ನಾಳೆ ಸನ್ಮಾನ, ಪ್ರತಿಭಾ ಪುರಸ್ಕಾರ
ಹಾನಗಲ್ಲ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾನಗಲ್ಲ ತಾಲೂಕು ಘಟಕ ಜೂ. 13ರಂದು 'ಅರಿವಿನ ಅಂಗಳ' ಕಾರ್ಯಕ್ರಮದಡಿ ನಿವೃತ್ತರ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಿದೆ.
ಅಂದು ಸಂಜೆ 5-30ಕ್ಕೆ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಹಾವೇರಿ ಜಿಲ್ಲಾ ಗೌರವಾಧ್ಯಕ್ಷ ಪ್ರೊ ಎನ್.ವಿ. ಕಂಬಾಳಿಮಠ ಉದ್ಘಾಟಿಸುವರು. ತಾಲೂಕು ಘಟಕದ ಅಧ್ಯಕ್ಷ ನಿರಂಜನ ಗುಡಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಮಾರುತಿ ಶಿಡ್ಲಾಪುರ ಆಶಯ ಮಾತುಗಳನ್ನಾಡುವರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಎಸ್.ಜಿ. ಛತ್ರದ, ಸಹಕಾರ ಇಲಾಖೆಯ ಸಿದ್ದಣ್ಣ ಕರಡಿ, ಶಿಕ್ಷಣ ಇಲಾಖೆಯ ಶ್ರೀ ಕುಮಾರೇಶ್ವರ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಎನ್.ಬಿ. ಕನವಳ್ಳಿ, ಅಧೀಕ್ಷಕ ಟಿ.ಎಚ್. ಮುತ್ತಳ್ಳಿ, ಆರೋಗ್ಯ ಇಲಾಖೆಯ ಎನ್.ಎಸ್. ಪಾಟೀಲ ಅವರನ್ನು ಸನ್ಮಾನಿಸಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿ ತರಗತಿಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಾದ ರೋಶನಿ ಪ್ರೌಢಶಾಲೆಯ ಐಶ್ವರ್ಯ ಹಿರೇಮಠ, ಹಳ್ಳಿಬೈಲ್ ಮೊರಾರ್ಜಿ ದೇಸಾಯಿ ಪ್ರೌಢಶಾಲೆಯ ಮೇಘಾ ಅರಳೇಶ್ವರ, ಅಕ್ಕಿಆಲೂರು ಎನ್ಡಿ ಪಿ.ಯು. ಕಾಲೇಜಿನ ಪೂಜಾ ಪಾವಲಿ, ಹಾನಗಲ್ಲಿನ ನ್ಯೂ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಂಗಳಾ ಅರಳೇಶ್ವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಜಿಲ್ಲಾಧ್ಯಕ್ಷ ಎಸ್.ಬಿ. ಕಿನ್ನಾಳ, ಬಿ.ಐ. ಹುನುಗುಂದ, ಮಾಲತೇಶ ಮಲಗುಂದ, ಸಿ.ಜಿ. ಪಾಟೀಲ, ಎಸ್.ಸಿ. ವಿರಕ್ತಮಠ, ರಾಕೇಶ ಜಿಗಳಿ ಇನ್ನಿತರರು ಪಾಲ್ಗೊಳ್ಳುವರು.