ತಾಲೂಕು ಅಭಿವೃದ್ಧಿಗೆ ಶಾಸಕರು ಶ್ರಮಿಸಲಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜೂ. 18
ಇರುವ ಅವಧಿಯ ವ್ಯವಸ್ಥೆಯಲ್ಲಿ ಪ್ರಸಕ್ತ ರಾಜಕಾರಣದ ವಿಷಯಗಳ ಚರ್ಚೆ ಮೂರ್ಖತನದ್ದಾಗುತ್ತದೆ. ಎಲ್ಲರೂ ಕೆಟ್ಟವರು ಅಂತಲ್ಲ, ಒಳ್ಳೆಯವರು ಇದ್ದಾರೆ. ಆದರೆ, ಗುಣಮಟ್ಟಕ್ಕೆ ಬೆಲೆ ಕಡಿಮೆ. ಈ ನಿಟ್ಟಿನಲ್ಲಿ ಹಿರಿಯ ರಾಜಕಾರಣಿ ಬಿ.ಜಿ. ಬಣಕಾರ ರಾಜಕಾರಣದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ಸ್ಮರಣೀಯರೆನಿಸಿಕೊಂಡಿದ್ದಾರೆ. ಶಾಸಕರು ತಾಲೂಕಿನ ಅಭಿವೃದ್ಧಿ ಮಾಡಲಿ ಎಂದು ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹಾರೈಸಿದರು.
ಪಟ್ಟಣದ ಶ್ರೀ ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಬಯಲು ಬಸವೇಶ್ವರ ಅನ್ನದಾಸೋಹ ಸಮಿತಿ, ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ ಗಜಾನನ ಯುವಕ ಸಮಿತಿ, ಅಕ್ಕನ ಬಳಗ ಹಾಗೂ ವರ್ತಕರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ದ್ವಿತೀಯ ವರ್ಷದ ಅನ್ನದಾಸೋಹ ಹಾಗೂ ನೂತನ ಶಾಸಕ ಯು.ಬಿ. ಬಣಕಾರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
16 ವರ್ಷದ ನಂತರ ನ್ಯಾಯವಾದಿ ಯು.ಬಿ. ಬಣಕಾರ ತಾಲೂಕಿನ ಶಾಸಕರಾಗಿದ್ದಾರೆ. ತಾಲೂಕಿನಲ್ಲಿ ಕುಡಿಯುವ ನೀರು, ಸ್ವಚ್ಛತೆ, ರಸ್ತೆ ಕಾಮಗಾರಿ, ಒಳಚರಂಡಿ, ಸಾರ್ವಜನಿಕ ಆಸ್ಪತ್ರೆಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ವಿವಿಧ ಸಮಸ್ಯೆಗಳನ್ನು ಅರಿತು ಸ್ಪಂದಿಸಲಿ ಎಂದು ಮಾರ್ಗದರ್ಶನ ಮಾಡಿದರು.
ಚಂದ್ರಶೇಖರಪ್ಪ ತಿಪ್ಪಶೆಟ್ಟಿ ಮಾತನಾಡಿ, ಅನ್ನದಾಸೋಹ ಪುಣ್ಯದ ಕೆಲಸ ಎಂದು ಹೇಳಿದರು. ಮೂಡಿ ವಿರಕ್ತಮಠದ ಶ್ರೀ ಸದಾಶಿವ ಸ್ವಾಮೀಜಿಗಳು ನೇತೃತ್ವ ವಹಿಸಿದ್ದರು.
ಶಾಸಕ ಯು.ಬಿ. ಬಣಕಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಲಿಂಗರಾಜ ಚಪ್ಪರದಳ್ಳಿ, ಎಸ್.ಆರ್. ಅಂಗಡಿ, ಜಿಪಂ ಸದಸ್ಯೆ ಬಸಮ್ಮ ಅಬಲೂರು ಮಾತನಾಡಿದರು.
ಮದ್ವೀರಶೈವ ಸಮಾಜದ ಅಧ್ಯಕ್ಷ ಸಿದ್ದಲಿಂಗಪ್ಪ ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಂ.ಎಚ್. ಹಳಕಟ್ಟಿ, ಎಲ್.ಬಿ. ತೆಂಬದ, ವಿ.ಡಿ. ಹಂಪಾಳಿ, ಆರ್.ಬಿ. ಹಂಜಿ, ಬಸವರಾಜಪ್ಪ ವಾಲಿ, ವಿರೇಶ ಹಂಚಿನ, ಈರಣ್ಣ ಹಳ್ಳೂರ, ಬಸವರಾಜಪ್ಪ ಹಲವಾಗಿಲ, ಗಂಗಾಧರಪ್ಪ ಕುಬಸದ, ಕೆ.ಜಿ. ಶಿವಯೋಗಿ, ಅರುಣ ಹಂಬಗಿ, ಸುರೇಶ ವೈಶ್ಯರ, ಈರಣ್ಣ ಹಲವಾಗಿಲ, ಪ್ರಕಾಶ ಹಂಪಾಳಿ, ಬಸವರಾಜ ಕಲ್ಯಾಣಿ, ಶಿವಕುಮಾರ ತಿಪ್ಪಶೆಟ್ಟಿ, ಶಶಿಕಲಾ ಹಾದ್ರೀಹಳ್ಳಿ, ಶಶಿಕಲಾ ಬೇತೂರ, ಓಂಕಾರಪ್ಪ ಕುಂಕುಮಗಾರ, ಮಹೇಂದ್ರ ಬಡಳ್ಳಿ, ನೀಲಕಂಠಪ್ಪ ಮಾಲ್ವಿ, ರಘು ಮಾಳಮ್ಮನವರ, ಸುಭಾಸ ಹಂಪಾಳಿ, ಮುಜೀಬ ರಿಕಾಟಿ, ಮಂಜು ಕಾಂಬ್ಳೆ, ಕುಮಾರ ಬಾಗಲಕೋಟಿ ಮುಂತಾದವರು ಉಪಸ್ಥಿತರಿದ್ದರು.
ಕಂಠಾಧರ ಅಂಗಡಿ ಸ್ವಾಗತಿಸಿದರು. ಎಚ್.ಆರ್. ಅಸುಂಡಿ ವಂದಿಸಿದರು.