ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನವಿಲುಧಾಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ

Lingaraj Badiger
Updated On : 17 Jun 2013, 11:56 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜೂ. 16
ನವಿಲುಧಾಮದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ರು. 2 ಕೋಟಿ ಬಿಡುಗಡೆ ಮಾಡಿ ಚಾಲನೆ ನೀಡಿದೆ. ರಾಜ್ಯ ಸರ್ಕಾರದಿಂದ ಇನ್ನು ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಶಿಗ್ಗಾಂವಿ ತಾಲೂಕಿನ ಬಂಕಾಪುರ ಕೋಟೆಯಲ್ಲಿ ನವಿಲುಧಾಮ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ದಾಸ ಸಾಹಿತ್ಯದ ಕೊಡುಗೆ ಕೊಟ್ಟ ಭಕ್ತ ಕನದಾಸರ ಜನ್ಮಸ್ಥಳ ಬಾಡದಲ್ಲಿ ಕನಕದಾಸರ ಅರಮನೆ ಮತ್ತು ಸಮಗ್ರ ಅಭಿವೃದ್ಧಿ, ಭಾತೃತ್ವದ ಸಂದೇಶ ಸಾರಿರುವ ಶಿಶುವಿನಾಳದ ಸಂತ ಶರೀಫ-ಗೋವಿಂದ ಭಟ್ಟರ ಸ್ಥಳಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗುತ್ತಿದೆ. ಇನ್ನಷ್ಟು ಅಭಿವೃದ್ಧಿಪಡಿಸಿ ವಿಶ್ವದ ಪ್ರವಾಸಿ ತಾಣವನ್ನಾಗಿಸುವ ಕನಸು ನನ್ನದಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಬಂಕಾಪುರ ಐತಿಹಾಸಿಕ ಕೋಟೆಯಲ್ಲಿರುವ ನವಿಲುಧಾಮ ಸುರಕ್ಷಿತ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೊಂದು ನಿಸರ್ಗ ಧಾಮವನ್ನಾಗಿಸುವುದು ತಮ್ಮ ಉದ್ದೇಶವಾಗಿದೆ. ಅಭಿವೃದ್ಧಿಗೆ ರೂಪುರೇಷ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಶಾಸಕ ಬೊಮ್ಮಾಯಿ ಹೇಳಿದರು.
ವಿಶ್ವ ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡ ತಾಲೂಕಿನ ಗೋಟಗೋಡಿ ರಾಕ್ ಉತ್ಸವ ಗಾರ್ಡನ್ ಅಭಿವೃದ್ಧಿಗೆ ಸರ್ಕಾರದ ನೆರವು ಪಡೆದುಕೊಳ್ಳುವುದಾಗಿ ತಿಳಿಸಿದ ಬೊಮ್ಮಾಯಿ, ಸವಣೂರಿನ ಐತಿಹಾಸಿಕ ಮೋತಿ ತಲಾಬ, ಶಿಗ್ಗಾಂವಿ ನಾಗನೂರು ಕೆರೆ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸುವ ಚಿಂತನೆ ನನ್ನದಾಗಿದೆ ಎಂದರು.
ಬರುವ ದಿನಗಳಲ್ಲಿ ಈ ಕೆರೆಗಳು ಪ್ರೇಕ್ಷಣಿಯ ಸ್ಥಳಗಳಾಗಿ ಮಾರ್ಪಡಲಿವೆ ಎಂದು ಹೇಳಿದ ಬೊಮ್ಮಾಯಿ, ಒಟ್ಟಾರೆ ಶಿಗ್ಗಾಂವಿ-ಸವಣೂರು ತಾಲೂಕು ವಿಶ್ವದಲ್ಲಿ ಮಟ್ಟದಲ್ಲಿ ಗುರುತಿಸಿಕೊಳ್ಳುವ ಆಸೆ ನನ್ನದು. ಐದು ವರ್ಷದ ಅಭಿವೃದ್ಧಿಗೆ ಸಹಕಾರ ನೀಡಿದ ಕ್ಷೇತ್ರದ ಜನತೆ, ಇನ್ಮುಂದೆ ಸಹ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂಸದ ಪ್ರಹ್ಲಾದ್ ಜೋಶಿ ಮಾತನಾಡಿ, 50 ವರ್ಷ ಕಾಣದ ಅಭಿವೃದ್ಧಿಯನ್ನು ಬಸವರಾಜ ಬೊಮ್ಮಾಯಿ ಶಾಸಕರಾದ ಮೇಲೆ ಶಿಗ್ಗಾವಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸಿದ್ದಾರೆ.
ಪ್ರಜ್ಞಾವಂತರನ್ನು ಹೊಂದಿರುವ ಕ್ಷೇತ್ರದಲ್ಲಿ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ಸಿಗರಿಗೆ ಮನ್ನಣೆ ನೀಡದೇ ಚುನಾವಣೆಯಲ್ಲಿ ಬೊಮ್ಮಾಯಿ ಅವರ ಕೈಹಿಡಿದಿದ್ದು ಕೃತಜ್ಞತೆ ಸಲ್ಲಿಸಿದರು.
ವಿಪ ಸದಸ್ಯ ಸೋಮಣ್ಣ ಬೇವಿನಮರದ, ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಪುರಸಭೆ ಸದಸ್ಯರಾದ ಹೊನ್ನಪ್ಪ ಹೂಗಾರ, ಸಂಗಪ್ಪ ಹರವಿ, ಮಾಲತೇಶ ಬಾಬುಸಿಂಗನವರ, ಚನ್ನಪ್ಪ ಹಳವಳ್ಳಿ, ಎನ್.ವ್ಹಿ. ಪದ್ಮಾ, ಯಲ್ಲವ್ವ ಈರಪ್ಪನವರ, ಸುನೀತಾ ಬೆಟಗೇರಿ, ಅಶೋಕ ಪಟ್ಟಣಶೆಟ್ಟರ, ಶಂಭಣ್ಣ ಮಾಮ್ಲೆಪಟ್ಟಣಶೆಟ್ಟರ, ಬಸವರಾಜ ನಾರಾಯಣಪುರ, ಅಂಬರಿಷ ಸರ್ವದೆ, ರಮೇಶ ಸುಲಾಖೆ, ಸತೀಶ ವನಹಳ್ಳಿ, ಗುಡ್ಡಪ್ಪ ಮತ್ತೂರ,
ಸೋಮಶೇಖರ ಗೌರಿಮಠ ಉಪಸ್ಥಿತರಿದ್ದರು. ರಾಮಕೃಷ್ಣ ರಾಯ್ಕರ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement