ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗಮನ ಸೆಳೆದ ಪ್ರತಿಭಾ ಪ್ರದರ್ಶನ

Mainashree
Updated On : 8 Jun 2013, 10:54 am

ಹಾವೇರಿ: ನವನಾಗರಿಕತೆಯ ಕಾಂಕ್ರೀಟ್ ಕಾಡಿನ ಮನೆಗಳಲ್ಲಿ ಕುಟುಂಬದ ಸದಸ್ಯರು ಕುಳಿತು ಮಾತನಾಡುವುದೇ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ಕುಟುಂಬದಲ್ಲಿ ಸಾಮರಸ್ಯ ಮೂಡಿಸುವ ಕುಟುಂಬ ಮಿಲನ ಸದಸ್ಯರ ಪ್ರತಿಭಾ ಪ್ರದರ್ಶನದ ಸಾಂಸ್ಕೃತಿಕ ಸಂಜೆ ಮನಸ್ಸಿಗೆ ಮುದ ನೀಡಿತು.
ನಗರದ ಕೃಷ್ಣಾ ಏಜನ್ಸಿ ಸಭಾಭವನದಲ್ಲಿ ಭಾರತ ವಿಕಾಸ ಪರಿಷತ್ತಿನ ವರದಾ ಶಾಖೆ ಈ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಿ ಪರಿಷತ್ತಿನ ಸದಸ್ಯರ ಕುಟುಂಬದ ಎಲ್ಲರನ್ನೂ ಒಂದೆಡೆ ಸೇರುವಂತೆ ಮಾಡಿದ್ದು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.
ಬಾಲ ಪ್ರತಿಭೆಗಳಾದ ಐಶ್ವರ್ಯ, ಸಂತೃಪ್ತಿ ಕಡ್ಡಿಪುಡಿ, ಮೇಘನಾ ಹೆಗಡೆ, ಸಾಕ್ಷಿ ಹೆಗಡೆ, ಕೃತಿ ಮಂಗಳೂರ ಜಾನಪದ ನೃತ್ಯ ಪ್ರದರ್ಶಿಸಿದರೆ, ಗೃಹಿಣಿಯರಾದ ವಿಮಲಾ ಹೆಗಡೆ, ಗೀತಾ ಮಂಗಳೂರ, ಸ್ವಾತಿ ಮಂಗಳೂರ ಹಾಗೂ ಪಿ.ಬಿ. ಹೆಬ್ಬಳ್ಳಿ ಮುಂತಾದವರು ವಚನ ಭಕ್ತಿಗೀತೆ, ಜಾನಪದ ಗೀತೆ ಹಾಗೂ ಭಾವಗೀತೆಗಳನ್ನು ಹಾಡುವುದರ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಇದೇ ಸಂದರ್ಭ ಪರಿಷತ್ತಿನ ಹಿರಿಯ ಉಪಾಧ್ಯಕ್ಷ ಡಿ.ಆರ್. ಖೈನ್ನವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಕೌಟುಂಬಿಕ ಸಂಬಂಧಗಳು ನಾಗರಿಕತೆ ಹೆಸರಿನಲ್ಲಿ ಸಮಾಧಿಯಾಗುತ್ತಿದ್ದು, ಆಧುನಿಕ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಇಂತಹ ಕಾರ್ಯಕ್ರಮಗಳು ಕುಟುಂಬದ ಎಲ್ಲರನ್ನು ಒಂದೆಡೆ ಸೇರುವಂತೆ ಮಾಡಿ ಪರಸ್ಪರ ಪರಿಚಯ, ಸುಖ, ದುಖಃಗಳನ್ನು ಹಂಚಿಕೊಳ್ಳಲು ಹಾಗೂ ಪ್ರತಿಭೆಗಳನ್ನು ಗುರುತಿಸಲು ಸಹಾಯವಾಗುತ್ತಿದೆ ಎಂದು ಪರಿಷತ್ತಿನ ಮತ್ತೊಬ್ಬ ಉಪಾಧ್ಯಕ್ಷ ಹನುಮಂತಗೌಡ ಗೊಲ್ಲರರವರು ಸಂದರ್ಭಯೋಚಿತವಾಗಿ ತಿಳಿಸಿದರು.
ಪರಿಷತ್ತಿನ ಉತ್ತರ ಕರ್ನಾಟಕ ಪ್ರಾಂತ್ಯದ ಕಾರ್ಯದರ್ಶಿ ಡಾ೤ ಪ್ರಮೋದ ಬಾಸರಕರ, ನಿವೃತ್ತ ಪ್ರಾಚಾರ್ಯ ಸಿ.ಸಿ. ಪ್ರಭುಗೌಡ್ರ, ಪರಿಷತ್ತಿನ ಅಧ್ಯಕ್ಷರಾದ ಪ್ರಭಾಕರರಾವ ಮಂಗಳೂರ ಸೇರಿದಂತೆ ಪರಿಷತ್ತಿನ ಶ್ರೀಧರ ಬಳ್ಳಿ, ರಘು ಚವ್ಹಾಣ ಪಾಲ್ಗೊಂಡಿದ್ದರು. ಕಾರ್ಯದರ್ಶಿಗಳಾದ ಕಮಲಾಕರ ಹೆಗಡೆ ಸ್ವಾಗತಿಸಿದರು. ವೀರೇಂದ್ರ ಮಾಳಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement