23ರಂದು ನವೋದಯ ಪ್ರವೇಶ ಪರೀಕ್ಷೆ
ಹಾವೇರಿ: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ, ಶಿಕ್ಷಣ ಇಲಾಖೆಯಿಂದ ನಡೆಸಲ್ಪಡುವ ಹಾನಗಲ್ಲ ಸಮೀಪದ ಮಹಾರಾಜಪೇಟ ಜವಾಹರ ನವೋದಯ ವಿದ್ಯಾಲಯದಲ್ಲಿ 2013-14ನೇ ಸಾಲಿಗೆ 9ನೇ ತರಗತಿಯಲ್ಲಿ ಖಾಲಿ ಇರುವ ಏಳು (7) ಸೀಟುಗಳ ಭರ್ತಿಗೆ ಜೂ. 23ರಂದು ಬೆಳಗ್ಗೆ 9.30ಕ್ಕೆ ಹಾನಗಲ್ಲ ತಾಲೂಕು ಮಹಾರಾಜಪೇಟೆಯ ಜವಾಹರ ನವೋದಯ ವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆ ನಡೆಯುವುದು. ಪ್ರವೇಶ ಪತ್ರಗಳನ್ನು ಪಡೆಯದೇ ಇದ್ದ ಅಭ್ಯರ್ಥಿಗಳು ಜವಾಹರ ನವೋದಯ ವಿದ್ಯಾಲಯ, ಮಹರಾಜಪೇಟ ತಾ. ಹಾನಗಲ್ಲ ಜಿ. ಹಾವೇರಿ ಇಲ್ಲಿ ಖುದ್ದಾಗಿ ಪಡೆಯಬೇಕೆಂದು ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.