ರಿಯಾಯಿತಿ ಬಸ್ಪಾಸ್ ವಿತರಣೆ
ಹಾವೇರಿ: ವಾಕರ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದಿಂದ 2013-14ನೇ ಸಾಲಿಗೆ ವಿದ್ಯಾರ್ಥಿ ರಿಯಾಯಿತಿ ಬಸ್ಪಾಸ್ ವಿತರಿಸಲು ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಜೂ. 10ರಿಂದ ವಿವಿಧ ಶಿಕ್ಷಣ ಸಂಸ್ಥೆಯ ಮೂಲಕ ವಿತರಿಸಲು ಕ್ರಮ ಕೈಕೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ನಿಗದಿತ ಶುಲ್ಕ, ಅಗತ್ಯ ದಾಖಲಾತಿಯೊಂದಿಗೆ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಯ ಮೂಲಕ ಸಂಸ್ಥೆಗೆ ಸಲ್ಲಿಸಿ ಬಸ್ಪಾಸ್ಗಳನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಶೈಕ್ಷಣಿಕ ಸಂಸ್ಥೆಯಿಂದ ಅವರ ವಾಸ ಸ್ಥಳಕ್ಕೆ 60 ಕೀ.ಮೀ ಗರಿಷ್ಠ ಅಂತರವಿರುವ ವಿದ್ಯಾರ್ಥಿಗಳು ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.