ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Vishwanath S
Updated On : 19 Jun 2013, 11:47 am

ಹಿರೇಕೆರೂರು: ತಾಲೂಕಿನ ಕುಡುಪಲಿ ಗ್ರಾಮ ಪಂಚಾಯಿತಿ ನೂತ ಅಧ್ಯಕ್ಷರಾಗಿ ವಿನೋದಮ್ಮ ಹೊಂಕಣದ ಹಾಗೂ ಉಪಾಧ್ಯಕ್ಷರಾಗಿ ಶಾರದಮ್ಮ ಚಲುವಾದಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.
ಒಟ್ಟು 3 ಗ್ರಾಮಗಳನ್ನು ಕುಡುಪಲಿ, ಮಾದಾಪುರ, ಬಡಸಂಗಾಪುರ ಗ್ರಾಮಗಳ ವ್ಯಾಪ್ತಿಯುಳ್ಳ ಹೊಂದಿದ ಕುಡಪಲಿ ಗ್ರಾಮ ಪಂಚಾಯಿತಿಗೆ 14 ಸದಸ್ಯರನ್ನು ಒಳಗೊಂಡಿದೆ. ಮೊದಲನೆ ಅವಧಿ ಮುಗಿದ ಕಾರಣ ಚುನಾವಣೆ ಘೋಷಣೆಯಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಸ್ಥಾನಕ್ಕೆ ಮೀಸಲು ಇತ್ತು. ವಿನೋದಮ್ಮ ಹೊಂಕಣದ ಹಾಗೂ ನೀಲಮ್ಮ ಹಲಗೇರಿ ನಾಮಪತ್ರ ಸಲ್ಲಿಸಿದ್ದರು. ಇಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಸಿದಾಗ ವಿನೋದಮ್ಮ ಹೊಂಕಣದ 7 ಮತಗಳನ್ನು ಪಡೆದರೆ, ನೀಲಮ್ಮ ಹಲಗೇರಿ 5 ಮತಗಳನ್ನು ಪಡೆದರು. ಇಬ್ಬರ ಮತಗಳು ತಿರಸ್ಕೃತಗೊಂಡವು. ಆಗ ವಿನೋದಮ್ಮ ಹೊಂಕಣದ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ(ಎಸ್ಸಿ)ಗೆ ಮೀಸಲಾಗಿತ್ತು. ಆಗ ಶಾರದಮ್ಮ ಚಲುವಾದಿ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾ ಅದಿಕಾರಿಗಳಾಗಿ ತಹಸೀಲ್ದಾರ್ ಹನುಮಂತಪ್ಪ ಬಡದಾಳೆ, ಚುನಾವಣಾ ಫಲಿತಾಂಶ ಘೋಷಿಸಿದರು. ಚುನಾವಣಾ ಅಧಿಕಾರಿಗಳಾದ ಎಚ್.ವೈ. ಕೊಪ್ಪದ, ಆರ್.ಜಿ. ಗೋಖಲೆ, ಸಿಪಿಐ ವಿಜಯ ಮುರುಗುಂಡಿ, ರಟ್ಟಿಹಳ್ಳಿ ಪಿಎಸ್ಐ ಬಸವರಾಜ ಕಲ್ಲಮ್ಮನವರ, ಹಂಸಬಾವಿ ಪಿಎಸ್ಐ ಜಿ.ಎಂ. ಶಶಿಧರ ಮತ್ತಿತರರಿದ್ದರು.

ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ಹಾವೇರಿ: ಗ್ರಾಮೀಣ ಪುನರ್ವಸತಿ ಯೋಜನೆಯಡಿ ಹಾವೇರಿ ಜಿಲ್ಲೆಯ 35 ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಗೌರವಧನ ಆಧಾರದ ಮೇಲೆ ಆಯ್ಕೆ ಮಾಡಲು ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಜೂ. 25ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹಾವೇರಿ ತಾಲೂಕಿನ ಹಾವಸಿ, ನೆಗಳೂರು ಹಾಗೂ ಕಬ್ಬೂರ. ಸವಣೂರು ತಾಲೂಕಿನ ಇಚ್ಚಂಗಿ, ಯಲವಿಗಿ, ಹುರಳಿಕುಪ್ಪಿ, ತೊಂಡೂರು, ಹಿರೇಮಳ್ಳಿಹಳ್ಳಿ ಹಾಗೂ ಚಿಕ್ಕಮೆಳ್ಳಿಳ್ಳಿ, ಬ್ಯಾಡಗಿ ತಾಲೂಕಿನ  ಹೆಡಿಗ್ಗೊಂಡ, ಹಿರೇಕೆರೂರು ತಾಲೂಕಿನ ಹಿರೇಮೊರಬ, ಹಾನಗಲ್ಲ ತಾಲೂಕಿನ ಮಾರನಬೀಡ, ಬೊಮ್ಮನಹಳ್ಳಿ, ಹಿರೇಕಣಗಿ, ಚಿಕ್ಕಾಂಸಿಹೊಸೂರ, ಗೆಜ್ಜಿಹಳ್ಳಿ, ಮಂತಗಿ, ತಿಳವಳ್ಳಿ, ಮಲಗುಂದ, ಹಾವಣಗಿ, ಸೋಮಸಾಗರ, ನರೇಗಲ್ಲ ಹಾಗೂ ಶಿರಗೋಡ. ರಾಣಿಬೆನ್ನೂರು ತಾಲೂಕಿನ ಉಕ್ಕುಂದ ಮತ್ತು ಅಸುಂಡಿ, ಶಿಗ್ಗಾಂವಿ ತಾಲೂಕಿನ ಹುಲಗೂರ, ಕ್ಯಾಲಕೊಂಡ, ಕೋಣನಕೇರಿ, ಹಿರೇಮಲ್ಲೂರ, ಶಿಶುವಿನಹಾಳ, ಮಡ್ಲಿ, ಚಂದಾಪುರ, ಅತ್ತಿಗೇರಿ, ಹನುಮಹಳ್ಳಿ ಹಾಗೂ ಕುನ್ನೂರ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಖಾಲಿಯಿವೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ, ಅದೇ ಗ್ರಾಮ ಪಂಚಾಯಿತಿಗಳಲ್ಲಿ ವಾಸವಿರುವ 18ರಿಂದ 45 ವರ್ಷದೊಳಗಿನ ಅರ್ಹ ವಿಕಲಚೇತನ ಅಭ್ಯರ್ಥಿಗಳು ತಮ್ಮ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ವಿಕಲತೆ ಬಗೆಗಿನ ಗುರುತಿನ ಚೀಟಿ ಪುಸ್ತಕದ ನಕಲು ಪ್ರತಿ ಹಾಗೂ ವಾಸಸ್ಥಳದ ದೃಢೀಕರಣ ಪತ್ರದೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ದಿನಾಂಕದೊಳಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 4, ನೆಲಮಹಡಿ, ಜಿಲ್ಲಾ ಆಡಳಿತ ಭವನ, ದೇವಗಿರಿ, ಹಾವೇರಿ ಅವರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು (ದೂರವಾಣಿ 08375-249014) ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಡಿ.ಎಚ್. ಲಲಿತಾ ತಿಳಿಸಿದ್ದಾರೆ.

ಹಾಸ್ಟೆಲ್ಗೆ ಅರ್ಜಿ ಆಹ್ವಾನ
ಹಾನಗಲ್ಲ: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ 2013-14ನೇ ಸಾಲಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಹ ವಿದ್ಯಾರ್ಥಿಗಳು ಜುಲೈ 10ರೊಳಗೆ ಅರ್ಜಿ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹಾನಗಲ್ಲ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಹಿಂದಿನ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಅರ್ಜಿ ಜೊತೆಗೆ 3 ಪಾಸ್ಪೋರ್ಟ್ ಸೈಜಿನ ಫೋಟೋ ಲಗತ್ತಿಸಬೇಕು. ಅಂಕಪಟ್ಟಿ ಹಾಗೂ ಜಾತಿ ಆದಾಯ ಪ್ರಮಾಣ ಪತ್ರಗಳ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು. ವಿದ್ಯಾರ್ಥಿ ನಿಲಯದಿಂದ ಕನಿಷ್ಠ 5 ಕಿ.ಮೀ. ದೂರದ ಊರಿನವರಾಗಿರಬೇಕು ಎಂದು ತಾಲೂಕು ವಿಸ್ತೀರ್ಣಾಧಿಕಾರಿ ಎನ್.ಎಂ. ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾನಗಲ್: ಇಂದು ಬಿಜೆಪಿ ಕಾರ್ಯಕರ್ತರ ಸಭೆ
ಹಾನಗಲ್ಲ: ಭಾರತೀಯ ಜನತಾ ಪಕ್ಷದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಜೂ. 19ರಂದು ಹಾನಗಲ್ಲಿನಲ್ಲಿ ಕರೆಯಲಾಗಿದೆ. ಬುಧವಾರ ಮಧ್ಯಾಹ್ನ 3ಕ್ಕೆ ಪಟ್ಟಣದ ಶ್ರೀ ಶಂಕರಮಠದ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ತಾಲೂಕು ಮಟ್ಟದ ಸಭೆಯನ್ನು ಕರೆಯಲಾಗಿದ್ದು, ಭಾರತೀಯ ಜನತಾ ಪಕ್ಷದ ತಾಲೂಕು ಘಟಕ ಹಾಗೂ ಸ್ಥಳೀಯ ಸಮಿತಿಗಳನ್ನು ಪುನರ್ ರಚಿಸುವ ಕುರಿತು ಚರ್ಚಿಸಲಾಗುವುದು. ಸಭೆಯಲ್ಲಿ ಪಕ್ಷದ ಮುಖಂಡರು ಉಪಸ್ಥಿತರಿದ್ದು, ಮಾರ್ಗದರ್ಶನ ಮಾಡುವರು. ಕಾರಣ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡಬೇಕೆಂದು ಪಕ್ಷದ ತಾಲೂಕು ಅಧ್ಯಕ್ಷ ಗುಡ್ಡಪ್ಪ ಗುಡ್ಡಪ್ಪನವರ ಮನವಿ ಮಾಡಿದ್ದಾರೆ.

ವಸತಿ ಶಾಲೆಗೆ ಆಯ್ಕೆ
ಹಾನಗಲ್ಲ: ತಾಲೂಕಿನ ಅಜಗುಂಡಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಯ 6 ವಿದ್ಯಾರ್ಥಿಗಳು ಮೊರಾರ್ಜಿ, ಕಿತ್ತೂರ ಚನ್ನಮ್ಮ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ. ಅಭಿಷೇಕ ಶಕುನವಳ್ಳಿ, ಫಕ್ಕೀರೇಶ ಕಾಡನವರ, ಸುಪ್ರಿತಾ ಉಪ್ಪುಣಸಿ, ಮಂಜುಳಾ ಶಕುನವಳ್ಳಿ, ವಿನೋದಾ ಹೊಸವಡ್ಡರ, ಪ್ರೇಮಾ ಹುಳ್ಳಿ ಆಯ್ಕೆಯಾಗಿದ್ದಾರೆ.

ಅಂಗವಿಕಲರ ವಿದ್ಯಾರ್ಥಿ
ವೇತನಕ್ಕೆ ಅರ್ಜಿ ಆಹ್ವಾನ
ಹಾವೇರಿ:  ಪ್ರಸಕ್ತ ಸಾಲಿಗೆ ವಿಕಲಚೇತನರಿಗೆ ವಿದ್ಯಾರ್ಥಿ ವೇತನ ನೀಡಲು ಒಂದನೇ ತರಗತಿಯಿಂದ ಪದವಿವರೆಗೆ ಓದುತ್ತಿರುವ ಅರ್ಹ ಅಂಗವಿಕಲ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯೊಂದಿಗೆ ವಿಕಲಚೇತನ ಗುರುತಿನ ಚೀಟಿ, ವಿಕಲತೆ ದೃಢೀಕರಿಸುವ ಎರಡು ಭಾವಚಿತ್ರ, ಕಳೆದ ಸಾಲಿನಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿ, ಗ್ರೇಡ್ ಪಟ್ಟಿಯೊಂದಿಗೆ ಸಂಬಂಧಪಟ್ಟ ಶಾಲಾ-ಕಾಲೇಜಿನ ಮುಖ್ಯೋಪಾಧ್ಯಾಯರು ಹಾಗೂ ಪ್ರಾಂಶುಪಾಲರ ಷರಾದೊಂದಿಗೆ ದೃಢೀಕರಿಸಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ, ಕೊಠಡಿ ಸಂಖ್ಯೆ 4, ನೆಲ ಮಹಡಿ, ಜಿಲ್ಲಾ ಆಡಳಿತ ಭವನ, ದೇವಗಿರಿ, ಹಾವೇರಿ ಅವರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು (ದೂರವಾಣಿ 08375-249014) ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಡಿ.ಎಚ್. ಲಲಿತಾ ತಿಳಿಸಿದ್ದಾರೆ.

ಸಲಕರಣೆ ವಿತರಣೆಗೆ ಅರ್ಜಿ ಆಹ್ವಾನ
ಹಾವೇರಿ: ಅಂಗವಿಕಲರಿಗೆ ಅಗತ್ಯವಿರುವ ಸಾಧನ, ಸಲಕರಣೆ ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಮೊದಲು ಸಾಧನ-ಸಲಕರಣೆ ಪಡೆದಿಲ್ಲವೆಂಬ ಪ್ರಮಾಣ ಪತ್ರಗಳ ನಕಲು ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗಳು ದೃಢೀಕರಿಸಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ, ಕೊಠಡಿ ಸಂಖ್ಯೆ 4, ನೆಲ ಮಹಡಿ, ಜಿಲ್ಲಾ ಆಡಳಿತ ಭವನ, ದೇವಗಿರಿ, ಹಾವೇರಿ ಅವರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು (ದೂರವಾಣಿ 08375-249014) ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಡಿ.ಎಚ್. ಲಲಿತಾ ತಿಳಿಸಿದ್ದಾರೆ.
ಹಿರೇಕೆರೂರು: ಮನೆ ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳನ್ನು ನಿಯಂತ್ರಣ ಮಾಡಬೇಕು. ಜ್ವರ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರ ಸಲಹೆ ಪಡೆದು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಾರದಲ್ಲಿ ಎರಡು ಬಾರಿ ನೀರಿನ ಮೂಲಗಳನ್ನು ಸ್ವಚ್ಛ ಮಾಡಿಕೊಳ್ಳುವ ಮೂಲಕ ಡೆಂಘೀ ಬಾಧೆ ನಿಯಂತ್ರಿಸಿಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು. ತಾಲೂಕು ಆರೋಗ್ಯ ಇಲಾಖೆ, ಮಕ್ಕಳ ಅಭಿವೃದ್ಧಿ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪಪಂ ವತಿಯಿಂದ ಡೆಂಘೀ ಜ್ವರ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಟ್ಟಣದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಜಾಗೃತಿ ಜಾಥಾಕ್ಕೆ ಶಾಸಕ ಯು.ಬಿ. ಬಣಕಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ, ಸಾರ್ವಜನಿಕರಲ್ಲಿ ಡೆಂಘೀ ಜ್ವರದ ಬಗ್ಗೆ ಅರಿವು ಮೂಡಿಸಲಾಯಿತು. ಜಾಥಾದಲ್ಲಿ ಪಾಲ್ಗೊಂಡಿದ್ದ ಸಿಇಎಸ್ ಶಿಕ್ಷಣ ಸಂಸ್ಥೆ ಹಾಗೂ ಸಂಗಮೇಶ್ವರ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಯು.ಬಿ. ಬಣಕಾರ ಅಭಿಮಾನಿ ಬಳಗದಿಂದ ಬಿಸ್ಕತ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ರವಿ ಪುಟ್ಟನಗೌಡ್ರ, ರಘು ಮಾಳಮ್ಮನವರ, ಪ್ರಾಚಾರ್ಯ ಎಸ್.ಪಿ. ಗೌಡರ, ತಾಪಂ ಮುಖ್ಯಾಧಿಕಾರಿ ಎಂ.ಎಚ್. ರಾಜಕುಮಾರ, ಟಿಎಚ್ಒ ಚಿದಾನಂದ, ಕಿರಿಯ ಆರೋಗ್ಯ ನಿರೀಕ್ಷಕ ಎಂ.ಬಿ. ಕಂಬಳಿ, ಎಲ್.ಎಸ್. ಮಾರೇರ, ಸಿಡಿಪಿಒ ಶ್ರೀನಿವಾಸ ಆಲದಾತರ್, ವಿ.ಎಸ್. ಪುರದ, ಸಿದ್ದನಗೌಡ ನರೇಗೌಡ್ರ, ಪಿ.ಬಿ. ನಿಂಗನಗೌಡ್ರ, ಕೊಟ್ರೇಶ ಕಾಟೇನಹಳ್ಳಿ ಇನ್ನಿತರರು ಹಾಜರಿದ್ದರು.

ವಿದ್ಯಾರ್ಥಿಗಳಿಗೆ ಪುರಸ್ಕಾರ
ಹಾನಗಲ್ಲ:  ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕು ಘಟಕ ಹಾಗೂ ತಾಲೂಕು ಕುರುಬ ನೌಕರರ ಸಂಘದ ಆಶ್ರಯದಲ್ಲಿ ಕುರುಬ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜುಲೈ 1ರಂದು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿನ ತಾಪಂ ಸಮೀಪದ ಮೈಲಾರಲಿಂಗೇಶ್ವರ ಜನರಲ್ ಸ್ಟೋರ್ಸ್ ಸಂಪರ್ಕಿಸಿ (9449967122, 9481010066).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement