ಸೇವಾಕೇಂದ್ರಗಳ ಹತ್ತಿರ ನಿತ್ಯ ನಡೆಯುತ್ತಿರುವ ಗದ್ದಲ, ಗಲಾಟೆಯನ್ನು ನಿಯಂತ್ರಿಸಲು ಸೂಕ್ತ ಬಂದೊಬಸ್ತ್ ಏರ್ಪಡಿಸಬೇಕೆಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ಅಂತಿಮ ದಿನಾಂಕ ಪ್ರಕಟಿಸಿ: ನಗರದ ಹೃದಯ ಭಾಗವಾದ ಪೋಸ್ಟ್ ಸರ್ಕಲ್ನಲ್ಲಿರುವ ರವಿ ಫೋಟೋ ಸ್ಟುಡಿಯೋದಲ್ಲಿ ರೇಶನ್ ಕಾರ್ಡುದಾರರ ಭಾವಚಿತ್ರ ತೆಗೆದು ಇ- ಮೇಲ್ನಲ್ಲಿ ಸರ್ಕಾರಕ್ಕೆ ಮಾಹಿತಿ ನೀಡುವುದಕ್ಕಾಗಿ ಜಿಲ್ಲಾಡಳಿತ ಪರವಾನಗಿ ನೀಡಿದ್ದು, ನಿತ್ಯ ನಗರದ ನೂರಾರು ಜನರು ರೇಶನ್ ಕಾರ್ಡಿಗಾಗಿ ತಮ್ಮ ಭಾವಚಿತ್ರಗಳನ್ನು ಮತ್ತು ಕುಟುಂಬದ ಸಮಗ್ರ ಮಾಹಿತಿಯನ್ನು ಇ- ಮೇಲ್ನಲ್ಲಿ ಸರ್ಕಾರಕ್ಕೆ ರವಾನಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇದರಿಂದಾಗಿ ನಿತ್ಯ ಇಲ್ಲಿ ಉಂಟಾಗುವ ಗದ್ದಲ, ಗಲಾಟೆ ನಿಯಂತ್ರಿಸಲು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ, ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು ಹಾಗೂ ರೇಶನ್ ಕಾರ್ಡು ಪಡೆಯಲು ಸರ್ಕಾರ ನಿಗದಿಪಡಿಸಿರುವ ಅಂತಿಮ ದಿನಾಂಕ ಪ್ರಕಟಿಸಬೇಕೆಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಆಗ್ರಹಿಸಿದ್ದಾರೆ.