ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸ್ವಚ್ಛತೆಗೆ ಪುರಸಭೆ ನಿರ್ಲಕ್ಷ್ಯ

Lingaraj Badiger
Updated On : 17 Jun 2013, 11:57 am

ಬ್ಯಾಡಗಿ: ಪಟ್ಟಣದ ವ್ಯಾಪ್ತಿಯಲ್ಲಿ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸ್ಥಳೀಯ ಪುರಸಭೆ ಮಾತ್ರ ಎಚ್ಚೆತ್ತುಕೊಳ್ಳಲು ಸಿದ್ಧವಿಲ್ಲ.
ತುಂಬಿಕೊಂಡಿರುವ ಚರಂಡಿಗಳು, ಎಲ್ಲೆಂದರಲ್ಲಿ ಕಸದರಾಶಿ ಕಾಣ ಸಿಗುತ್ತವೆ. ಅಲ್ಲದೆ ಸತ್ತು ಬಿದ್ದಿರುವ ಹಂದಿಗಳನ್ನು ಪುರಸಭೆಯು ಸಾಗಿಸುವಲ್ಲಿ ನಿಷ್ಕಾಳಜಿ ವಹಿಸಿದೆ. ಡೆಂಘೀ ಜ್ವರ ನಿಯಂತ್ರಣಕ್ಕೆ ಪರಿಣಾಮಕಾರಿ ಎನಿಸಿರುವ ಫಾಗಿಂಗ್ ಸ್ಥಗಿತಗೊಳಿಸಿದ್ದೇ ಸಾಧನೆ ಎನ್ನಬಹುದು.
ಸತ್ತ ಹಂದಿಗಳು ಇಲ್ಲಿವೆ: ಪಟ್ಟಣದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳಿಗೆ ನಿಯಂತ್ರಣ ಇಲ್ಲದಂತಾಗಿದೆ. ಅಂತೆಯೇ ಅವುಗಳ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದೆ. ಆಶ್ರಯ ಬಡಾವಣೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಇವುಗಳ ಸಾವಿನ ಸಂಖ್ಯೆ ಕೊಂಚ ಹೆಚ್ಚಾಗಿದೆ. ಪಟ್ಟಣದ ಅಂಚೆ ಕಚೇರಿ ಬಳಿ ಕಳೆದೆರಡು ದಿನಗಳಿಂದ ಹಂದಿಯೊಂದು ಸತ್ತು ಬಿದ್ದಿದೆ. ಇದರಿಂದ ಹೊರಸೂಸುವ ದುರ್ವಾಸನೆಯಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ತೆರಳುವಂತಾಗಿದೆ.
ರೋಗ ಹರಡುವ ಭೀತಿ: ಸತ್ತ ಹಂದಿಗಳನ್ನು ಸಾಗಿಸದಿರುವ ಪುರಸಭೆಯ ನಿರ್ಲಕ್ಷ್ಯದಿಂದಾಗಿ ಪಟ್ಟಣದ ಜನರು ರೋಗದ ಭೀತಿಯಲ್ಲಿ ಬದುಕುವಂತಾಗಿದೆ. ಅಲ್ಲದೇ ಕೆಲ ರೋಗಗ್ರಸ್ತ ಹಂದಿಗಳು ಸಹ ಪಟ್ಟಣದಲ್ಲಿ ಸಂಚರಿಸುತ್ತಿದ್ದು, ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಳವಾಗಿದೆ. ಕೆಲ ಹಂದಿಗಳ ಮೈಮೇಲೆ ಗಾಯಗಳು ಕಾಣಿಸಿಕೊಂಡಿದ್ದು, ಅವುಗಳ ಮೈ ಮೇಲೆ ಕ್ರಿಮಿಕೀಟಗಳು ಕುಳಿತು ರೋಗ ಹರಡಲು ಕಾರಣವಾಗಬಹುದು ಎಂಬ ಆತಂಕದಲ್ಲಿ ಜನರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement