ಮಾನಸಿಕ ಅಸ್ವಸ್ಥ ಆಸ್ಪತ್ರೆಗೆ ದಾಖಲು
ರಾಣಿಬೆನ್ನೂರು: ಕಳೆದ 3 ವರ್ಷಗಳಿಂದ ಮಾವನಿಂದ ಗೃಹ ಬಂಧನದಲ್ಲಿದ್ದು, ಇತ್ತೀಚೆಗೆ ಪೊಲೀಸರಿಂದ ಬಿಡುಗಡೆಗೊಂಡಿದ್ದ ತಾಲೂಕಿನ ಬೇಲೂರು ಗ್ರಾಮದ ಹನುಮಂತಪ್ಪ ಭೀಮಪ್ಪ ಕ್ಯಾತಪ್ಪನವರ (ರಾಟಿ) ಶನಿವಾರ ರಾತ್ರಿ ಕಾಣಿಯಾಗಿದ್ದು, ಭಾನುವಾರ ಬೆಳಗ್ಗೆ ಪತ್ತೆಯಾಗಿದ್ದಾನೆಂದು ಹನುಮಂತಪ್ಪ ಕ್ಯಾತಪ್ಪನವರ (ರಾಟಿ) ಇವರ ಅಕ್ಕನ ಮಗನಾದ (ಅಳಿಯ) ಕುಮಾರ ಹೂನ್ನತ್ತೆಪ್ಪನವರ ಪತ್ರಿಕೆಗೆ ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಧನಾಗಿರುವ ಹನುಮಂತಪ್ಪ ಕ್ಯಾತಪ್ಪನವರ ಇತನಿಗೆ ಸುಮಾರು 50 ವರ್ಷ ವಯಸ್ಸಾಗಿದ್ದು, ಸುಮಾರು 30 ವರ್ಷಗಳಿಂದೀಚೆಗೆ ಮಾನಸಿಕ ಅಸ್ವಸ್ತತೆ ತೀರಾ ಹೆಚ್ಚಾಗಿ ಗ್ರಾಮದಲ್ಲಿ ಈತನ ಉಪಟಳ ಹೆಚ್ಚಾದ ಕಾರಣ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಶನಿವಾರ ರಾತ್ರಿ ಮನೆಯವರೆಲ್ಲ ಮಲಗಿದ್ದ ಸಮಯ ಕಾಣಿಯಾಗಿದ್ದ ಹನುಮಂತಪ್ಪನನ್ನು ಗ್ರಾಮಸ್ಥರ ಸಹಕಾರದೊಂದಿಗೆ ಹುಡುಕಾಡಿದ ಬಳಿಕ ತಾಲೂಕಿನ ಮಡ್ಲೇರಿ ಗ್ರಾಮದ ಹತ್ತಿರ ವ್ಯಕ್ತಿ ಇರುವುದು ಕಂಡು ಬಂದಿದ್ದು, ಕಾಣಿಯಾದ ನಂತರ ಪತ್ತೆಯಾಗಿರುವ ವ್ಯಕ್ತಿಯನ್ನು ಮರಳಿ ಬೇಲೂರು ಗ್ರಾಮದಲ್ಲಿರುವ ಆತನ ಮನೆಗೆ ಕರೆದೊಯ್ದು ಉಪಚರಿಸಿದ ಬಳಿಕ ದಾವಣಗೇರಿಯಲ್ಲಿರುವ ಮಾನಸಿಕ ಆಸ್ಪತ್ರೆಗೆ ದಾಖಲಿಸಿರುವುದಾಗಿ ಕುಮಾರ ತಿಳಿಸಿದ್ದಾರೆ.