ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪ್ರಯಾಣ ದರ ಹೆಚ್ಚಳ: ಖಂಡನೆ

Vishwanath S
Updated On : 19 Jun 2013, 11:46 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜೂ. 18
ರಾಜ್ಯದಲ್ಲಿ ಇತ್ತೀಚೆಗೆ ಆಡಳಿತದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಏಕಾಏಕಿ ಬಸ್ ದರ ಹೆಚ್ಚಳ ಮಾಡಿ ಸಾಮಾನ್ಯ ಜನರ ಪ್ರಯಾಣಕ್ಕೆ ತೊಂದರೆಯುಂಟು ಮಾಡಿದೆ. ಸರ್ಕಾರದ ಈ ಜನ ವಿರೋಧಿ ನೀತಿ ಖಂಡಿಸಿ ಎಸ್ಎಫ್ಐ ಶಿಗ್ಗಾಂವಿ ತಾಲೂಕು ಘಟಕ ಖಂಡಿಸಿ ಪ್ರತಿಭಟನೆ ನಡೆಸಿತು.
ಪಟ್ಟಣದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ಮಾತನಾಡಿದ ಸುಭಾಸ ಮಾದರ, ಚುನಾವಣಾ ಪೂರ್ವ ಕಾಂಗ್ರೆಸ್ ಹಲವಾರು ಭರವಸೆಗಳನ್ನು ನೀಡಿ ಅಧಿಕಾರ ಹಿಡಿದ ಕೆಲವೆ ದಿನಗಳಲ್ಲಿ ಬಸ್ ಪ್ರಯಾಣ ದರ ದುಬಾರಿಗೊಳಿಸುವ ಮೂಲಕ ಈ ಹಿಂದಿನ ಬಿಜೆಪಿ ಸರ್ಕಾರದ ಹಾದಿ ಹಿಡಿದಿದೆ. ಅಲ್ಲದೆ ಈಗಾಗಲೇ ಕೇಂದ್ರದ ಯುಪಿಎ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜಾರಿ ಮಾಡಿದ ಪರಿಣಾಮವಾಗಿ ವಿವಿಧ ತರಹದ ಬೆಲೆ ಏರಿಕೆಗಳನ್ನು ಜನಸಾಮಾನ್ಯರು ಎದುರಿಸುವಂತಾಗಿದ್ದು,
ಇಂಥ ಸಂದರ್ಭದಲ್ಲಿ ಜನರಿಗೆ ಅನಕೂಲತೆ ಕಲ್ಪಿಸಲು ರಾಜ್ಯ ಸರ್ಕಾರ ಪ್ರಯಾಣ ದರ ಕಡಿಮೆಗೊಳಿಸುವ ಬದಲಾಗಿ ಆರ್ಥಿಕ ಸಂಕಷ್ಟದ ನೆಪವೊಡ್ಡಿ ಬೆಲೆ ಏರಿಸುವ ಮೂಲಕ ಜನತೆಗೆ ಮೋಸ ಎಸಗಿದೆ.
ಸರ್ಕಾರದ ಈ ಕ್ರಮ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಪರ ಇರುವುದಿಲ್ಲ ಎಂಬ ಮುನ್ಸೂಚನೆ ನೀಡಿದಂತಾಗಿದೆ. ಕೆಎಸ್ಆರ್ಟಿಸಿ ನಷ್ಟದಲ್ಲಿದೆ ನಿಜ. ಆದರೆ, ಅದಕ್ಕೆ ಕಾರಣ ಅಲ್ಲಿ ನಡೆಯುವ ಅವ್ಯವಹಾರ, ಭ್ರಷ್ಟಚಾರ, ಖಾಸಗೀಕರಣಗಳಿಂದಾಗಿ ಇದಕ್ಕೆ ಕುಮ್ಮಕ್ಕು ನೀಡುವುದಲ್ಲದೇ ರಾಜ್ಯ ಸರ್ಕಾರ ಇಲ್ಲ ಸಲ್ಲದ ನೆಪವೊಡ್ಡಿ ಪ್ರಯಾಣ ದರ ಏರಿಸಿರುವುದು ಸಾಮಾನ್ಯ ಜನರನ್ನು ಮತ್ತಷ್ಟು ಸಂಧಿಗ್ದ ಸ್ಥಿತಿಗೆ ತಳ್ಳಿದಂತಾಗಿದೆ.
ರಾಜ್ಯ ಸರ್ಕಾರ ತಕ್ಷಣ ಏರಿಸಿರುವ ಬಸ್ ದರ ಇಳಿಕೆ ಮಾಡಿ ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸಬೇಕು. ಸಾರಿಗೆ ಇಲಾಖೆಯಲ್ಲಿ ನಡೆಯುವ ಅವ್ಯವಹಾರ ತಡೆಗಟ್ಟಬೇಕು. ಖಾಸಗೀಕರಣ ನೀತಿ ಕೈ ಬಿಡಬೇಕು. ಇಲ್ಲವಾದಲ್ಲಿ ಜನತೆಯೊಂದಿಗೆ ಎಸ್ಎಫ್ಐ ಶಿಗ್ಗಾಂವಿ ತಾಲೂಕು ಸಮಿತಿಯು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಸುಭಾಸ ಮಾದರ, ಮಲ್ಲೇಶ ಗೋಟನವರ, ಶ್ರೀಧರ ಭಜಂತ್ರಿ, ತಾಲೂಕು ಅಧ್ಯಕ್ಷ, ಕಾರ್ಯದರ್ಶಿ ಎಸ್ಎಫ್ಐ ಮುಖಂಡರು ನಗರದ ಜೆಕ್ಕನಕಟ್ಟಿ ರಸ್ತೆಯಲ್ಲಿರುವ ಶ್ರೀ ಮಾತೆ ಕಾಳಿಕಾದೇವಿ ಐಟಿಐ ಕಾಲೇಜು ಬಳಿಯ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಎಸ್ಎಫ್ಐ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಭೀಮಣ್ಣ ಸಂದಿಮನಿ, ಪ್ರವೀಣ ಹಿರೇಮಠ, ಸಂಜು ಬಡಿಗೆರ, ಕೋಟ್ರೇಶ ಸಂದಿಮನಿ, ಕಿರಣ ಧಾರವಾಡ, ಪ್ರವೀಣ ಬಿ, ಶಿವಶಂಕರ, ನಾಗರಾಜ, ಶರಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement