ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನ್ಯಾಯ ಒದಗಿಸುವ ನಾಯಕರು ಬೇಕು

Lingaraj Badiger
Updated On : 15 Jun 2013, 12:07 pm

ಹಾನಗಲ್ಲ:  ಮೀಸಲಾತಿ ರಹಿತ ಸಮಾಜ, ಸರಕಾರ ರಚಿಸುವ ಜಾತಿಯ ಒಂದು ಪಕ್ಷ ಈಗ ಭಾರತ ದೇಶದ ಅವಶ್ಯಕತೆಯಾಗಿದ್ದು, ಪ್ರತಿಭೆ ಆಧಾರಿತ ಉದ್ಯೋಗ ಅವಕಾಶಗಳು ಲಭಿಸುವ ಮೂಲಕ ಸಾಮಾಜಿಕ ನ್ಯಾಯ ನೀಡುವ ನಾಯಕರು ಪ್ರಸಕ್ತ ಬೇಕಾಗಿದ್ದಾರೆ ಎಂದು ಹಾವೇರಿ ಜಿ.ಎಚ್. ಕಾಲೇಜಿನ ಪ್ರೊ೤ ಎನ್.ವಿ. ಕಂಬಾಳಿಮಠ ನುಡಿದರು.
ಹಾನಗಲ್ಲಿನಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 'ಅರಿವಿನ ಅಂಗಳ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಬಹುಸಂಖ್ಯಾತ ಲಿಂಗಾಯತರೇ ಸರ್ಕಾರದಲ್ಲಿನ ಅವಕಾಶ, ಅನುದಾನ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಲಿಂಗಾಯತರ ಸಂಘಟನೆ ಅನ್ಯ ಕಾರಣಕ್ಕೆ ಕ್ಷೀಣಿಸುತ್ತಿದ್ದು, ಈಗ ಪುನರ್ ಸಂಘಟನೆ ಅನಿವಾರ್ಯ ಹಾಗೂ ಅತ್ಯಗತ್ಯ. ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಲು ಸಂಘಟಿತ ಹೋರಾಟ ಬೇಕಾಗಿದೆ. ಲಿಂಗಾಯತರು ಈಗಲೂ ಒಂದಾಗದಿದ್ದರೆ ಭವಿಷ್ಯದಲ್ಲಿ ಶಾಪಗ್ರಸ್ತವಾಗಿ ನಮ್ಮ ಪೀಳಿಗೆ ಬಿಟ್ಟು ಹೋಗಬೇಕಾಗುತ್ತದೆ. ಪ್ರತಿಭೆ ಆಧಾರಿತ ಉದ್ಯೋಗಾವಕಾಶಗಳು ಬೇಕು ಎಂದ ಅವರು, ಲಿಂಗಾಯತರ ಮೇಲೆ ಕೊಡಲಿ ಬೀಸಿದರೆ ಇನ್ನು ಸುಮ್ಮನಿರುವುದಿಲ್ಲ, ಎಂಥ ಪರಿಸ್ಥಿತಿಯಲ್ಲಿಯೂ ಧೃತಿಗೆಡದೇ ಹೋರಾಟಕ್ಕೆ ಸಜ್ಜುಗೊಳ್ಳುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ಸಾಹಿತಿ ಪ್ರೊ೤ ಮಾರುತಿ ಶಿಡ್ಲಾಪೂರ ಆಶಯ ಭಾಷಣ ಮಾಡಿ, ಶೈಕ್ಷಣಿಕ ಉನ್ನತಿಗೆ ಅವಕಾಶಗಳನ್ನು ನೀಡಿ ಭವಿಷ್ಯದಲ್ಲಿ ಪ್ರತಿಭಾವಂತರನ್ನು ಪ್ರೋತ್ಸಾಹಿಸಬೇಕಾಗಿದೆ. ಸಂಘಟನೆಗಳು ಸದುದ್ದೇಶದಿಂದ ಜೀವಂತವಾಗಿರಬೇಕು ಎಂದರು.
ತಾಲೂಕು ಘಟಕದ ಅಧ್ಯಕ್ಷ ನಿರಂಜನ ಗುಡಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಕಂದಾಯ ಇಲಾಖೆ ನಿವೃತ್ತ ಅಧಿಕಾರಿ ಎಸ್.ಜಿ. ಛತ್ರದ, ಸಹಕಾರ ಇಲಾಖೆಯ ಸಿದ್ದಣ್ಣ ಕರಡಿ, ಶಿಕ್ಷಣ ಇಲಾಖೆಯ ಪ್ರೊ೤ ಎನ್.ಬಿ. ಕನವಳ್ಳಿ ಅವರನ್ನು ಸನ್ಮಾನಿಸಲಾಯಿತು.
ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಲಿಂಗಾಯತ ವಿದ್ಯಾರ್ಥಿಗಳಾದ ಅಕ್ಕಿಆಲೂರು ಎನ್‌ಡಿ ಪಿಯು ಕಾಲೇಜಿನ ಪೂಜಾ ಪಾವಲಿ, ಹಾನಗಲ್ಲ ಎನ್‌ಸಿಜೆಸಿ ಕಾಲೇಜಿನ ಮಂಗಳಾ ಅರಳೇಶ್ವರ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ರೋಶನಿ ಪ್ರೌಢಶಾಲೆಯ ಐಶ್ವರ್ಯ ಹಿರೇಮಠ, ಹಳ್ಳಿಬೈಲ ಮೊರಾರ್ಜಿ ದೇಸಾಯಿ ಪ್ರೌಢಶಾಲೆಯ ಮೇಘಾ ಅರಳೇಶ್ವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ತಾಲೂಕು ಘಟಕದ ಪದಾಧಿಕಾರಿಗಳಾದ ಮಾಲತೇಶ ಮಲಗುಂದ, ಶಿವಾನಂದ ಕ್ಯಾಲಕೊಂಡ, ವೀರೇಶ ಒಡೆಯಂಪುರ, ರಾಕೇಶ ಜಿಗಳಿ, ಸೋಮಣ್ಣ ಕಡೂರ, ಮಲ್ಲೇಶ ಅಡಕಿಹಾಳ, ಪವನ್ ಕುಮಾರ ಕೊಂಡೋಜಿ, ವಿ.ಎಸ್. ಕೋರಿ, ಚಂಪಾ ಸುಗಾವಿ, ನಿರ್ಮಲಾ ಹೊಳಲದ ಕಾರ್ಯಕ್ರಮದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement