ಕಾರ್ಮಿಕ ಶಾಲೆ ಉದ್ಘಾಟನೆ
ಹಿರೇಕೆರೂರು: ಹಿರೇಕೆರೂರು: ತಾಲೂಕಿನ ರಟ್ಟಿಹಳ್ಳಿ ಗ್ರಾಮದ ಕಬ್ಬಿಣ ಕಂಥಿಮಠದ ಸಿದ್ಧಲಿಂಗೇಶ್ವರ ವಿದ್ಯಾಪೀಠ ಹಾಗೂ ಹಾವೇರಿಯ ಕದಂಬ ಬಾಲ ಕಾರ್ಮಿಕರ ಯೋಜನಾ ಸಂಘದ ಆಶ್ರಯದಲ್ಲಿ ಕದಂಬ ಬಾಲಕಾರ್ಮಿಕ ಶಾಲೆಯನ್ನು ತಹಸೀಲ್ದಾರ್ ಹನುಮಂತಪ್ಪ ಬಡದಾಳ ಉದ್ಘಾಟಿಸಿದರು. ವಿನಯ್ ಘೋರ್ಪಡೆ, ಮುಖ್ಯ ಶಿಕ್ಷಕ ಎಲ್.ಎಸ್. ಗೌಡರ್, ಕಾರ್ಯದರ್ಶಿ ಚಿದಾನಂದ ಮಠದ ಮೊದಲಾದವರು ಉಪಸ್ಥಿತರಿದ್ದರು.