ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕನ್ನಡ ಕಾಪಾಡುವ ಕೆಲಸ ನಿರಂತರವಾಗಲಿ: ಯಲಿಗಾರ

Vishwanath S
Updated On : 11 Jun 2013, 11:11 am

ಶಿಗ್ಗಾಂವಿ: ಜಗತ್ತಿನ ಐದು ಸಾವಿರ ಭಾಷೆಗಳಲ್ಲಿ ಕನ್ನಡ 8ನೇ ಸ್ಥಾನದಲ್ಲಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಧಕ್ಕೆ ಇಂದಿಗೂ ತಪ್ಪಿಲ್ಲ. ಕನ್ನಡವನ್ನ ಕಾಪಾಡುವ ಕೆಲಸ ನಿತ್ಯ ನಿರಂತರವಾಗಿ ನಡೆಯಬೇಕಿದೆ ಎಂದು ಸಾಹಿತಿ ಬ.ಫ. ಯಲಿಗಾರ ಹೇಳಿದ್ದಾರೆ.
ಭಾನುವಾರ ತಮ್ಮ ನಿವಾಸ 'ರಸರಿಷಿ'ಯಲ್ಲಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕೃತ ಆಹ್ವಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಾವಿರಾರು ವರ್ಷಗಳಿಂದ ಕನ್ನಡ ಭಾಷೆಯ ಮೇಲೆ ಸತತವಾಗಿ ದಾಳಿಯಾಗುತ್ತಾ ಬಂದಿದೆ. ಇದಕ್ಕೆ ಇಂದಿನ ಜನಾಂಗ ಇಂಗ್ಲಿಷ್ ಮೇಲಿಟ್ಟಿರುವ ವ್ಯಾಮೋಹವೇ ಮೂಲ ಕಾರಣ ಎಂದರು.
ಈ ಹಿಂದೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗುವ ನಿರೀಕ್ಷೆ ಹೊಂದಿದ್ದೆ ಎಂದ ಬ.ಫ. ಯಲಿಗಾರ ಅದು ಈಡೇರದಿದ್ದರೂ, ನನ್ನ ತಾಲೂಕಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ತುಂಬಾ ಖುಷಿ ಕೊಟ್ಟಿದೆ. ಕನ್ನಡದ ಮೇಲಿನ ಕಾಳಜಿ ಅಭಿಮಾನವನ್ನ ಹಂಚಿಕೊಳ್ಳಲು ಉತ್ತಮ ವೇದಿಕೆ ದೊರೆತಿದ್ದು, ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಕನ್ನಡದ ಬೆಳವಣಿಗೆಗೆ ಹೆಚ್ಚು ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಸಮ್ಮೇಳನದ ತಮ್ಮ ನುಡಿಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement