ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮತದಾರರಿಗೆ ಅಭಿನಂದನೆ

Lingaraj Badiger
Updated On : 17 Jun 2013, 11:41 am

ರಾಣಿಬೆನ್ನೂರು: ತಾಲೂಕಿನ ಸಮಸ್ತ ಜನತೆಯ ಸೇವೆ ಮಾಡುವುದಕ್ಕಾಗಿ ದೂರದ ಬೆಂಗಳೂರಿನಿಂದ ಒಂದು ವರ್ಷದ ಹಿಂದೆ ಬಂದು ತಾಲೂಕಿನ ಜನತೆ ಸೇವೆ ಮಾಡುತ್ತಿರುವ ನನ್ನ ಸೇವೆಗೆ ಮೆಚ್ಚಿಕೊಂಡಿರುವ ಸುಮಾರು 47 ಸಾವಿರ ಜನರು, ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷೆತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಮತ ನೀಡಿದ್ದು, ಮತ ನೀಡಿದ ಸರ್ವರಿಗೂ ಅಭಿನಂದಿಸಿರುವುದಾಗಿ ಆರ್. ಶಂಕರ್ ತಿಳಿಸಿದರು. ನಗರದ ಮೇಡ್ಲೆರಿ ರಸ್ತೆಯಲ್ಲಿರುವ ಆದಿಶಕ್ತಿ ಕಲ್ಯಾಣ ಮಂಟಪದಲ್ಲಿ ಶಂಕರ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸೋಲು, ಗೆಲುವು ಸರ್ವೆ ಸಾಮಾನ್ಯ. ಆದರೆ, ಸೋಲಿಗೆ ಕಾರಣವೆನು? ಮುಂದೆ ಇಂತಹ ಕಹಿ ಘಟನೆ ನಡೆಯದಂತೆ ಎಚ್ಚರ ವಹಿಸಿ ಹೇಗೆ ಜಯ ಸಾಧಿಸಬೇಕೆಂಬುದರ ಕುರಿತು ಸರ್ವರು ಚಿಂತಿಸುವಂತಾಗಬೇಕು. ಬೆಂಗಳೂರಿನಿಂದ ಬಂದಿರುವ ಶಂಕರ್ ಏನು ಮಾಡುತ್ತಾರೆ ಎಂದು ಕೇಳಿದವರಿಗೆ ಉತ್ತರಿಸುವ ರೀತಿಯಲ್ಲಿ ತಾಲೂಕಿನ 47 ಸಾವಿರ ಜನ ನನಗೆ ಮತ ನೀಡಿದ್ದಾರೆ. ನಗರಸಭೆ ಚುನಾವಣೆಯಲ್ಲಿ 6 ಸ್ಥಾನಗಳನ್ನು ಗೆದ್ದಿದ್ದೇವೆ ಎಂದರು. ಮುಂದಿನ ದಿನಗಳಲ್ಲಿ ನಾನು ಈ ಊರಿನವನಾಗಿ ಜೀವನ ಸಾಗಿಸುವುದರಲ್ಲಿ ಎರಡು ಮಾತಿಲ್ಲ ಎಂದರು. ಕೇವಲ ಶಾಸಕನಾಗಬೇಕೆಂದಿದ್ದರೆ ಬೆಂಗಳೂರಿನಿಂದ ಇಲ್ಲಿಗೆ ನಾನು ಬರುತ್ತಿರಲಿಲ್ಲ. ಸಮಾಜ ಸೇವೆಯನ್ನು ಮಾಡುವುದಕ್ಕಾಗಿ ನಾನು ಆಯ್ಕೆ ಮಾಡಿಕೊಂಡ ತಾಲೂಕು ಇದಾಗಿದ್ದು, ಮತ ನೀಡಿದ ಸರ್ವರು ಬೇಸರ ಪಟ್ಟುಕೊಳ್ಳಬಾರದು. ಎಂದಿನಂತೆ ನಾನು ನನ್ನ ಕರ್ತವ್ಯಗಳನ್ನು ಮುಂದುವರೆಸುತ್ತೇನೆ ಎಂದು ಆರ್. ಶಂಕರ್ ತಿಳಿಸಿದರು. ಶಂಕರ ಅಭಿಮಾನಿ ಬಳಗದ ಅಧ್ಯಕ್ಷ ಜಗದೀಶ ಎಲಿಗಾರ, ಕಾರ್ಯದರ್ಶಿ ಚಂದ್ರು ಕಾಳಪ್ಪನವರ,ರಾಜು ಅಡಿವೆಪ್ಪನವರ, ಈಶಣ್ಣ ಕೇಲಗಾರ, ನಗರಸಭೆ ಸದಸ್ಯರಾದ ಬಸವಂತೆವ್ವ ಮೇದಾರ, ಚಂದ್ರು ಲಮಾಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement