ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕುರುಬ ಸಂಘದ ಗ್ರಾಮ ಘಟಕ ರಚನೆ: ನಿರ್ಣಯ

Lingaraj Badiger
Updated On : 25 Jun 2013, 10:51 am

ಹಾನಗಲ್ಲ: ತಾಲೂಕಿನಾದ್ಯಂತ ಗ್ರಾಮ ಘಟಕಗಳ ರಚನೆ ಮೂಲಕ ಕುರುಬ ಸಮಾಜ ಸಂಘಟನೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಹಾನಗಲ್ಲಿನಲ್ಲಿ ಸೋಮವಾರ ನಡೆದ ಕರ್ನಾಟಕ ಪ್ರದೇಶ ಕುರುಬ ಸಂಘ ಮತ್ತು ಕುರುಬ ನೌಕರರ ಸಂಘದ ತಾಲೂಕು ಘಟಕದ ಸಭೆಯಲ್ಲಿ ಚರ್ಚಿಸಲಾಯಿತು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ ಪತ್ರ, ಅಧಿಕಾರ ಹಸ್ತಾಂತರ ಮತ್ತು ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡ ಮನೋಹರ ತಹಶೀಲ್ದಾರ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಜು.7ರಂದು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ ಇಲ್ಲಿನ ತಾರಕೇಶ್ವರ ದೇವಸ್ಥಾನದಿಂದ ಕುರುಬಗೇರಿ ಮಾರ್ಗದ ಕಾಂಕ್ರೀಟ್ ರಸ್ತೆಗೆ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಮಾಡುವ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರದೇಶ ಕುರುಬರ ಸಂಘದ ತಾಲೂಕು ಘಟಕದ ಅಧ್ಯಕ್ಷ ದಾನಪ್ಪ ಗಂಟೇರ, ಹಾನಗಲ್ಲಿನ ಕನಕದಾಸ ಉದ್ಯಾನದಲ್ಲಿ ಸ್ಥಾಪಿಸಲಾದ ಕನಕದಾಸರ ಕಲ್ಲಿನ ಮೂರ್ತಿಯನ್ನು ಬದಲಾಯಿಸಿ ಇದೇ ಸ್ಥಳದಲ್ಲಿ ಕನಕದಾಸರ ದೊಡ್ಡ ಗಾತ್ರದ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಬೇಕು. ಈ ಕಾರ್ಯಕ್ಕಾಗಿ ಕುರುಬ ಸಂಘಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ತಾಲೂಕು ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡ ಏಳುಕೋಟೆಪ್ಪ ಹಾವಳೇರ ಹಾಗೂ ಸುರೇಶ ದೊಡ್ಡಕುರುಬರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಹೇಶ ಪವಾಡಿ ಪ್ರಾಸ್ತಾವಿಕ ಮಾತನಾಡಿದರು. ಸಮಾಜದ ಹಿರಿಯರಾದ ಬಸಪ್ಪ ಹೊಸಮನಿ, ಭೀಮಪ್ಪ ಅಗಸಿಬಾಗಿಲ, ಸುರೇಶ ಮುದುಕಣ್ಣನವರ, ಮಲ್ಲೇಶಪ್ಪ ಕೊಣನಕೇರಿ, ಮಲ್ಲೇಶ ವಗ್ಗಣ್ಣನವರ, ನಿಂಗಪ್ಪ ಕೊಣನಕೇರಿ, ಜಿ.ಬಿ. ದೇಸಾಯಿ, ಪರಶುರಾಮ ಡೊಳ್ಳೇಶ್ವರ, ವಿನಾಯಕ ಕುರುಬರ, ನಿಂಗಪ್ಪ ಗಾಜಿಯವರ, ಪರಶುರಾಮ ಡೊಳ್ಳೇಶ್ವರ, ಲಕ್ಷ್ಮಣ ಬೈರಣ್ಣನವರ, ಪ್ರಕಾಶ ವಗ್ಗಣ್ಣನವರ, ಕುಮಾರ ಹೊಸಮನಿ ಹಾಜರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement