ಟೋಲ್ಗೇಟ್ಗೆ ಡಿಕ್ಕಿ: ಓರ್ವ ಸಾವು
ಶಿಗ್ಗಾಂವಿ: ಟವೆರಾ ಕಾರೊಂದು ಟೊಲ್ಗೇಟ್ ನಾಮಫಲಕದ ಕಟ್ಟೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ತೀವ್ರ ಗಾಯಗೊಂಡ ಘಟನೆ ತಾಲೂಕಿನ ಬಂಕಾಪುರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಜರುಗಿದೆ.
ಮೋಹನ ದಾದಾಸಾಹೇಬ ದಾಬೇರ್ (59) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದ್ದು, ಗಾಯಗೊಂಡ ಸಚಿನ್ ಹಾಗೂ ರಾಹುಲ್ ಎಂಬುವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂನಾದಿಂದ ಬೆಂಗಳೂರಿಗೆ ವೇಗವಾಗಿ ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಆರ್.ಎಫ್. ದೇಸಾಯಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.