ಹಾವೇರಿ: ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಹಾವೇರಿ: ಪ್ರಸಕ್ತ ಸಾಲಿನ ಡಿ.ಇಡಿ ಡಿಪಿ ಇಡಿ ಕೋರ್ಸುಗಳ ವ್ಯಾಸಂಗಕ್ಕಾಗಿ ಆಸಕ್ತ ವಿದ್ಯಾರ್ಥಿಗಳು ಅರ್ಜಿಗಳನ್ನು ಆನ್ಲೈನ್ ಮೂಲಕ ಜೂ. 6ರಿಂದ 20ರೊಳಗಾಗಿ ಸಲ್ಲಿಸಬೇಕೆಂದು ಡಯಟ್ ಪ್ರಾಚಾರ್ಯ ಎಂ.ಡಿ. ಬಳ್ಳಾರಿ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಢಿಢಿಢಿ.ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.
ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ
ಹಾನಗಲ್ಲ: ಬಾಲ ಕಾರ್ಮಿಕರನ್ನು ಬಳಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ದಂಡಾರ್ಹ ಅಪರಾಧವಾಗಿದೆ ಎಂದು ಹಾನಗಲ್ಲ ಸಿವಿಲ್ ಹಿರಿಯ ವಿಭಾಗದ ನ್ಯಾಯಾಧೀಶ ಎಂ. ರಾಮಚಂದ್ರ ಹೇಳಿದರು. ಬುಧವಾರ ಹಾನಗಲ್ಲ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಂಗ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಹೋಟೆಲ್, ಕಾರ್ಖಾನೆ ಹಾಗೂ ಮನೆ ತಯಾರಿಕೆಯಲ್ಲಿ ಬಾಲಕಾರ್ಮಿಕರನ್ನು ಅವ್ಯಾಹತವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂಥ ಅಕ್ರಮ ತಡೆಗಟ್ಟಲು ಸಾರ್ವಜನಿಕರು ಇಲಾಖೆಗಳೊಂದಿಗೆ ಸಹಕರಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಬಿ.ಆರ್. ಶೆಟ್ಟರ್ ಮಾತನಾಡಿದರು. ಹಾನಗಲ್ಲ ಸಿವಿಲ್ ಕಿರಿಯ ವಿಭಾಗದ ನ್ಯಾಯಾಧೀಶ ಮದ್ವೇಶ ದಬೇರ, ರವಿ ಒಡೆಯರ, ಬಿ.ಎಸ್. ಅಕ್ಕಿವಳ್ಳಿ, ಜಿ.ವಿ. ಕಂಬಾಳಿಮಠ, ಬಿಇಓ ವಿ.ವಿ. ಸಾಲಿಮಠ, ಎಸ್.ಎಫ್. ಕೆಂಗಮ್ಮನವರ, ಜೆ.ಸಿ. ಕಾಳಂಗಿ, ಎಸ್.ಆರ್. ಅಂಗಡಿ ಇದ್ದರು. ಬಿ.ಎಸ್. ಕರೆಣ್ಣನವರ ಸ್ವಾಗತಿಸಿದರು. ನ್ಯಾಯವಾದಿ ರವಿಬಾಬು ಪೂಜಾರ ನಿರ್ವಹಿಸಿದರು. ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ನಿಮಿತ್ತ ಶಾಲೆ ಮಕ್ಕಳಿಂದ ನಡೆದ ಜನಜಾಗೃತಿ ಜಾಥಾಕ್ಕೆ ಹಾನಗಲ್ಲ ಸಿವಿಲ್ ಕಿರಿಯ ವಿಭಾಗದ ನ್ಯಾಯಾಧೀಶ ಮದ್ವೇಶ ದಬೇರ ಚಾಲನೆ ನೀಡಿದರು. ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.