ಗ್ರಾಮ ಸಂಪೂರ್ಣ ಸ್ವಚ್ಛತೆ ಕೈಗೊಳ್ಳಿ
ಶಿಗ್ಗಾಂವಿ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಡೆಂಘೀ ಹಾಗೂ ಮಲೇರಿಯಾ, ಚಿಕೂನ್‌ಗುನ್ಯ ಸೇರಿದಂತೆ ಹಲವಾರು ರೋಗಗಳು ಹರಡುತ್ತಿರುವುದರಿಂದ ಸ್ಥಳಿಯ ಗ್ರಾಮ ಪಂಚಾಯಿತಿಯವರು ಪೂರ್ವ ನಿಯೋಜಿತವಾಗಿ ಫಾಗಿಂಗ್ ಮಾಡುತ್ತಿರುವುದರಿಂದ ರೋಗಗಳು ಹರಡದಂತೆ ತಡೆಗಟ್ಟಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ತಾಲೂಕಿನ ಕುನ್ನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಅಲ್ಲಲ್ಲಿ ಚರಂಡಿಗಳ್ನು ಸ್ವಚ್ಛ ಮಾಡದೆ ಕೇವಲ ಪಾಗಿಂಗ್ ಯಂತ್ರದಿಂದ ಮಾತ್ರ ಹೊಗೆ ಸಿಂಪಡಿಸಿದರೆ ಸಾಲದು ತಕ್ಷಣ ಗ್ರಾಮದಲ್ಲಿರುವ ಚರಂಡಿಗಳನ್ನು ಸ್ವಚ್ಛ ಮಾಡಿ ಸೊಳ್ಳೆಗಳ ಉತ್ಪಾದನಾ ಕೇಂದ್ರವನ್ನು ದುರಸ್ತಿಪಡಿಸಿ ಸ್ವಚ್ಛತೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಮಾತ್ರ ಪಾಗಿಂಗ್ ಮಾಡಿದರೆ ಸಾಲದು ಆರೋಗ್ಯ ಇಲಾಖೆ, ಸ್ಥಳಿಯ ಸಂಸ್ಥೆಗಳ ಕಾರ್ಯಕರ್ತರು ಗ್ರಾಮದ ಸ್ವಚ್ಛತೆ ಹಾಗೂ ಸಾರ್ವಜನಿಕರಿಗೆ ರೋಗಗಳು ಹರಡದಂತೆ ತಿಳಿವಳಿಕೆ ನೀಡಬೇಕು ಎಂದರು. ಮಡ್ಲಿ ಗ್ರಾಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಚರಂಡಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಮೊದಲೇ ತಿಳಿಸುವಂತಾಗಬೇಕು. ಸರ್ಕಾರ ರೋಗಗಳು ಬಾರದಂತೆ ಪೂರ್ವ ನಿಯೋಜಿತ ಫಾಗಿಂಗ್ ಮಾಡಲು ತಿಳಿಸಿದರು. ಗ್ರಾಪಂದವರು ಫಾಗಿಂಗ್ ಯಂತ್ರ ಸರಿ ಇರುವುದಿಲ್ಲ ಎಂದು ತಿಳಿಸಿದ್ದು, ತಕ್ಷಣ ಕ್ರಮ ಜರುಗಿಸಲು ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.