ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಡೆಂಘೀಯಿಂದ ಎಚ್ಚರವಾಗಿರಿ

Vishwanath S
Updated On : 12 Jun 2013, 11:00 am

ಹಿರೇಕೆರೂರು: ಡೆಂಘಿ ಜ್ವರ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದ್ದು, ಇದು ಸೋಂಕು ಹೊಂದಿದ ಇಜಿಪ್ಟೈ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಕಾರಣ ಸೊಳ್ಳೆಗಳ ನಾಶಪಡಿಸುವಿಕೆ ಮೂಲಕ ಜನ ಜಾಗೃತರಾಗಬೇಕು ಎಂದು ಆರೋಗ್ಯ ಸಹಾಯಕಿ ಶಹನಾಜ ಎನ್. ಬಿಜಾಪುರ ತಿಳಿಸಿದರು.
ತಾಲೂಕಿನ ವಡೆಯನಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣಲ್ಲಿ ಹಂಸಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅರಳಿ ಕಟ್ಟಿ ಉಪ ಆರೋಗ್ಯ ಕೇಂದ್ರಗಳ ವತಿಯಿಂದ ಏರ್ಪಡಿಸಿದ್ದ ಡೆಂಘೀ ಜ್ವರದ ಜನಜಾಗೃತಿ ಶಿಬಿರದಲ್ಲಿ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಿದರು.
ಜಾಗೃತಿ ವಹಿಸಿ: ಇಜಿಪ್ಟೈ ಸೊಳ್ಳೆಗಳು ಸಂತಾನಾಭಿವೃದ್ಧಿಯನ್ನು ಸ್ವಚ್ಛ ನೀರಿನಲ್ಲಿ ಮಾಡುತ್ತಿವೆ. ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಈ ರೋಗದ ಲಕ್ಷಣವು ಇದ್ದಕ್ಕಿದ್ದಂತೆ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ತೀವ್ರ ಸ್ಥಿತಿಯಲ್ಲಿ ಬಾಯಿಯ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವದ ಗುರುತುಗಳು ಕಾಣುತ್ತವೆ. ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಈ ರೋಗದ ಹತೋಟಿಗಾಗಿ ಸೊಳ್ಳೆಗಳ ನಾಶಕ್ಕೆ ನೀರಿನ ತೊಟ್ಟಿ, ಡ್ರಮ್ಮು ಬ್ಯಾರೆಲ್, ಮಣ್ಣಿನ ಮಡಕೆ, ಉಪಯೋಗಿಸದ ಒರಳು ಕಲ್ಲು ಇತರೆಡೆ ಶೇಖರವಾಗುವ ನೀರನ್ನು ಸ್ವಚ್ಛಗೊಳಿಸಬೇಕು. ಇದರಲ್ಲಿ ಸಮುದಾಯ ಪಾತ್ರ ಮುಖ್ಯವಾಗಿದ್ದು, ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಮುಖ್ಯೋಪಾಧ್ಯಾಯ ಎ.ಎನ್. ಹೆಡಿಯಾಲ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಹಾಯಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement