ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜನಸೇವೆಗೆ ಅಂಚೆ ಕಚೇರಿಗಳು ಸದಾ ಸಿದ್ಧ: ಕೆ.ಸಿ. ದೀಪಾ

Mainashree
Updated On : 9 Jun 2013, 11:53 am

ಬ್ಯಾಡಗಿ: ಅಂಚೆ ಕಚೇರಿಗಳು ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಉತ್ತಮ ಹಾಗೂ ತ್ವರಿತ ಸೇವೆಯನ್ನು ನೀಡಲು ಸಿದ್ಧಗೊಳ್ಳುತ್ತಿವೆ ಎಂದು ಸಹಾಯಕ ಅಧೀಕ್ಷಕಿ ಕೆ.ಸಿ. ದೀಪಾ ಹೇಳಿದರು.
ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ನೂತನ ಅಂಚೆ ಕಚೇರಿ ಉದ್ಘಾಟಿಸಿ ಮಾತನಾಡಿದರು. ಆಂಗ್ಲರ ಕಾಲದಿಂದಲೂ ದೇಶದಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿರುವ ಅಂಚೆ ಕಚೇರಿಗಳು ಇಂದಿಗೂ ದೇಶದ ಪ್ರತಿ ಮೂಲೆ ಮೂಲೆಗೂ ತನ್ನ ಸೇವೆಯನ್ನು ವಿಸ್ತರಿಸಿರುವುದು ಹೆಮ್ಮೆಯ ವಿಷಯ ಎಂದರು.
ಸರ್ಕಾರ ಸಾರ್ವಜನಿಕರಿಗೆ ನೀಡುವ ಮೂಲಭೂತ ಸೌಕರ್ಯಯಗಳಲ್ಲಿ ಅಂಚೆ ಕಚೇರಿಯು ಕೂಡ ಒಂದಾಗಿದ್ದು, ಅವುಗಳಿಲ್ಲದೇ ಜನರು ಜೀವನ ನಡೆಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅನಿವಾರ್ಯ ಎನಿಸಿಕೊಂಡಿವೆ. ಪೋಸ್ಟ್‌ಮನ್‌ಗಳು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಗೆ ಪ್ರತಿಗ್ರಾಮದಲ್ಲಿಯೂ ಸಾರ್ವಜನಿಕರಿಂದ ಗೌರವ ಲಭ್ಯವಾಗುತ್ತಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನವು ಬಹಳಷ್ಟು ವೇಗವಾಗಿ ಬೆಳೆಯುತ್ತಿದ್ದು, ಎಲ್ಲ ಅಂಚೆ ಕಚೇರಿಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಮೇಲ್ದರ್ಜೆಗೇರಿಸುವ ಮೂಲಕ ಅಮೂಲಾಗ್ರ ಬದಲಾವಣೆಯಾಗಬೇಕಾಗಿದೆ. ಇತ್ತೀಚಿಗೆ ಆರಂಭವಾದ ಕೋರಿಯರ್ ವ್ಯವಸ್ಥೆಯ ಹಾವಳಿಗೆ ಅಂಚೆ ಕಚೇರಿಗಳು ನಲುಗಿವೆ ಎಂದ ಅವರು, ಸಾರ್ವಜನಿಕರ ಮನಸ್ಥಿತಿಗೆ ತಕ್ಕಂತೆ ಕೆಲಸ ಮಾಡಿದಾಗ ಅಂಚೆ ವ್ಯವಸ್ಥೆ ಜೀವಂತವಾಗಿಡಲು ಸಾಧ್ಯ ಎಂದರು.
ಗ್ರಾಪಂ ಅಧ್ಯಕ್ಷೆ ಕಮಲಾಬಾಯಿ ಹಮ್ಮಿಗಿ, ಸದಸ್ಯರಾದ ಎಸ್.ಎಚ್.ಪೂಜಾರ, ಹನುಮಂತಪ್ಪ ಕಾಡಮ್ಮನವರ, ಎಂ.ಜಿ. ಬಡಿಗೇರ, ಅಭಿವೃದ್ಧಿ ಅಧಿಕಾರಿ ಪಿ.ಎಚ್. ಪೂಜಾರ, ಬ್ಯಾಡಗಿ ಪೋಸ್ಟ್ ಮಾಸ್ಟರ್ ಎಸ್. ದೊಡ್ಮನಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಿ.ಎಂ. ಜಗಾಪುರ, ಅಂಚೆ ಕಚೇರಿ ಸಿಬ್ಬಂದಿ ಸರಿತಾ, ಕವಿತಾ, ಗೋಪಾಲ, ಭೀಮಣ್ಣ ಅಂಗಡಿ ಇತರರು ಇದ್ದರು. ಐ.ವಿ. ಶಿರಗೂರ, ಸಿ.ಎಂ. ಬಿಳಿಚೋಡ ಸ್ವಾಗತಿಸಿ, ಡಿ.ಕೆ. ಹಳ್ಳೇರ ನಿರೂಪಿಸಿದರು. ಎಂ.ಪಿ. ಜಿಂಗಾಡೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement