ಜನಸಂಪರ್ಕ ಕಚೇರಿ ಸದುಪಯೋಗಪಡಿಸಿಕೊಳ್ಳಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜೂ. 20
ಸಾರ್ವಜನಿಕರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮತ್ತು ಮನವಿ ಸಲ್ಲಿಸಲು ಶಾಸಕರ ಜನಸಂಪರ್ಕ ಕಚೇರಿ ಜನತೆಗೆ ಮುಕ್ತವಾಗಿದೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಜನತಾ ಪಕ್ಷ ತಾಲೂಕು ಅಧ್ಯಕ್ಷ ಮಹೇಶ ಗುಬ್ಬಿ ಕರೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನೂತನವಾಗಿ ಜನಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಶಾಸಕರು ಜನತೆಗೆ ತಮ್ಮ ಸಮಸ್ಯೆಗಲನ್ನು ಆಲಿಸಲು ಜನಸಂಪರ್ಕ ಕಚೇರಿಯ ಅಗತ್ಯವಿತ್ತು ಆ ನಿಟ್ಟಿನಲ್ಲಿ ಆರಂಭವಾದ ಜನಸಂಪರ್ಕ ಕಚೇರಿಯ ಸದಾ ತೆರೆದ ಬಾಗಿಲಾಗಿದ್ದು, ತಮ್ಮ ಸಮಸ್ಯೆಗಳ ಸಲಹೆ, ಸೂಚನೆಗಳ ಕುರಿತು ಚರ್ಚಿಸಲು ಉತ್ತಮ ವೇದಿಕೆಯಾಗಿದೆ ಹಾಗೂ ಮುಕ್ತವಾಗಿದೆ ಎಂದು ತಿಳಿಸಿದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಜನಸಂಪರ್ಕ ಕಚೇರಿಯು ತಾಲೂಕಿನ ಎಲ್ಲ ಜನತೆಯ ಸಮಸ್ಯೆಗಳನ್ನು ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಿದೆ. ತಾವು ತಾಲೂಕು ಕೇಂದ್ರದಲ್ಲಿದ್ದಾಗ ಜನಸಂಪರ್ಕ ಕಚೇರಿಯಲ್ಲಿರುತ್ತೇನೆ.
ಜನತೆ ತಮ್ಮ ಕುಂದು-ಕೊರತೆಗಳನ್ನು ಅರ್ಜಿಗಳ ಮೂಲಕ ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದರು.
ತಾವಿಲ್ಲದ ಸಮಯ ತಾಲೂಕು ಕಚೇರಿಯಲ್ಲಿ ನೇಮಿಸಿದ ಸಿಬ್ಬಂದಿ ಇರುತ್ತಾರೆ. ಅವರಲ್ಲಿ ತಮ್ಮ ಅಜಿಂ ಸಲ್ಲಿಸಬಹುದಾಗಿದೆ. ಇಂದಿನಿಂದಲೇ ಜನಸಂಪರ್ಕ ಕಚೇರಿ ತನ್ನ ಕಾರ್ಯ ಆರಂಭಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭ ಮಾಜಿ ವಿಧಾನಸಭಾಧ್ಯಕ್ಷ ಬಿ.ಜಿ. ಬಣಕಾರ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಗದಿಗೆವ್ವ ಬಿದರಿ, ಸ್ಥಾಯಿ ಸಮೀತಿ ಅಧ್ಯಕ್ಷ ಚಂದ್ರು ಅಣ್ಣಪ್ಪನವರ, ಜಿಪಂ ಸದಸ್ಯರಾದ ಶಾಂತವ್ವ ಹಾದಿಮನಿ, ಸುಜಾತಾ ಕೊಟಗಿಮನಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಗೀತಾ ನಿಂಗಪ್ಪ, ದಂಡಗಿಹಳ್ಳಿ, ಮಮತಾ ಪಿ. ಮಳವಳ್ಳಿ, ಮುಜೀಬರಿ ಕಾರ್ಟಿ, ರಘು ಮಾಳಮ್ಮನವರ, ತಾಪಂ ಸದಸ್ಯೆ ಪ್ರಭಾವತಿ ಕುಲಕರ್ಣಿ, ಶೀಲಮ್ಮ ತುಮ್ಮನಿಕಟ್ಟಿ, ಸುನಿತಾ ಕೊಡ್ಲೇರ, ರೇಣುಕಾ ಚಲುವಾದಿ, ಅನ್ನಪೂರ್ಣ ಗಾಳಿ , ಆರ್.ಎನ್. ಗಂಗೋಳ, ಸೋಮಪ್ಪ ಶಿದ್ಲಂಗಪ್ಪನವರ, ಶಿವಣ್ಣ ಗಡಿಯಣ್ಣನವರ, ಬಸವಂತಪ್ಪ ದೊಡ್ಮನಿ, ನಾಗರತ್ನ ಕಂಕನವರ, ಮುಖಂಡರಾದ ಆನಂದಪ್ಪ ಹಾದಿಮನಿ, ಹನುಮಂತಗೌಡ ಮಕರಿ, ಷಣ್ಣುಖ ಮಳಿಮಠ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಮಲ್ಲಿಕಾರ್ಜುನ ಮಾಳಿಗೇರ ಇನ್ನಿತರರಿದ್ದರು.