ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರಗೆ ಅಭಿನಂದನೆ
ಶಿಗ್ಗಾಂವಿ: ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಕಾಂಗ್ರೆಸ್ ಪಕ್ಷದಿಂದ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ನೇತೃತ್ವದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 224 ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧೀಕೃತವಾಗಿ 121 ಅಭ್ಯರ್ಥಿಗಳ ಸ್ಥಾನ ಗೆಲ್ಲಲು ಸಾಧ್ಯವಾಯಿತು ಎಂದು ರಾಜ್ಯ ಹಿಂದುಳಿದ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶಿವಾನಂದ ರಾಮಗೇರಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರನ್ನು ಅಭಿನಂದಿಸಿದರು.
ರಾಜ್ಯದ ಜನತೆ ತಮ್ಮ ಮೇಲೆ ಅಭಿಮಾನದಿಂದ ಮತ ಚಲಾವಣೆ ಮಾಡಿ ಆಶೀರ್ವಾದ ಮಾಡಿದ್ದು, ಬಡವರ, ದಿನ ದಲಿತರ, ರೈತರ ಕೃಷಿ ಕಾರ್ಮಿಕರ, ಅಂಗವಿಕಲರ, ವಯೋವೃದ್ಧ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ, ಸೂರು ಇಲ್ಲದವರಿಗೆ ಮನೆಗಳು, ರೈತರ ಸಾಲಮನ್ನಾ ಗ್ರಾಮೀಣ ಪ್ರದೇಶದ ಎಲ್ಲ ವರ್ಗದ ಸಾಮಾನ್ಯ ಜನರಿಗೆ ಸರ್ಕಾರಿ ಸೌಲಭ್ಯಗಳು ನೇರವಾಗಿ ಸಿಗುವಂತೆ ಮಾಡುವ ವ್ಯವಸ್ಥೆ ಮಾಡಬೇಕೆಂದು ತಮ್ಮಲ್ಲಿ ಕೋರುತ್ತೇವೆ ಎಂದು ಶಿವಾನಂದ ರಾಮಗೇರಿ ಕೋರಿದರು.
ರಾಜ್ಯದಲ್ಲಿ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಎಲ್ಲ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ತಮ್ಮ ಹಿರಿತನದಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲುವಂತೆ ಆಗಲಿ ಎಂದು ಪರಮೇಶ್ವರಗೆ ಹಾರೈಸಿದ ಮುಖಂಡರು, ಶಿಗ್ಗಾಂವಿ-ಸವಣೂರು ವಿಧಾನಸಭೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಪರ ಪರಮೇಶ್ವರಗೆ ಅಭಿನಂದಿಸಲಾಯಿತು.