ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಿಆರ್‌ಪಿ ಚೌವಡಣ್ಣನವರಗೆ ಸನ್ಮಾನ

Lingaraj Badiger
Updated On : 21 Jun 2013, 11:53 am

ರಾಣಿಬೆನ್ನೂರು: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಾ ಪರಿಷತ್ ಬೆಂಗಳೂರು, ಜಿಲ್ಲಾ ಶಿಕ್ಷಕರ ಪ್ರತಿಭಾ ಪರಿಷತ್ ಬೆಳಾವಿ, ತಾಲೂಕು ಘಟಕ ಚಿಕ್ಕೂಡಿ ಆಶ್ರಯದಲ್ಲಿ ಕಳೆದ ತಿಂಗಳು ನಡೆಸಿದ ಕಾರ್ಯಕ್ರಮದಲ್ಲಿ ಅತ್ತುತ್ತಮ ಸಿಆರ್‌ಪಿ ಪ್ರಶಸ್ತಿಗೆ ಪಾತ್ರರಾಗಿದ್ದ ಎನ್.ಎಂ. ಚೌಡಣ್ಣನವರನ್ನು ರಾಣಿಬೆನ್ನೂರು ತಾಲೂಕು ಸಾಹಿತ್ಯ ಪರಿಷತ್ ಸನ್ಮಾನಿಸಿತು.
ಸನ್ಮಾನ ಸ್ವಿಕರಿಸಿದ ಸಿಆರ್‌ಪಿ ಚೌವಡಣ್ಣನವರ ಮಾತನಾಡಿ, ಶಿಕ್ಷಕರಾಗಿ ಸೇವೆ ಸಲ್ಲಿಸಿದ ದಿನಗಳಲ್ಲಿ ಹಾಗೂ ಸಿಆರ್‌ಪಿಯಾಗಿ ಸೇವೆ ಸಲ್ಲಿಸುತ್ತಿರುವ ದಿನಗಳಲ್ಲಿ ತಾವು ಅನುಭವಿಸಿದ ನೋವು ಹಾಗೂ ಸಿಹಿ-ಕಹಿ ಘಟನೆಗಳ ಕುರಿತು ಅಭಿಪ್ರಾಯ ಹಂಚಿಕೊಂಡರು.
ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಸಂಗಾಪುರ, ಪ್ರಭುಲಿಂಗಪ್ಪ ಹಲಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಲಕ್ಷ್ಮಣ, ಪುಟ್ಟಯ್ಯನಮಠದ ಗುರುಬಸವ ಸ್ವಾಮೀಜಿ, ವಿವೇಕಾನಂದಾಶ್ರಮದ ಪ್ರಕಾಶಾನಂದಜಿ ಮಹಾರಾಜ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಎನ್. ಪಾಟೀಲ ಉಪಸ್ಥಿತರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement